Pushpa 2 Released: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಹಾಗೂ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಪುಷ್ಪ 2' (Pushpa 2) ಸಿನಿಮಾ ಇಂದು (ಡಿ. 5) ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಮೊದಲ ದಿನದ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಚಿತ್ರ ಚೆನ್ನಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಒಂದೆಡೆ ಅದ್ಧೂರಿ ಬಿಡುಗಡೆ ಕಂಡಿರುವ ಸಿನಿಮಾಗೆ ಕರ್ನಾಟಕದಲ್ಲಿ ಹಿನ್ನಡೆ ದೊರಕಿದ್ದು, ಅವಧಿ ಮೀರಿದ ಶೋಗಳನ್ನು ಸರ್ಕಾರ ರದ್ದುಗೊಳಿಸಿ, ಕನ್ನಡ ಚಿತ್ರಗಳಿಗೆ ಸಿಗಬೇಕಾದ ಮನ್ನಣೆಯನ್ನು ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ತೆಲಂಗಾಣದ ಹೆಸರಾಂತ ಮಲ್ಟಿಪ್ಲೆಕ್ಸ್ನಲ್ಲಿ ಪುಷ್ಪ 2 ಪ್ರದರ್ಶನಕ್ಕೆ ಸ್ಥಾನವೇ ನೀಡಿಲ್ಲ ಎಂಬ ಸುದ್ದಿ ಇದೀಗ ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಮೊದಲು ಸಂಚು ರೂಪಿಸಿದ್ದು ಸಲ್ಮಾನ್ಗೆ ಆದ್ರೆ ಬಲಿಯಾಗಿದ್ದು ಬಾಬಾ ಸಿದ್ದಿಕಿ! ಹಂತಕರು ಬಿಚ್ಚಿಟ್ರು ಸ್ಪೋಟಕ ಸತ್ಯ | Salman
ಭಾರತೀಯ ಬಾಕ್ಸ್ ಆಫೀಸ್ ಚಿಂದಿ ಮಾಡಲಿದೆ ಎಂದು ಭಾರೀ ನಿರೀಕ್ಷೆಯನ್ನು ಮೂಡಿಸಿರುವ 'ಪುಷ್ಪ 2' ಚಿತ್ರವನ್ನು ಹೈದರಾಬಾದ್ನ ಹೆಸರಾಂತ ಪ್ರಸಾದ್ ಮಲ್ಟಿಪ್ಲೆಕ್ಸ್ನಲ್ಲಿ ಅಲ್ಲು ಅರ್ಜುನ್ ಸಿನಿಮಾವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪುಷ್ಪ 2 ಸಿನಿಮಾವನ್ನು ತಮ್ಮ ಸ್ಕ್ರೀನ್ನಲ್ಲಿ ಹಾಕಲು ಮ್ಯಾನೇಜ್‌ಮೆಂಟ್ ಒಪ್ಪಿಗೆ ನೀಡದೆ, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವನ್ನು ತಿರಸ್ಕರಿಸಿದೆ. ಇದು ಸಿನಿ ಪ್ರಿಯರಿಗೆ ದೊಡ್ಡ ಶಾಕ್ ನೀಡಿದ್ದು, ನೆಚ್ಚಿನ ಚಿತ್ರಮಂದಿರದಲ್ಲಿ ತಾವು ಇಚ್ಛಿಸಿದ ಚಿತ್ರವನ್ನು ನೋಡುವ ಭಾಗ್ಯವಿಲ್ಲ ಎಂಬ ಬೇಸರವನ್ನು ಹೊರಹಾಕಿದ್ದಾರೆ.
ಸಿನಿಮಾ ಹಾಕುವ ವಿಚಾರದಲ್ಲಿ ಚಿತ್ರದ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಮ್ಯಾನೇಜ್‌ಮೆಂಟ್ ನಡುವಿನ ಚರ್ಚೆಗಳು ವಿಫಲವಾಗಿದ್ದು, ಇದು ಪ್ರೀಮಿಯರ್‌ಗಳನ್ನು ರದ್ದುಗೊಳಿಸಲು ಕಾರಣವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಈಗಲೂ ಸಹ ಟಿಕೆಟ್ ಬುಕಿಂಗ್ ಚೆಕ್ ಮಾಡುತ್ತಿರುವ ಪ್ರೇಕ್ಷಕರಿಗೆ ಬುಕ್ಕಿಂಗ್ ಲಭ್ಯವಿಲ್ಲ. ಈ ವಿಷಯ ಉತ್ಸಾಹಿ ಸಿನಿಮಾ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಚಿತ್ರತಂಡ ಮತ್ತು ಮಲ್ಟಿಪ್ಲೆಕ್ಸ್ ಮ್ಯಾನೇಜ್‌ಮೆಂಟ್ ನಡುವೆ ಇರುವ ವ್ಯಾಜ್ಯ ಶೀಘ್ರವೇ ಪರಿಹರಿಸಿಕೊಂಡು, ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಿ ಎಂದು ಸಿನಿಪ್ರಿಯರು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).