Nepal GenZ Protest: ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಸದ್ಯ ಭಾರೀ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿಯಿಟ್ಟರೆ, ಹಣಕಾಸು ಸಚಿವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಫಾರ್ಮುಲಾ-ಇ ರೇಸ್ ಹಗರಣ ಪ್ರಕರಣ; ಇದೊಂದು ಬೋಗಸ್ ಕೇಸ್, ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ದ ಎಂದ ಕೆಟಿಆರ್ | KTR
ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಮಾತ್ರ ಸಿಡಿದೇಳದ ಯುವಜನತೆ, ಓಲಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಆರೋಪಿಸಿ ತೀವ್ರ ಪ್ರತಿಭಟನೆ ಕೈಗೊಂಡರು. ಸಾವಿರಾರೂ ಸಂಖ್ಯೆಯಲ್ಲಿ ಪ್ರಧಾನಿ ಓಲಿ ಮತ್ತು ರಾಷ್ಟ್ರಪತಿಗಳ ಖಾಸಗಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಬೆಂಕಿ ಹಚ್ಚಿ ತಮ್ಮ ಕಿಚ್ಚನ್ನು ತೀರಿಸಿಕೊಂಡರು. ಇಲ್ಲಿಯವರೆಗೆ 19 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೆಲ್ಲದರ ಮಧ್ಯೆ ನೇಪಾಳದ ಮಾಜಿ ಪ್ರಧಾನಿ ಪತ್ನಿ ಮೃತಪಟ್ಟಿದ್ದು, ಪ್ರತಿಭಟನಾಕಾರರ ಕಿಚ್ಚಿಗೆ ಉಸಿರು ಚೆಲ್ಲಿರುವುದು ದುರಂತ. ಪ್ರಸ್ತುತ, ಸೇನೆ ನೇಪಾಳ ವಿಮಾನ ನಿಲ್ದಾಣವನ್ನು ಸುತ್ತುವರೆದಿದ್ದು, ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದಾರೆ. ಇಷ್ಟಾದರೂ ಸಹ ಪ್ರತಿಭಟನಾಕಾರರ ಕಿಚ್ಚಿನ ಹೋರಾಟ ಇನ್ನೂ ಕೊನೆಗೊಂಡಿಲ್ಲ.