ನ್ಯೂಸ್

ಅಪಾಯಕಾರಿ ಮಟ್ಟ ತಲುಪಿದ ದೆಹಲಿಯ ಗಾಳಿ... ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಉಸಿರಾಡುವುದೇ ಕಷ್ಟವಾಗುತ್ತಿದೆ. ಗಾಳಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 400 ದಾಟಿದೆ, ಅಂದರೆ ಈಗ ದೆಹಲಿ-ಎನ್‌ಸಿಆರ್‌ನ ಗಾಳಿಯು ಅಪಾಯಕಾರಿ ಮಟ್ಟವನ್ನು ತಲುಪಿದೆ.

ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರು, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಮುಂದಿನ 2 ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ, 

ಏಜೆನ್ಸಿ ಐಎಎನ್‌ಎಸ್ ಪ್ರಕಾರ, ಗುರುವಾರ ಸಂಜೆ 5 ಗಂಟೆಯವರೆಗೆ ದೆಹಲಿಯ ಎಕ್ಯೂಐ 402 ದಾಖಲಾಗಿದೆ. ದೆಹಲಿಯಲ್ಲಿ ಅನಿವಾರ್ಯವಲ್ಲದ ಕಟ್ಟಡಗಳನ್ನು ನಿಷೇಧಿಸಲಾಗಿದೆ. ಲಘು ವಾಣಿಜ್ಯ ವಾಹನಗಳು ಮತ್ತು ಡೀಸೆಲ್ ಟ್ರಕ್‌ಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಎನ್‌ಸಿಆರ್ ಮತ್ತು ದೆಹಲಿಯ ರಾಜ್ಯ ಸರ್ಕಾರಗಳು ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ ಮಾಡಲು ತಿಳಿಸಲಾಗಿದೆ.

CAQM ಸಭೆ
ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಶಾಸನಬದ್ಧ ಸಂಸ್ಥೆಯಾದ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗವು (CAQM), ಗಾಳಿಯ ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆಯನ್ನು ನಡೆಸಿತು. ಹವಾಮಾನ ಪರಿಸ್ಥಿತಿ ಮತ್ತು ದೆಹಲಿಯ ವಿಷಕಾರಿ ಗಾಳಿಯನ್ನು ಪರಿಶೀಲಿಸಲಾಯಿತು.
ನವೆಂಬರ್ 2 ರಂದು ಬೆಳಗ್ಗೆ 10 ಗಂಟೆಯಿಂದ ದೆಹಲಿಯ AQI ವೇಗವಾಗಿ ಹೆಚ್ಚುತ್ತಿದೆ ಎಂದು ಸಭೆಯಲ್ಲಿ ಹೇಳಲಾಗಿದೆ. ಇಂದಿನವರೆಗೆ AQI 392 ನಲ್ಲಿ ದಾಖಲಾಗಿದೆ. ಇದಲ್ಲದೇ, ಸಂಜೆ 5 ಗಂಟೆಯವರೆಗೆ ದೆಹಲಿಯ ಸರಾಸರಿ AQI 402 ಆಗಿತ್ತು, ಇದು ವಾಯು ಗುಣಮಟ್ಟ ಸೂಚ್ಯಂಕದ ಅತ್ಯಂತ ಅಪಾಯಕಾರಿ ಮಟ್ಟವಾಗಿದೆ.

GRAP-3 ಎಂದರೇನು?
ರಾಜಧಾನಿಯಲ್ಲಿ ಜಿಎಪಿ-3 ಜಾರಿಗೊಳಿಸಲಾಗಿದೆ. ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸುವುದು, ಧೂಳನ್ನು ನಿಯಂತ್ರಿಸಲು ಪ್ರತಿದಿನ ಸಿಂಪರಣೆ ಮಾಡುವುದು, ಕೆಡವುವಿಕೆ ಅಥವಾ ಇತರ ನಿರ್ಮಾಣ ಕಾರ್ಯಗಳನ್ನು ನಿಷೇಧಿಸುವುದು, ವಾಹನಗಳ ನಿಷೇಧ ಇತ್ಯಾದಿಗಳನ್ನು ಇದು ಒಳಗೊಂಡಿದೆ. ಇದರೊಂದಿಗೆ ಕೊರೆಯುವ ಕೆಲಸ, ಅಗೆಯುವ ಮತ್ತು ಮಣ್ಣಿನ ಕೆಲಸವನ್ನು ನಿಷೇಧಿಸಲಾಗುವುದು.