ವಿಶ್ವಮಾನವರಾಗುವ ಜತೆಗೆ ನಮ್ಮತನವನ್ನು ಮರೆಯಬಾರದು ಎಂಬುದು ಎನ್ಇಪಿ ಮೊದಲ ಉದ್ದೇಶ. ಉದ್ಯೋಗ ಕಂಡುಕೊಳ್ಳುವುದರ ಜತೆಗೆ ವ್ಯಕ್ತಿತ್ವ ರೂಪಿಸಬೇಕು. ಇದೆಲ್ಲ ಆಗಬೇಕೆಂದರೆ ಶಿಕ್ಷಣದ ಎಲ್ಲ ರಂಗಗಳಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಆಸಕ್ತಿಯನ್ನು ಗುರುತಿಸಿ ಅದನ್ನು ಬೆಳೆಸಬೇಕು ಎಂಬುದು ಶಿಕ್ಷಣದ ಉದ್ದೇಶ. ಅದನ್ನು ಎನ್ಇಪಿ ಮತ್ತಷ್ಟು ಸದೃಢವಾಗಿಸುತ್ತದೆ. ಶಿಕ್ಷಣ ಪೂರೈಸಿದ ನಂತರ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ, ಕಂಪನಿಯ ಯೋಜನೆಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಅವರಿಗೆ ಇರಬೇಕು. ಜತೆಗೆ, ಸೋಲಿನಿಂದ ದುಃಖಿಗಳಾಗದೆ ಮುಂದೆ ನಡೆಯುವಂತಹ ಮಾನಸಿಕ ಸಾಮರ್ಥ ಹೊಂದಿರಬೇಕು. ಇವುಗಳ ಜತೆಗೆ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳು ನಮ್ಮಲ್ಲಿ ಇರಬೇಕು ಎಂಬುದು ಎನ್ಇಪಿ ಕೇಂದ್ರ ವಿಚಾರಗಳು.
2020ರಿಂದಲೇ ಸಿದ್ಧತೆ: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) 2020ರ ಜು.20ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 2020ರ ಡಿಸೆಂಬರ್ನಿಂದಲೇ ಕರ್ನಾಟಕದಲ್ಲಿ ಇದರ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈಗಿನ ಶಿಕ್ಷಣದ ಮಿತಿ: ಈಗ ಶಿಕ್ಷಣದಲ್ಲಿ ಕಾಂಬಿನೇಷನ್ ಪಡೆದುಕೊಳ್ಳಬೇಕು. ಉದಾಹರಣೆಗೆ ವಿಜ್ಞಾನದಲ್ಲಿ ಪಿಸಿಎಂ, ಪಿಸಿಬಿ, ಇತ್ಯಾದಿ... ಈ ಕಾಂಬಿನೇಷನ್ಗಳಲ್ಲಿ ಯಾವುದೋ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೂ ವಿದ್ಯಾರ್ಥಿ ಆರೂ ಸೆಮಿಸ್ಟರ್ ಓದಬೇಕು ಎಂಬುದು ಬಹುಕಷ್ಟ. ಅದೇ ರೀತಿ ಕಲೆ, ವಿಜ್ಞಾನ, ವಾಣಿಜ್ಯದ ಅಧ್ಯಾಪಕರಲ್ಲೂ ವಿಭಾಗಗಳು ಗಟ್ಟಿಯಾಗಿವೆ. ಯಾವುದೇ ಕಾರಣಕ್ಕೆ ವಿದ್ಯಾರ್ಥಿ ಶಿಕ್ಷಣವನ್ನು ನಡುವಿಗೆ ಸ್ಥಗಿತಗೊಳಿಸಿದರೆ ಯಾವ ಉಪಯೋಗವೂ ಇರುವುದಿಲ್ಲ.
2 ಪ್ಲಸ್ 1 ಕಾಂಬಿನೇಷನ್: ಒಂದು ನಿಕಾಯದಲ್ಲಿ ಮೂರು ವಿಷಯಗಳಿ ರುತ್ತವೆ. ಅದರಲ್ಲಿ ಎರಡು ವಿಷಯವನ್ನು ಅದೇ ಕ್ಷೇತ್ರದಿಂದ ಆಯ್ಕೆ ಮಾಡಿಕೊಳ್ಳಬೇಕು. ಒಂದು ವಿಷಯ ಓಪನ್ ಎಲೆಕ್ಟಿವ್ ಇರುತ್ತದೆ. ಈ ವಿಷಯವನ್ನು ಅದೇ ಕ್ಷೇತ್ರದಿಂದಲೂ ಆಯ್ಕೆ ಮಾಡಿಕೊಳ್ಳಬಹುದು, ಅಥವಾ ವಿಜ್ಞಾನ, ವಾಣಿಜ್ಯದಿಂದಲೂ ಆಯ್ಕೆ ಮಾಡಿಕೊಳ್ಳಬಹುದು. ಸಂಗೀತ, ಯೋಗವನ್ನೂ ತೆಗೆದುಕೊಳ್ಳಬಹುದು.
ವಿದ್ಯಾರ್ಥಿ ಏನು ಮಾಡಬೇಕು?: ವಿದ್ಯಾರ್ಥಿ ಮೊದಲು ಕಾಲೇಜು ಆಯ್ಕೆ ಮಾಡಿ ಕೊಳ್ಳಬೇಕು. ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದರ ಕುರಿತು ಅಲ್ಲಿನ ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಾರೆ. ತನ್ನ ಆಸಕ್ತಿ ನೋಡಿಕೊಂಡು ವಿಷಯ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಲ್ಕು ಸೆಮಿಸ್ಟರ್ನಲ್ಲಿ ಎರಡು ಭಾಷೆ ಆಯ್ಕೆ ಮಾಡಿಕೊಳ್ಳಬೇಕು, ಇದರಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಇನ್ನೊಂದು ಭಾಷೆಯನ್ನು ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳಬಹುದು.
ಎನ್ಇಪಿ ಅನುಷ್ಠಾನದಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯೂನಿಫೈಡ್ ಯೂನಿವರ್ಸಿಟಿ ಆಂಡ್ ಕಾಲೇಜ್ ಮ್ಯಾನೇಜ್ವೆುಂಟ್ ಸಿಸ್ಟಂ) ಮೂಲಕ 22 ವಿವಿಗಳ ದಾಖಲೆ, ಪರೀಕ್ಷೆ ಸೇರಿ ಅನೇಕ ಕಾರ್ಯಗಳನ್ನೂ ಒಂದೇ ವೇದಿಕೆಗೆ ತರಲಾಗುತ್ತಿದೆ. ಕ್ರೆಡಿಟ್ ಟ್ರಾನ್ಸ್ಫರ್, ಒಂದು ಕಾಲೇಜು ಬಿಟ್ಟರೆ ಮತ್ತೊಂದಕ್ಕೆ ಸೇರ್ಪಡೆ ಆಗಲು ಅನುಕೂಲದಂತಹ ಅನೇಕ ವೈಶಿಷ್ಠ್ಯೆಗಳಿವೆ. ಡಿಜಿಟಲ್ ಕಲಿಕೆಯಲ್ಲಿ ಕರ್ನಾಟಕ ಲರ್ನಿಂಗ್ ಮ್ಯಾನೇಜ್ವೆುಂಟ್ ಸಿಸ್ಟಂ (ಕರ್ನಾಟಕ ಎಎಲ್ಎಂಎಸ್) ರೂಪಿಸಲಾಗಿದೆ. 5 ಲಕ್ಷ ವಿದ್ಯಾರ್ಥಿಗಳಿಗೆ ಇದರ ಉಪಯೋಗ ಸಿಗುತ್ತಿದೆ. ಪ್ರತಿ 1 ಗಂಟೆಯ ವಿಡಿಯೋ, ಒಂದು ಪಿಪಿಟಿ, ಸಾರಾಂಶ ಹಾಗೂ 10 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆ ಇರುತ್ತದೆ. ಈಗ ಸರ್ಕಾರಿ ಕಾಲೇಜುಗಳ 9 ಸಾವಿರ ಕ್ಲಾಸ್ರೂಮ್ಳಲ್ಲಿ ಎರಡೂವರೆ ಸಾವಿರ ಸ್ಮಾರ್ಟ್ಕ್ಲಾಸ್ ರೂಂ ಮಾಡಲಾಗಿದೆ. ಕರೆಂಟ್ ಹೋದಾಗಲೂ ಇವು ಕೆಲಸ ಮಾಡುವಂತೆ ರೂಪಿಸಲಾಗಿದೆ. ಪಾಠವನ್ನು ಪರಿಣಾಮಕಾರಿಯಾಗಿಸಲು ಪಿಪಿಟಿ, ಅನಿಮೇಷನ್, ಚಿತ್ರಗಳನ್ನು ಬಳಸಬಹುದು. ಕರ್ನಾಟಕ ಎಎಲ್ಎಂಎಸ್ ಬಳಸಲು 1.60 ಲಕ್ಷ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಟ್ಯಾಬ್ ನೀಡಲಾಗಿದೆ. ಈ ವರ್ಷ ಮೊದಲ ವರ್ಷಕ್ಕೆ ಸೇರುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಟ್ಯಾಬ್ ನೀಡಲಾಗುತ್ತದೆ.
ಕಾಲೇಜು ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಇದರ ಮಾಹಿತಿ ಪ್ರಕಟಿಸುತ್ತೇವೆ. ಅಲ್ಲದೆ, ಪ್ರತಿ ಕಾಲೇಜಿನಲ್ಲೂ ಸಹಾಯವಾಣಿ ಕೇಂದ್ರ ಆರಂಭಿಸಲಿದ್ದು, ಅದಕ್ಕೆ ಕರೆ ಮಾಡಿಯೂ ಮಾಹಿತಿ ಪಡೆದುಕೊಳ್ಳಬಹುದು.
-ಇಲ್ಲ. ಇದಕ್ಕೆ ಅವಕಾಶ ಇಲ್ಲ. ಮೇಜರ್ ವಿಷಯದಲ್ಲೇ ಪಿಜಿ ಮಾಡಬೇಕಿದೆ.
-ಎನ್ಇಪಿ 2021-22ನೇ ಸಾಲಿನಿಂದ ಜಾರಿಗೆ ಬರುತ್ತಿರುವುದರಿಂದ ಆನಂತರದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ.
-ಹೌದು. ಆದರೆ, ನೀವು ಪ್ರವೇಶ ಪಡೆಯುವ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ಗಳನ್ನು ಮಾತ್ರ ಕಾಲೇಜಿನವರು ನೀಡಲು ಸಾಧ್ಯ.
-ಕೋರ್ಸ್ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ದೊರೆಯಲಿದೆ.
-ಕನ್ನಡದಲ್ಲೇ ಕೋರ್ಸ್ ಕಲಿಯಬಹುದು. ಅಲ್ಲದೆ, ಕೌಶಲ, ತಂತ್ರಜ್ಞಾನದ ಅರಿವು ಇದರಿಂದ ಪಡೆಯಬಹುದು.
-ನೀತಿ ಅನುಷ್ಠಾನವಾಗುತ್ತಿದ್ದಂತೆಯೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಕೂಡ ಆಗಲಿದೆ. ಈ ಸಿಬ್ಬಂದಿ ಇಲ್ಲದೆ, ನೀತಿ ಅನುಷ್ಠಾನ ಕಷ್ಟ. ಗ್ರಂಥಾಲಯವನ್ನು ಸಹ ಉನ್ನತೀಕರಿಸಲಾಗುವುದು. ವೇತನದ ಹೆಚ್ಚಳದ ಬಗ್ಗೆ ಆಲೋಚಿಸಲಾಗುವುದು.
-ಹಾಲಿ ನಮ್ಮಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಇಂಟರ್ನೆಟ್ ಸೇವೆ ಲಭ್ಯವಿದೆ. ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದ ವೇಳೆ ಟ್ಯಾಬ್ ಮೂಲಕ ವೀಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
-ವಿದೇಶದ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಈ ಕೋರ್ಸ್ ಆರಂಭಿಸುತ್ತಿದ್ದೇವೆ. 60 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಇದಕ್ಕೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡುತ್ತೇವೆ. ವಿದೇಶದಲ್ಲೂ ನೀವು ವ್ಯಾಸಂಗ ಮಾಡಬಹುದಾಗಿದೆ.
-ಕೋರ್ಸ್ ಆರಂಭಕ್ಕೆ ಯಾವುದೇ ಅಭ್ಯಂತರ ಇಲ್ಲ. ವಿವಿಯ ವ್ಯಾಪ್ತಿಯಲ್ಲಿ ಕಾಲೇಜುಗಳು ಅಗತ್ಯ ಸೌಕರ್ಯ ಕಲ್ಪಿಸಿಕೊಂಡು ವಿವಿಯಿಂದ ಅನುಮತಿ ಪಡೆದು ಆರಂಭಿಸಬಹುದಾಗಿದೆ.