ಚೆನ್ನೈ: ಭಾರತದ ಒಂಭತ್ತು ಮೀನುಗಾರರಿದ್ದ ಬೋಟು ತಾಂತ್ರಿಕ ದೋಷದಿಂದ ಶ್ರೀಲಂಕಾ ಸಮುದ್ರ ಗಡಿಯತ್ತ ಚಲಿಸಿದೆ. ಈ ವೇಳೆ ಭಾರತೀಯ ಕರಾವಳಿ ಪಡೆ ಕಾವಲುಗಾರರ ಕೋರಿಕೆಗೆ ಸ್ಪಂದಿಸಿ, ಶ್ರೀಲಂಕಾ ನೌಕಾದಳ ಮೀನುಗಾರರನ್ನು ರಕ್ಷಿಸಿದೆ.
ಶ್ರೀಲಂಕಾ ನೌಕಾದಳದ ಸಹಾಯದಿಂದ ಇದೀಗ ಭಾರತೀಯ ಮೀನುಗಾರರು ಸುರಕ್ಷಿತವಾಗಿ ಕಾರೈಕಲ್ ತಲುಪಿದ್ದಾರೆ.
ಭಾರತೀಯ ಕರಾವಳಿ ಮೀಸಲು ಪಡೆಯ ಸಮನ್ವಯದಿಂದ ಶ್ರೀಲಂಕಾ ನೌಕಾ ಸೇನೆ 9 ಜನ ಭಾರತೀಯ ಮೀನುಗಾರರನ್ನು ರಕ್ಷಿಸಿದೆ. ಬೋಟ್ನ ಇಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಬೋಟ್ನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.