ನ್ಯೂಸ್

ಪದವಿ ಪಡೆಯುವ ಕೆಲವೇ ದಿನಗಳ ಮೊದಲು ಬಹಾಮಾಸ್‌ನಲ್ಲಿ ಹೋಟೆಲ್​​ನಿಂದ ಬಿದ್ದು ಭಾರತೀಯ ಮೂಲದ ವಿದ್ಯಾರ್ಥಿ ಸಾವು | New York

New York: ಪದವಿ ಪಡೆಯಲು ಕೆಲವು ದಿನಗಳ ಮೊದಲು ಹೋಟೆಲ್ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ಭಾರತೀಯ ಮೂಲದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬಹಾಮಾಸ್‌ನಲ್ಲಿ ಭಾನುವಾರ (ಮೇ.11) ನಡೆದಿದೆ.

ಗೌರವ್ ಜೈಸಿಂಗ್ ಮ್ಯಾಸಚೂಸೆಟ್ಸ್‌ನ ವಾಲ್ಥಮ್‌ನಲ್ಲಿರುವ ಬೆಂಟ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು, ಪ್ರವಾಸಕ್ಕಾಗಿ ಬಹಾಮಾಸ್​​ಗೆ ಹೋದಾಗ ಈ ದುರಂತ ನಡೆದಿದೆ. ಈ ವಾರದ ಕೊನೆಯಲ್ಲಿ ಗೌರವ್​ಗೆ ಪದವಿ ಸಿಗಬೇಕಿತ್ತು, ಆದರೆ ಅಷ್ಟರೊಳಗೆ ಈ ಘಟನೆ ಕುಟುಂಬಸ್ಥರನ್ನು ನೋವಿಗೆ ದೂಡಿದೆ.

ಗೌರವ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಮೇ 17 ರಂದು ನಿಗದಿಯಾಗಿರುವ ಪದವಿಪೂರ್ವ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ್ ಅವರನ್ನು ಗೌರವಿಸಲು ನಾವು ಯೋಜಿಸಿದ್ದೇವೆ" ಎಂದು X ನಲ್ಲಿ ಬೆಂಟ್ಲಿ ವಿಶ್ವವಿದ್ಯಾಲಯ ಪೋಸ್ಟ್‌ ಮಾಡಿದೆ.

ರಾತ್ರಿ 10 ಗಂಟೆ ಸುಮಾರಿಗೆ ಗೌರವ್​ ತನ್ನ ಹೋಟೆಲ್ ಕೋಣೆಯೊಳಗೆ ಇತರ ರೂಮ್‌ಮೇಟ್‌ಗಳೊಂದಿಗೆ ಇದ್ದಾಗ ಗೌರವ್​ ಆಕಸ್ಮಿಕವಾಗಿ ಮೇಲಿನ ಮಹಡಿಯ ಬಾಲ್ಕನಿಯಿಂದ ಬಿದ್ದಿದ್ದಾರೆ, ತುರ್ತು ವೈದ್ಯಕೀಯ ಸೇವೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದವು ಆದರೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)