ನ್ಯೂಸ್

ನಕ್ಸಲ್ ಕೋಟೆಹೊಂಡ ರವಿ ಶರಣಾಗತಿ: ಸಿಎಂಗೆ ಗುಪ್ತಚರ ಇಲಾಖೆ ಮಾಹಿತಿ! | Naxal Surrenders

Naxal Surrenders:ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವಿ (ಯುಜಿ ನಕ್ಸಲ್) ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ (ಶೃಂಗೇರಿಯಿಂದ 4 ಕಿ.ಮೀ) ಶರಣಾಗಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಫಾರೆಸ್ಟ್ ಐಬಿಯಿಂದ ನಾವು ಅವರನ್ನು ಶರಣಾಗತಿ ಪ್ರಕ್ರಿಯೆಗಾಗಿ ಚಿಕ್ಕಮಂಗಳೂರುಗೆ ಸಾಗಿಸುತ್ತಿದ್ದೇವೆ. ಅಲ್ಲದೆ, ದೀರ್ಘಕಾಲದಿಂದ ಪರಾರಿಯಾಗಿದ್ದ ಯುಜಿ ನಕ್ಸಲ್ ತೊಂಬಟ್ಟು ಲಕ್ಷ್ಮಿ ನಾಳೆ ಚಿಕ್ಕಮಂಗಳೂರು/ಉಡುಪಿಯಲ್ಲಿ ಶರಣಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ ಮತ್ತು ಐಜಿಪಿ ಅಲೋಕ್ ಮೋಹನ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಖಚಿತಪಡಿಸಿದೆ ಎಂದು ಹೇಳಿದ್ದಾರೆ.

ಆಪರೇಷನ್ ನಕ್ಸಲ್ ಶರಣಾಗತಿ ಪೂರ್ಣ

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡಕ್ಕೆ ಮುಖ್ಯಮಂತ್ರಿ ಪದಕವನ್ನು ಸಿಎಂ ಘೋಷಿಸಿದ್ದಾರೆ.