ದೇವರಾಜ್ ಎಲ್. ಬೆಂಗಳೂರು
ಕನಿಷ್ಟ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಒಂದು ವಿಷಯಕ್ಕೆ ಪ್ರವೇಶ ಬಯಸಿದರೆ, ಆ ವಿಷಯವನ್ನು ವಿದ್ಯಾರ್ಥಿಗಳೇ ಸ್ವಯಂ ಅಧ್ಯಯನ ಮಾಡಿಕೊಳ್ಳಬೇಕು. ಈ ವಿಚಾರವನ್ನು ಪ್ರವೇಶ ಪಡೆಯುವ ವೇಳೆಯೇ ವಿದ್ಯಾರ್ಥಿ ಮತ್ತು ಪಾಲಕರಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ 430 ಸರ್ಕಾರಿ ಕಾಲೇಜುಗಳಿದ್ದು, ಪ್ರತಿವರ್ಷ 3 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಕೆಲ ವಿಷಯಗಳಿಗೆ ವಿದ್ಯಾರ್ಥಿಗಳು ಕಡಿಮೆ ಪ್ರವೇಶ ಪಡೆಯುತ್ತಿದ್ದು, ಇದನ್ನು ನಡೆಸುವುದಕ್ಕೆ ತರಗತಿ ಮತ್ತು ಉಪನ್ಯಾಸಕರನ್ನು ನೇಮಕ ಮಾಡುವುದು ವ್ಯರ್ಥದ ಕೆಲಸ ಎಂಬುದು ಇಲಾಖೆಯ ಆಲೋಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
5 ರಿಂದ 15 ಕನಿಷ್ಟ: ಐಚ್ಛಿಕ ಕನ್ನಡ ಒಳಗೊಂಡ ಕಾಂಬಿನೇಷನ್ಗೆ ವಿದ್ಯಾರ್ಥಿ ಪ್ರವೇಶಾತಿ ಮಿತಿಯನ್ನು ಕನಿಷ್ಟ 5 ಎಂದು ಪರಿಗಣಿಸಿದೆ. ಇನ್ನೂ ಗೃಹ ವಿಜ್ಙಾನ ಮತ್ತು ಅದರ ಉಪವಿಭಾಗಗಳು, ಸಂಗೀತ, ಭೂವಿಜ್ಙಾನ, ಎಲೆಕ್ಟಾŠನಿಕ್ಸ್, ಸಂಖ್ಯಾಶಾಸ್ತŠ, ಮಹಿಳಾ ಅಧ್ಯಯನ, ಅಪರಾಧಶಾಸ್ತŠ, ಪತ್ರಿಕೋದ್ಯಮ ಈ 8 ವಿಷಯಗಳಲ್ಲಿ ಒಂದು ಕಾಂಬಿನೇಷನ್ಗೆ ವಿದ್ಯಾರ್ಥಿ ಪ್ರವೇಶಾತಿ ಮಿತಿ ಕನಿಷ್ಟ 10 ಎಂದು ಹೇಳಿದೆ. ಅಂತಿಮ ವರ್ಷದ 5 ಮತ್ತು 6ನೇ ಸೆಮಿಸ್ಟರ್ ಎಲೆಕ್ಟಿವ್ ಪತ್ರಿಕೆಗಳಲ್ಲಿ ಪ್ರತಿಯೊಂದಕ್ಕೂ ಕನಿಷ್ಟ 15 ವಿದ್ಯಾರ್ಥಿಗಳು ಇರಬೇಕು. 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾರ್ಯಭಾರ ತೋರಿಸಿದ್ದಲ್ಲಿ ಸಂಬಂಧಿಸಿದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ನೇರ ಹೊಣೆಯಾಗಿರುತ್ತಾರೆ.
ಉಪನ್ಯಾಸಕರಿಗೆ ನಿಯಮಾನುಸಾರ ಕಾರ್ಯಭಾರ ಹಂಚಿಕೆ ಮಾಡಿದ ನಂತರ 4 ಗಂಟೆಗಳಿಗಿಂತ ಉಳಿಕೆ ಕಾರ್ಯಭಾರವನ್ನು ಲಭ್ಯವಿರುವ ಉಪನ್ಯಾಸಕರಿಂದ ನಿರ್ವಹಿಸಲು ಕ್ರಮಕೊಳ್ಳಬೇಕೇ ಹೊರತು ಯಾವುದೇ ಕಾರಣಕ್ಕೂ ಈ ಉಳಿಕೆ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದ ಪಕ್ಷದಲ್ಲಿ ಹೊಸ ಕೋರ್ಸ್, ಕಾಂಬಿನೇಷನ್, ವಿಭಾಗವನ್ನು ತೆರೆಯದೆ ಕಾಲೇಜಿನಲ್ಲಿ ಹಾಲಿ ಲಭ್ಯವಿರುವ ಕೋರ್ಸ್, ಕಾಂಬಿನೇಷನ್, ವಿಭಾಗದಲ್ಲೇ ಪ್ರವೇಶಾತಿ ಮಾಡಿಕೊಳ್ಳಬೇಕಿದೆ.
ಪ್ರವೇಶ ಹೆಚ್ಚಳ ಮಾಡಿ: ಕಳೆದ ಶೈಕ್ಷಣಿಕ ವರ್ಷದಲ್ಲಿ 200ಕ್ಕಿಂತ ಕಡಿಮೆ ಪ್ರವೇಶಾತಿಯಾದ ಕಾಲೇಜುಗಳ ಪ್ರಾಂಶುಪಾಲರು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶವನ್ನು ಹೆಚ್ಚಳ ಮಾಡುವ ಬಗ್ಗೆ ಗಮನನೀಡಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕೆ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಹಕಾರ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಪ್ರವೇಶಾತಿ ಹೆಚ್ಚಳಕ್ಕೆ ತಗಲುವ ವೆಚ್ಚವನ್ನು ಅರೆ ಸರ್ಕಾರಿ ಖಾತೆ ಅಥವಾ ಕಾಲೇಜು ಅಭಿವೃದ್ಧಿ ಸಮಿತಿ ಖಾತೆಯಿಂದ ನಿಯಮಾನುಸಾರ ವೆಚ್ಚ ಮಾಡಲು ಅವಕಾಶ ಕಲ್ಪಿಸಿದೆ. ಅಲ್ಲದೆ, ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಸ್ಥಗಿತವಾಗಿರುವ ಕೋರ್ಸ್ಗಳನ್ನು ಪುನಶ್ಚೇತನಗೊಳಿಸುವ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕು.