ನ್ಯೂಸ್

ಬಡ್ಡಿದರ ಏರಿಕೆ ಸುತ್ತಮುತ್ತ: ವಿಜಯವಾಣಿ ಮಾಹಿತಿ

ಮುಂದಿನ ಮಾರ್ಚ್ ನಲ್ಲಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ (ಫೆಡರಲ್ ರಿಸರ್ವ್) ಬಡ್ಡಿದರ ಏರಿಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಭಾರತದ ರಿಸರ್ವ್ ಬ್ಯಾಂಕ್ ಕೂಡ ಇನ್ನು ಕೆಲ ತಿಂಗಳಲ್ಲಿ ರೆಪೊ ದರ ಏರಿಕೆ ಮಾಡುವ ಮುನ್ಸೂಚನೆ ನೀಡಿದೆ.

ಪರಿಣಾಮ ಏನು?

  • ಬಡ್ಡಿದರ ಏರಿಕೆ ಬಾಂಡ್ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತದೆ. ಬಡ್ಡಿದರ ಏರಿದಂತೆ ಬಾಂಡ್ ಬೇಡಿಕೆ ಕಡಿಮೆಯಾಗುತ್ತದೆ. ಷೇರು ಮಾರುಕಟ್ಟೆ ಕೂಡ ತಾತ್ಕಾಲಿಕವಾಗಿ ಇಳಿಕೆ ಕಾಣುವ ಸಾಧ್ಯತೆ. ಕ್ರೆಡಿಟ್ ಕಾರ್ಡ್, ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಹಿತ ಎಲ್ಲ ರೀತಿಯ ಸಾಲ ಪಡೆಯುವವರು ಹೆಚ್ಚಿನ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಇದೇ ವೇಳೆ ಬ್ಯಾಂಕ್​ಗಳಲ್ಲಿನ ಠೇವಣಿ ತುಸು ಏರಿಕೆ ಕಂಡು, ನಿಶ್ಚಿತ ಠೇವಣಿದಾರರಿಗೆ ಸ್ವಲ್ಪಮಟ್ಟಿನ ಲಾಭ ಆಗಲಿದೆ. ಜನರಲ್ಲಿ ಉಳಿತಾಯಕ್ಕೆ ಉತ್ತೇಜನ ದೊರೆಯುತ್ತದೆ.
  • ಸರ್ಕಾರ ಪ್ರತಿವರ್ಷ ಲಕ್ಷಾಂತರ ಕೋಟಿ ರೂ. ಸಾಲ ಪಡೆಯುತ್ತದೆ. ಇವುಗಳಿಗೆ ಹೆಚ್ಚಿನ ಬಡ್ಡಿ ಪಾವತಿಸುವ ಕಾರಣ ವಿತ್ತೀಯ ಕೊರತೆ ತುಸು ಏರಿಕೆ ಕಾಣಬಹುದು.
  • ಉದ್ದಿಮೆ, ವಾಣಿಜ್ಯ, ಕೈಗಾರಿಕೆ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಸಾಲದ ವ್ಯವಹಾರ ನಡೆಯುತ್ತದೆ. ಇವರೂ ಹೆಚ್ಚಿನ ಬಡ್ಡಿ ಪಾವಸುವ ಕಾರಣ ಒಟ್ಟಾರೆ ಉದ್ಯಮ, ಲಾಭದ ಮೇಲೆ ಪರಿಣಾಮ ಉಂಟಾಗಲಿದೆ.
  • ಬಡ್ಡಿ ಏರಿದರೆ ಗೃಹ ಸಾಲ, ವಾಹನ ಸಾಲ, ಇನ್ನಿತರ ಸಾಲಗಳನ್ನು ಪಡೆಯಲು ಜನರು ಹಿಂದೇಟು ಹಾಕಬಹುದು. ಇದು ಗ್ರಾಹಕರ ವೆಚ್ಚದ ಪ್ರವೃತ್ತಿ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಕ್ಷೇತ್ರಗಳಲ್ಲಿ ಕೆಲಕಾಲ ಮಂದಗತಿ ಕಾಣಬಹುದು.
  • ಬಡ್ಡಿ ಏರಿಕೆಯಿಂದ ಬ್ಯಾಂಕುಗಳಿಗೆ ಸ್ವಲ್ಪ ಅನುಕೂಲ ಆಗಬಹುದು.
  • ಯಾವುದೇ ದೇಶದ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿದರೆ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರ ದೊರೆಯುತ್ತದೆ. ಅವರ ಬಳಿ ಹೆಚ್ಚು ಹಣ ಉಳಿದರೆ, ಆರ್ಥಿಕತೆ ಬೆಳೆಯುತ್ತದೆ.