ಇಂದೋರ್; ಇಲಿಗಳು ಕಚ್ಚಿ ನವಜಾತ ಶಿಶುಗಳು ಸವನ್ನಪ್ಪಿವೆ ಎಂದು ಆರೋಪಿಸಿ, ಪೋಷಕರು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಆರಂಭಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಇದನ್ನೂ ಓದಿ: ಛಠ್ ಪೂಜೆ ನಂತರ ನವೆಂಬರ್ 5 ರಿಂದ 15 ರವರೆಗೆ 3 ಹಂತಗಳಲ್ಲಿ ನಡೆಯಲಿದೆ ಬಿಹಾರ ಚುನಾವಣೆ |Bihar election
ಅಲ್ಲಿರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೋಷಕರು ಆಕ್ರೊಶ ಹೊರಹಾಕಿದ್ದಾರೆ. ಇಂದೋರ್‌ನಲ್ಲಿ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಆ ಮಕ್ಕಳಲ್ಲಿ ಒಂದು ಮಗುವಿನ ನಾಲ್ಕು ಬೆರಳುಗಳನ್ನು ಕಚ್ಚಿವೆ, ಮತ್ತೊಂದು ಮಗುವಿನ ಭುಜಕ್ಕೆ ಕಚ್ಚಿವೆ ಎಂದು ಆರೋಪಿಸಲಾಗಿದೆ. ಇಲಿಗಳ ಕಡಿತದಿಂದಾಗಿ ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಿ ಜೈ ಆದಿವಾಸಿ ಯುವ ಶಕ್ತಿ ವತಿಯಿಂದ ಪ್ರತಿಭಟನೆ ಆರಂಭಿಸಲಾಗಿದೆ. ರಾಜ್ಯ ಸರ್ಕಾರವು ಸಾರ್ವಜನಿಕ ವೈದ್ಯಕೀಯ ಸೌಲಭ್ಯಗಳಲ್ಲಿನ ನೈರ್ಮಲ್ಯದ ಕಾಳಜಿಯ ಬಗ್ಗೆ ತೀವ್ರ ಟೀಕೆ ಮತ್ತು ಪರಿಶೀಲನೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
(ಏಜೆನ್ಸೀಸ್)
ಈ ಬಗ್ಗೆ ಜಬಲ್ಪುರ ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಜಿಲ್ಲಾಡಳಿತವು ಆಸ್ಪತ್ರೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಘಟನೆಯ ಬಗ್ಗೆ ಮೂರು ದಿನಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿಯನ್ನು ಉನ್ನತ ಅಧಿಕಾರಿಗಳಿಗೆ ಕಳುಹಿಸಿ, ಸಂಶೋಧನೆಗಳ ಆಧಾರದ ಮೇಲೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ಮೃತ ಶಿಶುಗಳು ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದವುಗಳಾಗಿದ್ದು, ಶಿಶುಗಳು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ. ಕಾಲೇಜಿನ ಡೀನ್ ಡಾ. ಅರವಿಂದ ಘಂಘೋರಿಯಾ ಮತ್ತು ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.