ನ್ಯೂಸ್

ಕಲಾ ದೀಪಗಳ ನಡುವೆ ಕಲಾವಿದೆಯರ ರಂಗಪ್ರವೇಶ...

ಬೆಂಗಳೂರು: ನಿರಂತರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್(ರಿ) ಸಂಸ್ಥೆಯ ನೃತ್ಯ ದಂಪತಿಗಳಾದ ಸೋಮಶೇಖರ್ ಚೂಡಾನಾಥ್ ಮತ್ತು ಸೌಮ್ಯ ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಿಮಿಷ.ಎಸ್ ಹಾಗೂ ಅಕ್ಷಯಾ.ಎ ಮಲ್ಲೇಶ್ವರದ ಸೇವಾಸದನದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.

ನಟುವಾಂಗದಲ್ಲಿ ಸೌಮ್ಯ ಸೋಮಶೇಖರ್, ಗಾಯನ- ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ಮೃದಂಗ- ವಿದ್ವಾನ್ ಜಿ ಗುರುಮೂರ್ತಿ, ವೀಣೆ- ವಿದ್ವಾನ್ ಗೋಪಾಲ ವೆಂಕಟರಮಣ, ಕೊಳಲು- ವಿದ್ವಾನ್ ಜಯರಾಂ, ಖಂಜಿರ- ವಿದ್ವಾನ್ ಕಾರ್ತೀಕ್ ದಾತಾರ್ ಹಾಗೂ ತಾಂತ್ರಿಕ ಸಹಾಯ- ಸೋಮಶೇಖರ್ ಚೂಡನಾಥ್ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಡಾ.ಸುಪರ್ಣಾ ವೆಂಕಟೇಶ್, ಡಾ. ವಿದ್ಯಾ ಶಿಮ್ಲಡ್ಕ, ಲೀಲಾವತಿ ಉಪಾಧ್ಯಾಯ, ಶ್ರೀವಿದ್ಯಾ ಆನಂದ್ ಉಪಸ್ಥಿತರಿದ್ದರು.