ಮೇಷ: ಮನೆಯಲ್ಲಿ ಗಡಿಬಿಡಿ ಹೆಚ್ಚಾಗುತ್ತದೆ. ತಾಳ್ಮೆ ಕಡಿಮೆ ಆಗುತ್ತದೆ. ಆದರೆ ಮಕ್ಕಳ ಮೇಲೆ ರೇಗಲು ಹೋಗದಿರಿ. ಅದೃಷ್ಟಸಂಖ್ಯೆ: 6
ವೃಷಭ: ನಿಮ್ಮದೇ ಆದ ಹಲವಾರು ರೀತಿಯ ಬೇಜವಾಬ್ದಾರಿತನಗಳಿಂದಾಗಿ ಸಿಗಲಿರುವಂಥ ಧನಲಾಭವು ಕೈ ತಪ್ಪುತ್ತದೆ. ಅದೃಷ್ಟಸಂಖ್ಯೆ: 9
ಮಿಥುನ: ನಿಮ್ಮಲ್ಲಿನ ಕಾರ್ಯದಕ್ಷತೆಯನ್ನು ಕಂಡು ಮೆಚ್ಚಿದ ಹಿರಿಯರು ನಿಮಗೆ ಹೆಚ್ಚಿನದಾದ ಜವಾಬ್ದಾರಿಯನ್ನು ನೀಡುತ್ತಾರೆ. ಅದೃಷ್ಟಸಂಖ್ಯೆ: 2
ಕಟಕ: ನಿಮ್ಮ ಕನಸಿನ ಯೋಜನೆಗಳಿಗೆ ಅನುಕೂಲ ಒದಗಿಸುವಂತಹ ದೂರಪ್ರಯಾಣವೊಂದು ಬೇಗನೆ ಒದಗಿಬರುತ್ತದೆ. ಅದೃಷ್ಟಸಂಖ್ಯೆ: 1
ಸಿಂಹ: ವಿವಾದಗಳ ಸಂಬಂಧವಾಗಿ ಸಂಧಾನ ಮಾಡಿಸಿಕೊಡಿ ಎಂದು ಕೇಳಲು ಬಳಗದವರು ನಿಮ್ಮ ಬಳಿಗೆ ಬರಲಿದ್ದಾರೆ. ಅದೃಷ್ಟಸಂಖ್ಯೆ: 7
ಕನ್ಯಾ: ಅನಿರೀಕ್ಷಿತವಾದ ತೊಂದರೆಗೆ ಒಳಗಾದ ನಿಮಗೆ ಅಪರಿಚಿತರೇ ಹೆಚ್ಚಿನ ಸಹಾಯ, ಸಹಕಾರವನ್ನು ನೀಡುತ್ತಾರೆ. ಅದೃಷ್ಟಸಂಖ್ಯೆ: 3
ತುಲಾ: ನಿಮ್ಮ ಮಾತುಗಳು ಅಪಾರ್ಥಕ್ಕೆ ದಾರಿ ಮಾಡಿಕೊಡಬಹುದು. ಹೀಗಾಗಿ ಅನಗತ್ಯ ಮಾತಾಡದೆ ಮೌನವಾಗಿರಿ. ಅದೃಷ್ಟಸಂಖ್ಯೆ: 5
ವೃಶ್ಚಿಕ: ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಿರುವ ಅನುಭವವಾಗಬಹುದು. ಆದರೆ ಬೇಸರಪಡದಿರಿ. ಅದೃಷ್ಟಸಂಖ್ಯೆ: 1
ಧನುಸ್ಸು: ಕೆಲವು ಕೆಲಸಕಾರ್ಯಗಳು ಬಹಳ ಸಲೀಸಾಗಿ ನೆರವೇರುತ್ತವೆ. ಕುಲದೇವತೆಯನ್ನು ಭಕ್ತಿಯಿಂದ ಧ್ಯಾನ ಮಾಡಿ. ಅದೃಷ್ಟಸಂಖ್ಯೆ: 4
ಮಕರ: ನಿಮಗೆ ಅತ್ಯಂತ ಪ್ರೀತಿಪಾತ್ರರಾದವರು ಭೇಟಿಯಾಗುತ್ತಾರೆ. ಹೊಸ ವಿಷಯಗಳ ಮಾಹಿತಿಯೂ ಸಿಗಬಹುದು. ಅದೃಷ್ಟಸಂಖ್ಯೆ: 6
ಕುಂಭ: ಕೆಲವರು ನಿಮ್ಮ ಮನಸ್ಸಿಗೆ ಬೇಸರ ಉಂಟಾಗುವಂತೆ ಮಾತನಾಡುತ್ತಾರೆ. ನಂತರ ಅವರೇ ಕ್ಷಮೆ ಕೇಳುತ್ತಾರೆ. ಅದೃಷ್ಟಸಂಖ್ಯೆ: 9
ಮೀನ: ಸುಳ್ಳು ಹೇಳಿದರೆ ಸಿಕ್ಕಿಬೀಳುವಿರಿ. ಆದರೆ ಸತ್ಯಸಂಗತಿಯನ್ನು ಹೇಳುವುದರಿಂದ ನಿಮಗೇನೂ ನಷ್ಟವಾಗದು. ಅದೃಷ್ಟಸಂಖ್ಯೆ: 3