ನ್ಯೂಸ್

ನ್ಯೂಯಾರ್ಕ್​ ಮೇಯರ್ ಚುನಾವಣೆ: ಗೆದ್ದು ಇತಿಹಾಸ ಸೃಷ್ಟಿಸಿದ ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ| Zohran Mamdani

StartFragment ನ್ಯೂಯಾರ್ಕ್​: ಅಮೆರಿಕಾದಲ್ಲಿ ನ್ಯೂಯಾರ್ಕ್​ ನಗರದ ಮೇಯರ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಜೊಹ್ರಾನ್ ಮಮ್ದಾನಿ(Zohran Mamdani) ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಗೆದ್ದಿದ್ದು, ನಗರದ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.

ಇನ್ನೂ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ನಡೆದಿರುವ ಮೊದಲ ಚುನಾವಣೆಯಲ್ಲಿ ಡೆಮಾಕ್ರಟಿಕ್​ಗಳಿಗೆ ನ್ಯೂಯಾರ್ಕ್​ ನಗರದ ಮೇಯರ್ ಆಗಿ ಮಮ್ದಾನಿ ಗೆಲುವು ಭಾರಿ ಖುಷಿ ಕೊಟ್ಟಿದೆ. ಕಳೆದ 50 ವರ್ಷಗಳಿಗಿಂತಲೂ ಈ ಭಾರಿ 2 ಮಿಲಿಯನ್‌ಗಿಂತಲೂ ಹೆಚ್ಚು ಮತ ಚಲಾವಣೆ ಆಗಿತ್ತು. ಇದನ್ನೂ ಓದಿ: ಟೇಕಾಫ್ ಆಗುವ ವೇಳೆ ಯುಪಿಎಸ್​ ಸರಕು ಸಾಗಾಟ ವಿಮಾನ ಸ್ಫೋಟ; 3 ಸಾವು, 11 ಮಂದಿಗೆ ಗಾಯ| Plane explodes  ಜನವರಿ 1 ರಂದು ಜೊಹ್ರಾನ್ ಮಮ್ದಾನಿ ಅಧಿಕಾರ ವಹಿಸಿಕೊಳ್ಳುತಿದ್ದು, ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ನ್ಯೂಯಾರ್ಕ್​ ನಗರದ ಅತ್ಯಂತ ಕಿರಿಯ ಮೇಯರ್ ಆಗಿಯೂ ದಾಖಲೆ ಬರೆಯಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು,  ಸಿಟಿ ಹಾಲ್‌ನಲ್ಲಿ ನ್ಯೂಯಾರ್ಕ್ ಸಬ್‌ವೇ ರೈಲು ಉದ್ಘಾಟನೆಗೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಗೋಡೆಯ ಮೇಲೆ ‘ಜೋಹ್ರಾನ್ ಫಾರ್ ನ್ಯೂಯಾರ್ಕ್ ಸಿಟಿ’ ಎಂಬ ಬರಹ ಕಾಣಿಸಿಕೊಳ್ಳುತ್ತದೆ. (ಏಜೆನ್ಸೀಸ್)