More

    ವಕೀಲರು ಮೈ ಲಾರ್ಡ್​ ಎಂದು ಹೇಳುವುದನ್ನು ನಿಲ್ಲಿಸಿದ್ರೆ ಅರ್ಧ ಸಂಬಳ ಕೊಡ್ತೀನಿ ಅಂದ್ರು ಸುಪ್ರೀಂ ಕೋರ್ಟ್​ ಜಡ್ಜ್​!

    ನವದೆಹಲಿ: ವಾದ ಮಂಡನೆ ವೇಳೆ ಪದೇಪದೆ “ಮೈ ಲಾರ್ಡ್​” ಮತ್ತು “ಯುವರ್​ ಲಾರ್ಡ್​ಶಿಪ್ಸ್​” ಎನ್ನುವ ಹಳೇ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ‘ಮೈ ಲಾರ್ಡ್ಸ್’ ಎಂದು ನೀವು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ಕೊಡುತ್ತೇನೆ ಎಂದು ನ್ಯಾಯಮೂರ್ತಿ ಪಿ.ಎಸ್​. ನರಸಿಂಹ ಅವರು ಹೇಳಿದರು. ಸಾಂವಿಧಾನಿಕ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಕುಳಿತಿದ್ದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಬುಧವಾರ ಸಾಮಾನ್ಯ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲರಿಗೆ ಈ ರೀತಿ ತಿಳಿಸಿದರು.

    ನ್ಯಾಯಾಲಯದಲ್ಲಿ ತಮ್ಮ ವಾದ ಮಂಡನೆ ಮಾಡುವಾಗ ನ್ಯಾಯಮೂರ್ತಿಗಳನ್ನು ಮೈ ಲಾರ್ಸ್​ ಅಥವಾ ಯುವರ್​ ಲಾರ್ಡ್​ಶಿಪ್ಸ್​ ಎಂದು ಉಲ್ಲೇಖಿಸುವುದು ಸರ್ವೆ ಸಾಮಾನ್ಯ. ಆದರೆ, ಈ ಪದ್ಧತಿಯನ್ನು ವಸಾಹತುಶಾಹಿ ಯುಗದ ಅವಶೇಷ ಮತ್ತು ಗುಲಾಮಗಿರಿಯ ಸಂಕೇತ ಎಂದಿರುವ ನ್ಯಾಯಮೂರ್ತಿಗಳು, ಇದನ್ನು ತಿರಸ್ಕರಿಸಿದ್ದಾರೆ.

    ‘ಮೈ ಲಾರ್ಡ್​​’ ಎಂದು ಕರೆಯುವುದರ ಬದಲು ‘ಸರ್’ ಎಂದು ಏಕೆ ಬಳಸಬಾರದು ಎಂದು ಹೇಳಿದ ನ್ಯಾಯಮೂರ್ತಿ ನರಸಿಂಹ, ‘ಮೈ ಲಾರ್ಡ್ಸ್’ ಎಂಬ ಪದವನ್ನು ಹಿರಿಯ ವಕೀಲರು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಅವರು ಲೆಕ್ಕ ಹಾಕಲು ಆರಂಭಿಸುವುದಾಗಿ ಹೇಳಿದರು.

    2006 ರಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಯಾವುದೇ ವಕೀಲರು ನ್ಯಾಯಾಮೂರ್ತಿಗಳನ್ನು “ಮೈ ಲಾರ್ಡ್” ಮತ್ತು “ಯುವರ್ ಲಾರ್ಡ್‌ಶಿಪ್” ಎಂದು ಸಂಬೋಧಿಸುವಂತಿಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಿತು. ಆದರೂ ಅದನ್ನು ಈಗಲೂ ಯಾರೂ ಅನುಸರಿಸುತ್ತಿಲ್ಲ. (ಏಜೆನ್ಸೀಸ್​)

    ನೇಹಾ ಕನ್ನಡ ವ್ಯಾಮೋಹ ; ಕನ್ನಡದಲ್ಲಿ ಮತ್ತೆ ನಟಿಸಲು ಕಾಯುತ್ತಿದ್ದೇನೆ ಎಂದ ನಟಿ

    ದೆಹಲಿಯಲ್ಲಿ ಬಿಜೆಪಿ ಒಬಿಸಿ ಮಹಾಮಂಥನ; ಹಿಂದುಳಿದ ವರ್ಗ ಸೆಳೆಯುವ ತಂತ್ರಗಾರಿಕೆ ಚರ್ಚೆ

    ನಾಳೆ ಪರೀಕ್ಷೆ ಇನ್ನೂ ಬಗೆಹರಿದಿಲ್ಲ ಗೊಂದಲ: ಕಡ್ಡಾಯ ಕನ್ನಡ ಬರೆಯಬೇಕೋ, ಬೇಡವೋ ತಿಳಿಯುತ್ತಿಲ್ಲ; ಅಭ್ಯರ್ಥಿಗಳು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts