ನ್ಯೂಸ್

ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದ್ದೆ ಆದ್ರೆ...: Nithya Menon

ಚೆನ್ನೈ: ಸೌತ್​ ಸಿನಿ ಇಂಡಸ್ಟ್ರಿಯ ದಿ ಮೋಸ್ಟ್ ಬಿಸಿಯೆಸ್ಟ್​ ನಟಿಯರ ಪೈಕಿ ನಿತ್ಯಾ ಮೆನನ್​ (Nithya Menon) ಕೂಡ ಒಬ್ಬರಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬಿಡುಗಡೆದ ಸಜ್ಜಾಗಿದೆ. ಜಯಂ ರವಿ (Jayam Ravi) ಜತೆ ನಾಯಕಿಯಾಗಿ ನಟಿಸಿರುವ ಕಾದಲಿಕ್ಕ ನೇರಮಿಲ್ಲೈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಭರ್ಜರಿ ಪ್ರಮೋಷನ್​ನಲ್ಲಿ ತೊಡಗಿದೆ. ಪ್ರಚಾರದ ವೇಳೆ ನಿತ್ಯಾ ಮೆನನ್ ತಾವು ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದು, ಅದಕ್ಕೆ ಕಾರಣವನ್ನು ಉಲ್ಲೇಖಿಸಿದ್ದಾರೆ.

Behind Woods ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಿತ್ಯಾ ಮೆನನ್​, ಸಿನಿಮಾ ಇಷ್ಟಪಟ್ಟಿದ್ದರಿಂದ ನಾನು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲ. ನಾನು ಈ ಕ್ಷೇತ್ರಕ್ಕೆ ಬಂದ ಮೇಲೆಯೇ ದೇವರನ್ನು ನಂಬತೊಡಗಿದೆ. ನನ್ನ ತಂದೆ ಅಜ್ಞೇಯತಾವಾದಿ, ಮತ್ತು ನಾನು ಅದೇ ರೀತಿಯಲ್ಲಿ ಬೆಳೆದೆ. ಆದರೆ ನಾನು ನಟನೆಯನ್ನು ಆರಿಸಿಕೊಂಡಾಗ, ನನಗಿಂತ ಬಲವಾದದ್ದು ನನಗೆ ಅದರಲ್ಲಿ ಮಾರ್ಗದರ್ಶನ ನೀಡುತ್ತಿದೆ ಎಂದು ನಾನು ಅರಿತುಕೊಂಡೆ. ನನಗೆ ಈ ವೃತ್ತಿ ಇಷ್ಟವಿರಲಿಲ್ಲ. 

ನನಗೆ ರಾಷ್ಟ್ರಪ್ರಶಸ್ತಿ ಬರುವ ಮುನ್ನ ಚಿತ್ರರಂಗವನ್ನ ತೊರೆದು ಸಿಂಪಲ್​ ಜೀವನ ಸಾಗಿಸಲು ತಯಾರಾಗಿದ್ದೆ. ಆದರೆ, ರಾಷ್ಟ್ರಪ್ರಶಸ್ತಿ ಗೆದ್ದ ನಂತರ ಸಂಪೂರ್ಣ ಬದಲಾಯಿತು. ನನ್ನ ಆಯ್ಕೆಯನ್ನು ಪೋಷಕರು ಬೆಂಬಲಿಸಿದ್ದರು. ಒಂದು ವೇಳೆ ನಾನು ಚಿತ್ರರಂಗವನ್ನ ತೊರೆದಿದ್ದರೆ ಯಾರು ಅಷ್ಟಾಗಿ ಈ ವಿಚಾರವನ್ನ ಗಮನಿಸುತ್ತಿರಲಿಲ್ಲ. ಒಂದು ವೇಳೆ ನಾನು ಚಿತ್ರರಂಗದಲ್ಲೇ ಉಳಿದುಕೊಂಡಿದ್ದೇನೆ ಅಂದರೆ ಅದು ದೇವರ ಇಚ್ಛೆ ಎಂದು ನಟಿ ನಿತ್ಯಾ ಮೆನನ್​ Behind Woods ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಟಿ ನಿತ್ಯಾ ಮೆನನ್​, ಜಯಂ ರವಿ ಒಟ್ಟಾಗಿ ನಟಿಸಿರುವ ಕಾದಲಿಕ್ಕ ನೇರಮಿಲ್ಲೈ ಜನವರಿ 14ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು, ಈ ಚತ್ರಕ್ಕೆ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್​ ಬಂಡವಾಳ ಹೂಡಿದ್ದು, ಅವರ ಪತ್ನಿ ಕಿರುತಿಗಾ ಆಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್​ ಸಂಗೀತ ಸಂಯೋಜಿಸಿದ್ದು, ಟ್ರೇಲರ್​ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.