ನ್ಯೂಸ್

ಡ್ರಗ್ಸ್​ ಕೇಸ್​ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಪ್ರಧಾನಿ ಮೋದಿಗೆ ಆಪ್ತರು: ಕಾಂಗ್ರೆಸ್​ ಆರೋಪ

ನವದೆಹಲಿ: ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯನ್ನು ಬೇರೆಬೇರೆ ಆಯಾಮಗಳಲ್ಲಿ ವಿವಿಧ ತನಿಖಾ ದಳಗಳು ನಡೆಸುತ್ತಿವೆ.

ಸುಶಾಂತ್ ಸಾವಿನೊಂದಿಗೆ ಥಳುಕು ಹಾಕಿಕೊಂಡಿರುವ ಮಾದಕ ದ್ರವ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಈಗಾಗಲೇ ಹಲವರ ವಿಚಾರಣೆ ನಡೆಸಿದೆ.

ಆದರೆ ಈ ಡ್ರಗ್ಸ್​ ಲಿಂಕ್​ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬಿಜೆಪಿಗೆ ತುಂಬ ಆಪ್ತರು ಎಂದು ಕಾಂಗ್ರೆಸ್​ ನಾಯಕ ಅಧೀರ್ ರಂಜನ್​ ಚೌಧರಿ ಆರೋಪಿಸಿದ್ದಾರೆ.

ಸುಶಾಂತ್​ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ಸ್​ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತುಂಬ ಆಪ್ತರು. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಆಟ ಆಡುತ್ತಿದೆ ಎಂದು ನೇರವಾಗಿ ಆರೋಪಿಸಿದರು. ಇದನ್ನೂ ಓದಿ: ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​

ಸುಶಾಂತ್​ ಸಾವಿನ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಇ.ಡಿ., ಸಿಬಿಐಗಳು ಇದುವರೆಗೆ ಏನು ಪತ್ತೆ ಹಚ್ಚಿವೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಇದೀಗ ಎಲ್ಲ ನಟ-ನಟಿಯರನ್ನೂ ಡ್ರಗ್ಸ್​ಗೆ ಲಿಂಕ್​ ಮಾಡಿ, ಅವರಿಗೆ ನೋಟಿಸ್ ಕೊಟ್ಟು, ವಿಚಾರಣೆಗೆ ಕರೆಸಲಾಗುತ್ತಿದೆ ಎಂದು ಹೇಳಿದರು.

ಬಿಹಾರ ಚುನಾವಣೆಗೆ ಬಿಜೆಪಿ ಸುಶಾಂತ್​ ಸಾವಿನ ಪ್ರಕರಣವನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಎನ್​​ಸಿಬಿ ಬಿಜೆಪಿಯ ರಕ್ಷಕವಾಗಿದೆ ಎಂದು ನಿನ್ನೆಯಷ್ಟೇ ಚೌಧರಿ ಆರೋಪಿಸಿದ್ದರು.(ಏಜೆನ್ಸೀಸ್​)