ಮುಂಬೈ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್ಎಂಎಸಿಸಿ) ಸಂಗೀತ, ನೃತ್ಯ, ನಾಟಕ, ಫ್ಯಾಷನ್ ಹಾಗೂ ದೃಶ್ಯ ಕಲೆಗಳ ಪ್ರದರ್ಶನಗಳೊಂದಿಗೆ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದೆ.
ಎನ್ಎಂಎಸಿಸಿಯ ಸ್ಟುಡಿಯೋ ಥಿಯೇಟರ್ ಮತ್ತು ದಿ ಕ್ಯೂಬ್ ನಲ್ಲಿ ಏಪ್ರಿಲ್ 3ರಿಂದ ಆರಂಭವಾಗುವ ಕಲಾವಿದರ ವೈವಿಧ್ಯಮಯ ಪ್ರದರ್ಶನಗಳನ್ನು ಎಲ್ಲರೂ ಆನಂದಿಸಬಹುದಾಗಿದೆ. ದಿ ಕ್ಯೂಬ್ ಹೊಸ ಮತ್ತು ಪ್ರಾಯೋಗಿಕ ರಂಗಭೂಮಿಯಿಂದ ಉದಯೋನ್ಮುಖ ಭಾರತೀಯ ಕಲಾವಿದರನ್ನು ಪ್ರೋತ್ಸಾಹಿಸಿ ಉತ್ತೇಜಿಸಲಿದೆ.
ಸ್ಟುಡಿಯೋ ಥಿಯೇಟರ್‌ನಲ್ಲಿ ಏಪ್ರಿಲ್ 3 ರಿಂದ 9ರವರೆಗೆ ಪ್ರತಿದಿನ ವಿವಿಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಏ. 3ರಂದು ಮೇಮ್ ಖಾನ್ (ರಾಜಸ್ತಾನಿ ಜಾನಪದ ಮತ್ತು ಸೂಫಿ ಮ್ಯೂಸಿಕ್), ಏ. 4ರಂದು ಕೌಶಿಕಿ ಚಕ್ರವರ್ತಿ (ಹಿಂದುಸ್ತಾನಿ ಕ್ಲಾಸಿಕಲ್ ಮ್ಯೂಸಿಕ್), ಏ. 5ರಂದು ಉಸ್ತಾದ್ ಮುನವ್ವರ್ ಮಾಸೂಮ್ (ಕವ್ವಾಲಿ), ಏ. 6ರಂದು ಹಾರ್ದಿಕ್ ದವೆ (ಗುಜರಾತ್ ಜಾನಪದ ಸಂಗೀತ), ಏ. 7ರಂದು ಅರುಣಾ ಸಾಯಿರಾಂ (ಕರ್ನಾಟಕ ಕ್ಲಾಸಿಕಲ್ ಮ್ಯೂಸಿಕ್), ಏ. 8ರಂದು ಸಮರ್ಪಣ್ (ಕ್ಲಾಸಿಕಲ್ ಫ್ಯೂಷನ್ ಮ್ಯೂಸಿಕ್), ಏ. 9ರಂದು ಪರ್ಬಯನ್ ಚಟರ್ಜಿ ಮತ್ತು ಯು. ರಾಜೇಶ್ ಅವರಿಂದ ಮಿಲಾಪ್ (ಹಿಂದುಸ್ಥಾನಿ ಮತ್ತು ಕರ್ನಾಟಕ ಮ್ಯೂಸಿಕ್) ಕಾರ್ಯಕ್ರಮಗಳು ನಡೆಯಲಿವೆ.
ದಿ ಕ್ಯೂಬ್ನಲ್ಲಿ
ಏ. 3ರಂದು ಸಾರಂಗ್ ಕುಲಕರ್ಣಿ ಮತ್ತು ಶಿಖರ್ ನಾದ್ ಖುರೇಷಿ (ಇಂಡಿಯನ್ ಕ್ಲಾಸಿಕಲ್ ಮತ್ತು ಫ್ಯೂಷನ್), ಏ. 4ರಂದು ದಿವ್ಯಾ ವಾರಿಯರ್, ಶ್ರುತಿ ಗೋಪಾಲ್ ಮತ್ತು ಶಾಶ್ವತಿ ಗರಾಲ್ ಘೋಷ್ ಅವರಿಂದ ಅವಳ ಕಥೆ (ಇಂಡಿಯನ್ ಕ್ಲಾಸಿಕಲ್ ಡಾನ್ಸ್), ಏ. 5ರಂದು ಮಾಲಿ ಮತ್ತು ಕಾಮಾಕ್ಷಿ ಖನ್ನಾ: ಲೈವ್ (ಪಾಪ್, ಆರ್ಎನ್ಬಿ, ಸೋಲ್ ಆ್ಯಂಡ್ ಇಂಡೀ ಫೋಕ್), ಏ. 6ರಂದು ಯುಕಿ ಎಲ್ಲಿಯಾಸ್ ಅವರಿಂದ ಎಲಿಫೆಂಟ್ ಇನ್ ದಿ ರೂಮ್ (ಥಿಯೇಟರ್). ಏ. 7ರಂದು ಮಹೇಶ್ ಬಚ್ವಾನ್ ಮತ್ತು ನಂದಿನಿ ಶಂಕರ್ (ಇಂಡಿಯನ್ ಕ್ಲಾಸಿಕಲ್ ಫ್ಯೂಷನ್), ಏ. 8ರಂದು ತರುಣ್ ಬಲಾನಿ ಫೀಟ್. ಪರಿಜಾದ್ ಡಿ ಅವರಿಂದ ಸೀಸನಲ್ ಅಫೆಕ್ಟೆಡ್ ಬೀಟ್ಸ್: ಲೈವ್ (ಎಲೆಕ್ಟ್ರಾನಿಕ್ ಮ್ಯೂಸಿಕ್, ಆಡಿಯೋ ವಿಸುವಲ್), ಏ. 9ರಂದು ಮುಕ್ತಾ ಬರ್ವೆ ಅವರಿಂದ ಪ್ರಿಯ್ ಭಾಯ್, ಏಕ್ ಕವಿತಾ ಹವೀ ಆಹೆ (ಮರಾಠಿ ಥಿಯೇಟರ್) ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.
ದಿ ಕ್ಯೂಬ್ಗೆ 250 ರೂ. ಮತ್ತು ದಿ ಸ್ಟುಡಿಯೋ ಥಿಯೇಟರ್ಗೆ ತಲಾ 500 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ಇಷ್ಟೇ ಅಲ್ಲದೆ, ಎನ್ಎಂಎಸಿಸಿಯಿಂದ ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್ ಕಾರ್ಯಕ್ರಮ ಕೂಡ ಕೆಲವೇ ದಿನಗಳಲ್ಲಿ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಇದು ಏಪ್ರಿಲ್ 3ರಿಂದ ಏ.23ರವರೆಗೆ ನಡೆಯಲಿದೆ. ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ, ನಾಟಕ, ಸಂಗೀತ, ಕಲೆ ಸೇರಿ ಮುಂತಾದವು ಪ್ರದರ್ಶನಗೊಳ್ಳಲಿದೆ. ಅಲ್ಲದೆ, ಏಪ್ರಿಲ್ 3 ರಿಂದ ಜೂನ್ 4ರವರೆಗೆ 'ಇಂಡಿಯಾ ಇನ್ ಫ್ಯಾಶನ್' ವೇಷಭೂಷಣ ಕಲಾ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.