ನ್ಯೂಸ್

ತಮಿಳು, ತೆಲುಗಿನಲ್ಲಿ ಸಿಗುವಂತ ಪಾತ್ರಗಳು ಈ ಚಿತ್ರರಂಗದಲ್ಲಿ ಸಿಗ್ತಿಲ್ಲ: ನಟಿ ಐಶ್ವರ್ಯಾ ಲಕ್ಷ್ಮಿ

ಕೇರಳ: ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವ ನಟಿ ಐಶ್ವರ್ಯಾ ಲಕ್ಷ್ಮಿ, ಚಿತ್ರರಂಗದಲ್ಲಿ ತಮ್ಮ ಪಾತ್ರಗಳು ಮತ್ತು ಆಯ್ಕೆ ವಿಧಾನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿ ಹಲವು ವಿಷಯಗಳನ್ನು ಹಂಚಿಕೊಂಡ ನಟಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಗುವ ಮಹಿಳಾ ಆಧರಿತ ಪಾತ್ರಗಳು ಚೆನ್ನಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಾನು ಮಲಯಾಳಂ ಚಿತ್ರರಂಗದ ಭಾಗವಾಗಿ ಏಳು ವರ್ಷಗಳೇ ಕಳೆದಿವೆ. ನನ್ನ ಸ್ಥಳೀಯ ಭಾಷೆಯಲ್ಲಿ ಕೆಲಸ ಮಾಡಲು ನಾನು ಹೆಚ್ಚು ಉತ್ಸುಕಳಾಗಿದ್ದೇನೆ ಹೊರತು ಖ್ಯಾತಿ ಅಥವಾ ಸಂಭಾವನೆಗಾಗಿ ಅಲ್ಲ. ಬದಲಿಗೆ ನನ್ನ ಸಂಪೂರ್ಣ ಸಂತೋಷಕ್ಕೆ. ಒಳ್ಳೆಯ ಸ್ತ್ರೀಪಾತ್ರವಿರುವ ಕಥೆಯನ್ನು ಕೇಳಿಯೇ ಬಹಳ ವರ್ಷಗಳಾಯಿತು. ನನ್ನ ಕಣ್ಣ ಮುಂದೆ ಆ ರೀತಿಯ ಸ್ಕ್ರಿಪ್ಟ್​ ಯಾವುದು ಇಲ್ಲಿಯವರೆಗೆ ಬಂದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ತಮಿಳು ಮತ್ತು ತೆಲುಗು ಉದ್ಯಮಗಳಲ್ಲಿ ನನಗೆ ಉತ್ತಮ ಹಾಗೂ ಹೆಚ್ಚು ಕ್ರಿಯಾತ್ಮಕ ಪಾತ್ರಗಳನ್ನು ನೀಡಲಾಗಿದೆ" ಎಂದಿದ್ದಾರೆ.

"ಇದು ನಟನಾಗಿ ನನ್ನಲ್ಲಿರುವ ಆಸಕ್ತಿಯ ಕೊರತೆಯೋ ಅಥವಾ ಬರವಣಿಗೆಯಲ್ಲಿರುವ ಸಮಸ್ಯೆಯೋ ಎಂಬುದು ನನಗೆ ತಿಳಿದಿಲ್ಲ. ಆದರೆ ಅರ್ಥಪೂರ್ಣ ಸ್ತ್ರೀ ಪಾತ್ರಗಳನ್ನು ರೂಪಿಸುವಲ್ಲಿ ಅವರಿಗೆ ಕಡಿಮೆ ಗಮನವಿದೆ ಎಂಬುದು ಮಾತ್ರ ಸ್ಪಷ್ಟವಾಗಿ ಗೊತ್ತಾಗಿದೆ. ಕೆಲವೊಮ್ಮೆ, ಬರಹಗಾರರಿಗೆ ಸ್ತ್ರೀ ಸ್ನೇಹಿತರೇ ಇಲ್ವಾ ಎಂದು ನಾನು ಆಶ್ಚರ್ಯ ಪಟ್ಟಿದ್ದು ಉಂಟು. ನಿಜವಾಗಿಯೂ ಇಲ್ಲಿ ಮಹಿಳಾ ಪ್ರಧಾನ ಪಾತ್ರಗಳು ಕಡಿಮೆ ಇವೆ" ಎಂದು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).