ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ (Bihar Election) ಪ್ರಚಾರ ಅಭಿವೃದ್ಧಿ, ಮಹಿಳೆಯರು ಮತ್ತು ಯುವಕರ ಸುತ್ತ ಕೇಂದ್ರೀಕೃತವಾಗಿದ್ದು, ಇತ್ತ ಗಯಾದಿಂದ 150 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳಲ್ಲಿ ಅಭಿವೃದ್ಧಿ ಎನ್ನುವುದು ಇಲ್ಲಿಯವರೆಗೆ ಮರೀಚಿಕೆಯಾಗಿಯೆ ಉಳಿದಿದೆ.
ಕಳೆದ 77 ವರ್ಷಗಳಿಂದ ಅನೇಕ ತಲೆಮಾರುಗಳು ಪತ್ರಾ, ಹೆರ್ಹಂಜ್ ಮತ್ತು ಕೆವಾಲ್ದಿಹ್‌ನ 8,000 ಕ್ಕೂ ಹೆಚ್ಚು ಗ್ರಾಮಸ್ಥರ ಮೋರ್ಹರ್ ನದಿಯ ಸೇತುವೆ ಕನಸು, ಇಲ್ಲಿಯವರೆಗೆ ಕನಸಾಗಿಯೇ ಉಳಿದಿದೆ. ಈ ಹಿನ್ನಲೆಯಲ್ಲಿ ಗಟ್ಟಿ ನಿಲುವು ತಳೆದಿರುವ ಸುತ್ತಮುತ್ತಲಿನ ಗ್ರಾಮದ ಜನ ಸೇತುವೆ ನಿರ್ಮಾಣವಾಗುವವರೆಗೆ ನಾವು ಮತ ಚಲಾಯಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ಇವು ನಿಮ್ಮ ಪಾಸ್ವರ್ಡ್ ಆಗಿದ್ರೆ ಈ ಕೂಡಲೇ ಚೇಂಜ್ ಮಾಡಿಕೊಳ್ಳಿ ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ! Passwords
77 ವರ್ಷಗಳಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದೇವೆ, ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಬರುತ್ತಾರೆ, ಪ್ರಚಾರ ಮಾಡುತ್ತಾರೆ ಹೋಗುತ್ತಾರೆ, ಆದರೆ, ಯಾರು ಕೂಡ ನಮ್ಮ ಮನವಿಯನ್ನು ಪರಿಗಣಿಸುತ್ತಲೇ ಇಲ್ಲ, ಮಳೆಗಾಲದ ಸಂದರ್ಭದಲ್ಲಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತದೆ, ಕೆಲವೊಮ್ಮೆ ಭುಜದವರೆಗೆ ಇರುತ್ತದೆ. ನಮ್ಮ ದೃಷ್ಠಿಯಲ್ಲಿ ಅಭಿವೃದ್ಧಿ ಎಂದರೆ ಅದು ಸೇತುವೆ ನಿರ್ಮಾಣ ಮಾತ್ರ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಪ್ರತಿ ವರ್ಷ ಸುಮಾರು ನಾಲ್ಕು ತಿಂಗಳುಗಳ ಕಾಲ ಸಂಪರ್ಕವೇ ಕಡಿತಗೊಂಡಿರುತ್ತವೇ, ಯಾವುದಾದರು ಕಾರಣಕ್ಕೆ ಬೇರೆ ಪ್ರದೇಶಕ್ಕೆ ಹೋಗಬೇಕಾಸದರೆ ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಎದೆ ಎತ್ತರದಷ್ಟಿರುವ ನೀರಿನಲ್ಲಿ ನಡೆದುಕೊಂಡು ಹೋಗಬೇಕು. ಪೋಷಕರು ಮಾರುಕಟ್ಟೆಗೆ ಹೋಗುವಂತಿಲ್ಲ, ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಿಲ್ಲ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ, ಇತ್ತ ರೋಗಿಗಳು ಆಸ್ಪತ್ರೆಗಳಿಗೆ ತೆರಳುವುದು ಕಷ್ಟವಾಗಿದೆ ಎಂದರು.
ಪತ್ರಾ ಗ್ರಾಮದ ಸುನಿಲ್ ವಿಶ್ವಕರ್ಮ ಎಂಬ ವ್ಯಕ್ತಿಗೆ, ಸೇತುವೆ ಮರುಜನ್ಮ ನೀಡಬಹುದಿತ್ತು, ಆದರೆ ಅದು ಸಾಧ್ಯವಾಗಲಿಲ್ಲ, ನದಿಯ ನೀರಿನ ಹರಿವಿನಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಆಂಬ್ಯುಲೆನ್ಸ್ ಇರಲಿಲ್ಲ, ಆದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ನಾವು ಖಾಸಗಿ ವಾಹನವನ್ನು ಬಾಡಿಗೆಗೆ ಪಡೆಯಬೇಕಾಯಿತು. ಆದರೆ ಆ ವಾಹನವು ನದಿಯ ಇನ್ನೊಂದು ಬದಿಯಲ್ಲಿತ್ತು, ಹೀಗಾಗಿ ನನ್ನ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಶ್ವಕರ್ಮರ ತಾಯಿ ನೋವಿನಿಂದ ಹೇಳಿದರು.
ಅದೆಷ್ಟೋ ಗರ್ಭಿಣಿಯರು ನದಿ ದಾಟಿದ ಬಳಿಕ 39 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗಳಿಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪುತ್ತಾರೆ. ಈ ವಿಷಯವಾಗಿ ನಾವು ಬಹಳಷ್ಟು ದೂರುಗಳನ್ನು ನೀಡಿದ್ದೇವೆ. ಪ್ರತಿ ವರ್ಷ ಮಳೆಗಾಲದಲ್ಲಿ ನಾವು ಇಲ್ಲಿ ಕನಿಷ್ಠ ಎರಡು ಜೀವಗಳನ್ನಾದರು ಕಳೆದುಕೊಳ್ಳುತ್ತೇವೆ. ಸುತ್ತ ಮುತ್ತ ಎಲ್ಲಾ ಕಡೆಗಳಲ್ಲಿ ಕಾಡುಗಳು ಮತ್ತು ನದಿ ಇರುವುದರಿಂದ ಇಲ್ಲಿ ಬದುಕುವುದೇ ದುಸ್ತರವಾಗಿದೆ ಎಂದು ಮತ್ತೊಬ್ಬ ಗ್ರಾಮಸ್ಥರು ಹೇಳಿದ್ದಾರೆ.(ಏಜೆನ್ಸೀಸ್)