ನ್ಯೂಸ್

ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸ್ನೇಹಲ್​ ನೂತನ ನಿರ್ದೇಶಕಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ನೂತನ ನಿರ್ದೇಶಕಿಯಾಗಿ ಆರ್.ಸ್ನೇಹಲ್ ಅವರು ಸೋಮವಾರ ಅಧಿಕಾರವಹಿಸಿಕೊಂಡಿದ್ದಾರೆ.

ಈ ಹಿಂದೆ ನಿರ್ದೇಶಕಿಯಾಗಿದ್ದ ಎಂ.ಕನಗವಲ್ಲಿ ಅವರು ದೀರ್ಘ ರಜೆಯಲ್ಲಿ ತೆರೆಳಿರುವ ಹಿನ್ನೆಲೆಯಲ್ಲಿ ಸ್ನೇಹಲ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಇವರನ್ನು ಬೆಂ.ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಪ್ರಾಂಶುಪಾಲರ ಸಂಘ ಸನ್ಮಾನಿಸಿತು.