ನ್ಯೂಸ್

ಗಡ್ಡವಿಲ್ಲದ ಗೆಳೆಯರು ಬೇಕು! ಬಿಯರ್ಡ್​ ಇದ್ರೆ ನಾವಂತೂ ಪ್ರೀತ್ಸಲ್ಲ..ಪಟ್ಟು ಹಿಡಿದ ಕಾಲೇಜು ಹುಡುಗಿಯರು No Beard...No Love

ಮದ್ಯಪ್ರದೇಶ: ಇತ್ತೀಚಿನ ದಿನಗಳಲ್ಲಿ ಕಾಲ ಬದಲಾದಂತೆ ಯುವಜನತೆಯ ಫ್ಯಾಷನ್ ಆದ್ಯತೆಗಳೂ ಬದಲಾಗುತ್ತಿವೆ. ಕೆಲವು ಹುಡುಗರು ಗಡ್ಡವನ್ನು ಬೆಳೆಸಿದರೆ, ಇತರರು ಕ್ಲೀನ್ ಶೇವ್ ಮಾಡಲು ಉತ್ಸುಕರಾಗಿದ್ದಾರೆ. ಮತ್ತು ಹುಡುಗಿಯರ ವಿಷಯಕ್ಕೆ ಬಂದರೆ, ಕೆಲವರು ಕ್ಲೀನ್ ಶೇವ್ ( No Beard...No Love) ಮಾಡಿದ ಹುಡುಗರಿಗೆ ಆದ್ಯತೆ ನೀಡುತ್ತಾರೆ, ಇತರರು ಗಡ್ಡವಿರುವ ಹುಡುಗರಿಗೆ ಆದ್ಯತೆ ನೀಡುತ್ತಾರೆ.ಇಂದೋರ್‌ನ ಕೆಲವು ಯುವ ಕಾಲೇಜು ಹುಡುಗಿಯರು ಈಗ ಹುಡುಗರ ಗಡ್ಡದ ಬಗ್ಗೆ ರ್ಯಾಲಿಯನ್ನು ಆಯೋಜಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

'ಗಡ್ಡವಿಲ್ಲದ ಗೆಳೆಯರು ಬೇಕು’ ಎಂದು ಯುವತಿಯರು ಈ ವಿನೂತನ ರ‍್ಯಾಲಿ ಆರಂಭಿಸಿದರು. ‘ಗಡ್ಡ ತೆಗೆಯಿರಿ.. ಪ್ರೀತಿ ಉಳಿಸಿ’ ಎಂಬ ಘೋಷಣೆಯೊಂದಿಗೆ ಯುವತಿಯರು ಮುಖಕ್ಕೆ ಗಡ್ಡ ಮೇಕಪ್ ಹಾಕಿಕೊಂಡು ರ‍್ಯಾಲಿ ನಡೆಸಿದರು.

ರ‍್ಯಾಲಿ ವೇಳೆ ಯುವತಿಯರು ಪ್ರದರ್ಶಿಸಿದ ಫಲಕಗಳಲ್ಲಿ “ಕ್ಲೀನ್ ಶೇವ್ ಇದ್ರೆ ನೋ ಲವ್”, “ನಮಗೆ ಗಡ್ಡವಿಲ್ಲದ ಗೆಳೆಯರು ಬೇಕು”,  ಎಂದು ಬರೆದಿತ್ತು. ರ‍್ಯಾಲಿಯ ವೀಡಿಯೊವನ್ನು 'ಎಕ್ಸ್' (ಟ್ವಿಟರ್) ಬಳಕೆದಾರರು ಪೋಸ್ಟ್ ಮಾಡಿದ್ದಾರೆ ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನೆಟಿಜನ್‌ಗಳು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

“ಅವರ ಬೇಡಿಕೆ ಸರಿಯಾಗಿದೆ. ವಾರಕ್ಕೊಮ್ಮೆಯಾದರೂ ಟ್ರಿಮ್ ಮಾಡಿ, ಕ್ಲೀನ್ ಶೇವ್ ಮಾಡಿಕೊಳ್ಳುವುದು ಒಳ್ಳೆಯದು. ಆಗ ನಾವು ಸಜ್ಜನರಂತೆ ಕಾಣುತ್ತೇವೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.“ಅವರ ಗಡ್ಡ, ಅವರ ಆಯ್ಕೆ. ನೀವು ಯಾಕೆ ಹೀಗೆ ಹೇಳುತ್ತೀರಾ?" ಮತ್ತೊಬ್ಬರು ಕಾಮೆಂಟ್​​ ಮಾಡಿದ್ದಾರೆ.