ಬೆಂಗಳೂರು: ಸದಾ ಸಿನಿಮಾಗಳ ವಿಷಯಗಳಲ್ಲಿ ಬ್ಯೂಸಿ ಇರುವ ತಮಿಳಿನ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ನಟಿ ನಯನತಾರ ಮತ್ತು ಪತಿ ವಿಘ್ನೇಶ್ ಶಿವನ್ ಇದೀಗ ದುಬೈ ಸಫಾರಿಯನ್ನು(safari) ಆನಂದಿಸುತ್ತಿದ್ದಾರೆ.
ಹೌದು, ಮಕ್ಕಳಾದ ಉಯಿರ್ ಮತ್ತು ಉಲಗ್ ಜತೆ ಜಿರಾಫೆಗೆ ಹುಲ್ಲು ತಿನ್ನಿಸುತ್ತಿರುವ ವಿಡಿಯೋಂದು ವೈರಲ್ ಆಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶಿಸುತ್ತಿದ್ದಾರೆ: Basavaraj Bommai
ಉಯಿರ್ ಮತ್ತು ಉಲಗ್ ಅವರೊಂದಿಗೆ ನಯನತಾರಾ ದಂಪತಿ ತಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಯನತಾರಾ ದಂಪತಿ ಮತ್ತು ಮಕ್ಕಳ ಜೊತೆ ದುಬೈ ಟ್ರಿಪ್ನ ಪ್ರವಾಸವನ್ನು ಅನುಭವಿಸುತ್ತಿರುವುದು ಕಾಣುತ್ತದೆ.
‘’ಮೊದಲ ಬಾರಿಗೆ ಜಿರಾಫೆಯನ್ನು ನೋಡಿ ಆಕರ್ಷಿತರಾದ ಪುಟಾಣಿಗಳ ಕುತೂಹಲದ ಕಣ್ಣುಗಳು ಎಲ್ಲರ ಗಮನ ಸೆಳೆದವು. ತಮ್ಮ ಹೆತ್ತವರ (ನಯನತಾರಾ) ಮಾರ್ಗದರ್ಶನವನ್ನು ಅನುಸರಿಸಿ, ಮಕ್ಕಳು ಜಿರಾಫೆಗೆ ಹುಲ್ಲು ತಿನ್ನಿಸಿದರು ವಿಡಿಯೋದಲ್ಲಿದೆ’’.
ಈ ಹಿಂದೆ, ದಂಪತಿಗಳು ತಮ್ಮ ದುಬೈನ ಪ್ರವಾಸಿ ದಿನಗಳನ್ನು ಹಲವಾರು ತಮ್ಮ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ, ವಿಹಾರ ನೌಕೆ ಸವಾರಿ ಮತ್ತು ಬೀಚ್‌ನಲ್ಲಿ ಮಕ್ಕಳೊಂದಿಗೆ ತಮ್ಮ ಸಮಯವನ್ನು ಆನಂದಿಸುವುದನ್ನು ಕಾಣಬಹುದು.(ಏಜೆನ್ಸೀಸ್)