ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ವಿದೇಶ ಪ್ರವಾಸದಲ್ಲಿದ್ದಾರೆ. ಈ ನಡುವೆ ಯಶ್ ಟ್ವಿಟರ್ನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ರಾಕಿ ಭಾಯ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಗನ್ ಹಿಡ್ಕೊಂಡು ಬರುವ ಸ್ಟೈಲ್ಗೆ ಎಲ್ಲರೂ ಶಿಳ್ಳೆ, ಚಪ್ಪಾಳೆ ಹೊಡೆದಿದ್ದರು. ಇದೀಗ ಯಶ್ ವಿದೇಶದಲ್ಲಿ ಗನ್ ಹಿಡ್ಕೊಂಡು ಬುಲೆಟ್ ಹಾರಿಸಿದ್ದಾರೆ. ಮುನ್ನುಗುತ್ತಾ ಹೋದ ಯಶ್ ಸರಿಯಾದ ಗುರಿ ನೋಡಿಯೇ ಟ್ರಿಗರ್ ಒತ್ತಿದ್ದಾರೆ.
ಈ ವಿಡಿಯೋವನ್ನು ಟ್ವೀಟ್ ಮಾಡಿ ನಮ್ಮ ಗುರಿಯನ್ನು ತಲುಪಲು ಒಂದಲ್ಲಾ ಒಂದು ಮಾರ್ಗ ಇದ್ದೇ ಇದೆ. ಆ ಮಾರ್ಗವನ್ನು ಹುಡುಕುವುದೇ ನಿಜವಾದ ಸವಾಲು ಎಂದು ಬರೆದುಕೊಂಡಿದ್ದಾರೆ. ಜತೆಗೆ ಮುಂದಿನ ಸಲ ಕಲಾಶ್ನಿಕೊವ್ ಎಂದಿದ್ದಾರೆ.
ಯಶ್ ಈ ವಿಡಿಯೋವನ್ನು ಟ್ವೀಟ್ ಮಾಡುತ್ತಿದ್ದಂತೆ 1 ಗಂಟೆಯಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿ, ಲೈಕ್ ಮಾಡಿದ್ದಾರೆ. ಕನ್ನಡದ ನಟರಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿರುವವರಲ್ಲಿ ಯಶ್ ಕೂಡಾ ಒಬ್ಬರು. 1.2 ಕೋಟಿ ಹಿಂಬಾಲಕರನ್ನು ಟ್ವಿಟರ್ನಲ್ಲಿ ಹೊಂದಿದ್ದಾರೆ.