ಕಾರು ಪ್ರಿಯರನ್ನು ಅಚ್ಚರಿಗೊಳಿಸಿದ 'ಕ್ರಾಬ್-ವಾಕ್' ಮತ್ತು 'ಪಿವೋಟ್ ಟರ್ನ್' ಟೆಕ್ನಾಲಜಿ 
ನ್ಯೂಸ್

Crab walk car: ರಿವರ್ಸ್ ತಗೋಬೇಕಿಲ್ಲ, ಏಡಿಯಂತೆ ಸೈಡ್‌ಗೇ ಓಡುತ್ತೆ ಕಾರು: ಪಾರ್ಕಿಂಗ್ ಕಿರಿಕಿರಿಗೆ ಜಬರ್ದಸ್ತ್ ಪರಿಹಾರ!

ಚೀನಾದ ಚೆರಿ ಸಂಸ್ಥೆಯು ಏಡಿಯಂತೆ ನೇರವಾಗಿ ಪಕ್ಕಕ್ಕೇ ಚಲಿಸುವ ಮತ್ತು ಒಂದೇ ಜಾಗದಲ್ಲಿ ನಿಂತು ತಿರುಗುವ ಹೊಸ ಕಾರು ತಂತ್ರಜ್ಞಾನವನ್ನು ಪ್ರದರ್ಶಿಸಿದೆ. ಈ ತಂತ್ರಜ್ಞಾನದಿಂದಾಗಿ ಭವಿಷ್ಯದಲ್ಲಿ ಪಾರ್ಕಿಂಗ್ ಸಮಸ್ಯೆ ಶೇಕಡಾ 90 ರಷ್ಟು ಬಗೆಹರಿಯಲಿದೆ.

ಚೀನಾದಲ್ಲಿ ಏಡಿಯಂತೆ ಪಕ್ಕಕ್ಕೇ ಚಲಿಸುವ ಕಾರು ತಂತ್ರಜ್ಞಾನ ಪ್ರದರ್ಶನ

ಏಡಿಯಂತೆ ಪಕ್ಕಕ್ಕೇ ಚಲಿಸುವ ಮತ್ತು ಒಂದೇ ಜಾಗದಲ್ಲಿ ತಿರುಗುವ ವೈಶಿಷ್ಟ್ಯ

ಕಾರಿನ ನಾಲ್ಕೂ ಚಕ್ರಗಳನ್ನು ಸ್ವತಂತ್ರವಾಗಿ ನಿಯಂತ್ರಿಸುವ ವ್ಯವಸ್ಥೆ

Car Technology: ಮಾರುಕಟ್ಟೆಗೆ ಬರುವ ಹೊಸ ನಮೂನೆಯ ಕಾರುಗಳು ಗ್ರಾಹಕರನ್ನು ದಿನದಿಂದ ದಿನಕ್ಕೆ ಅಚ್ಚರಿಗೊಳಿಸುತ್ತಿವೆ. ಈಗಿನ ಕಾರುಗಳು ಸಾಮಾನ್ಯ ಕಾರುಗಳಂತೆ ಬರೀ ಮುಂದೆ-ಹಿಂದೆ ಹೋಗುವುದಷ್ಟೇ ಅಲ್ಲ, ಏಡಿಗಳಂತೆ ನೇರವಾಗಿ ಪಕ್ಕಕ್ಕೇ ಚಲಿಸುವ (Crab-walk) ಹಾಗೂ ಇದ್ದಲ್ಲೇ 360 ಡಿಗ್ರಿ ತಿರುಗುವ (Pivot Turn) ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿವೆ.

ಚೀನಾದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ 'ಚೆರಿ' (Chery), ಇತ್ತೀಚೆಗೆ 'ಫ್ಲೈಯಿಂಗ್ ಫಿಶ್ ಇಂಟೆಲಿಜೆಂಟ್ ಚಾಸಿಸ್' ಎಂಬ ಹೊಸ ತಂತ್ರಜ್ಞಾನವನ್ನು ಜಗತ್ತಿಗೆ ಪ್ರದರ್ಶಿಸಿದೆ.

ಏನಿದು ಹೊಸ ತಂತ್ರಜ್ಞಾನ?

ಈ ತಂತ್ರಜ್ಞಾನವನ್ನು ಚೆರಿ ಎಕ್ಸೀಡ್ (Chery Exeed) ಎಸ್‌ಯುವಿ ಕಾರಿನಲ್ಲಿ ಪ್ರದರ್ಶಿಸಲಾಗಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಕಾರಿನ ನಾಲ್ಕೂ ಚಕ್ರಗಳು ಸ್ವತಂತ್ರವಾಗಿ ತಿರುಗುತ್ತವೆ. ಹೀಗಾಗಿ, ಕಾರು ಬದಿಗೆ ಓಡುವುದಲ್ಲದೆ, ಎಷ್ಟೇ ಇಕ್ಕಟ್ಟಾದ ಜಾಗದಲ್ಲೂ ಸುಲಭವಾಗಿ ತಿರುಗುತ್ತದೆ.

ಇದೇ ಮೊದಲೇನಲ್ಲ

ಅಂದಹಾಗೆ, ಈ ರೀತಿಯ ತಂತ್ರಜ್ಞಾನ ಜಗತ್ತಿಗೆ ತೀರಾ ಹೊಸದೇನೂ ಅಲ್ಲ. ಇದಕ್ಕೂ ಮುನ್ನವೇ ಪ್ರಸಿದ್ಧ ಹುಂಡೈ (Hyundai) ಸಂಸ್ಥೆಯು ತನ್ನ 'ಮೋಬಿಸ್ ಇ-ಕಾರ್ನರ್ ಸಿಸ್ಟಮ್' ಮೂಲಕ ಐಯಾನಿಕ್ 5 (Ioniq 5) ಕಾರಿನಲ್ಲಿ ಚಕ್ರಗಳನ್ನು 90 ಡಿಗ್ರಿ ತಿರುಗಿಸಿ, ಪಕ್ಕಕ್ಕೇ ಪಾರ್ಕ್ ಮಾಡುವ ಅದ್ಭುತ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತ್ತು.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭೀಕರ ಮೆಟ್ರೋ ದುರಂತ: ಹಳಿಗೆ ಬಿದ್ದ ಕ್ರೇನ್‌ಗೆ ಡಿಕ್ಕಿಯಾದ ಚಾಲಕರಹಿತ ರೈಲು! | Brazil Metro Accident

ಭಾರತಕ್ಕೆ ಎಷ್ಟು ಉಪಯುಕ್ತ?

ಬೆಂಗಳೂರು, ದೆಹಲಿ, ಮುಂಬೈನಂತಹ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಮತ್ತು ಪಾರ್ಕಿಂಗ್ ದೊಡ್ಡ ಕಿರಿಕಿರಿಯಾಗಿದೆ. ಭವಿಷ್ಯದಲ್ಲಿ ಇಂತಹ ಟೆಕ್ನಾಲಜಿ ಭಾರತಕ್ಕೆ ಬಂದರೆ ಪಾರ್ಕಿಂಗ್ ಸಮಸ್ಯೆಯನ್ನು ಶೇಕಡಾ 90 ರಷ್ಟು ಕಡಿಮೆ ಮಾಡಬಹುದು. ಪ್ರಸ್ತುತ ಈ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಪರೀಕ್ಷಾರ್ಥ ಹಂತದಲ್ಲಿದ್ದು, ಕೆಲವು ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಕಾರುಗಳಿಗೂ ಈ ವ್ಯವಸ್ಥೆ ಬರುವ ಸಾಧ್ಯತೆ ಇದೆ.