ನ್ಯೂಸ್

VIDEO | BBKS10: ವರ್ತೂರು ಸಂತೋಷ್​ ಮದುವೆ ವಿಚಾರ; ನೀತು ಕೊಟ್ಟ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್ 10ರ ರಿಯಾಲಿಟಿ ಶೋ ಇದೀಗ ಹತ್ತನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದು, ಇಬ್ಬರು ವೈಲ್ಡ್​ಕಾರ್ಡ್​ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸುವ ಮುನ್ನವೇ ಬಿಗ್​ ಮನೆಯಿಂದ ನೀತು ವನಜಾಕ್ಷಿ ಎಲಿಮಿನೇಟ್​ ಆದರು. ಮನೆಯಿಂದ ಹೊರಬಂದ ಬಳಿಕ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ನೀತು, ಮನೆಯೊಳಗಿನ ಹಲವಾರು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಸಂತೋಷ್​ ಬಗ್ಗೆ ಮಾತನಾಡಿದ ನೀತು, "ಒಳಗಿದ್ದ ಅಷ್ಟು ದಿನಗಳೂ ಸಹ ವರ್ತೂರು ಸಂತೋಷ್​ ನನಗೆ ಏನೂ ಹೇಳಲಿಲ್ಲ. ಆದ್ರೆ, ಹಲವು ಬಾರಿ ನೀವು ಹೊರಗಡೆ ಹೋದ್ಮೆಲೆ ನಿಮಗೆ ಒಂದು ಶಾಕ್​ ಕಾದಿದೆ. ಆ ಸುದ್ದಿ ಕೇಳಿ ಶಾಕ್ ಆಗ್ತೀರಾ ನೋಡಿ ಅಂತಿದ್ರು. ನಾನು ಬೇರೆಯೇ ಸಮಸ್ಯೆಯಲ್ಲಿದ್ದೆ, ಇಲ್ಲಿ ಇರಲು ಆಗ್ತಿಲ್ಲ, ಅಂತೆಲ್ಲಾ ನನ್ನೊಂದಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ" ಎಂದರು.

"ಹಲವಾರು ವಿಚಾರಗಳನ್ನು ನಾನು ಕೇಳುತ್ತಿದ್ದೆ, ಏನು ಹೇಳಿ, ಸಮಸ್ಯೆಯೇನು ಅಂತೆಲ್ಲಾ, ಆದ್ರೆ, ಅವರು ಯಾವತ್ತು ಕೂಡ ಗುಟ್ಟು ಬಿಟ್ಟು ಕೊಡಲಿಲ್ಲ" ಎಂದು ನೀತು ಹೇಳಿದ್ದಾರೆ. ವರ್ತೂರು ಸಂತೋಷ್​ ಮದುವೆ ವಿಚಾರಕ್ಕೆ ನೀತು ಕೊಟ್ಟ ಉತ್ತರ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ.