ನವದೆಹಲಿ: ಗಡಿಭಾಗದಲ್ಲಿ ಚೀನಾ, ಪಾಕಿಸ್ತಾನಗಳು ಕಾಲ್ಕೆರೆದು ಯುದ್ಧಾಹ್ವಾನ ನೀಡುತ್ತಿರಬೇಕಾದರೆ, ಭಾರತೀಯ ನೌಕಾಪಡೆ ಸಮರಕ್ಕೆ ಸಿದ್ಧವಾಗಿರುವುದಾಗಿ ಪರೋಕ್ಷ ಸಂದೇಶ ರವಾನಿಸಿದೆ. ಇಂದು ಬೆಳಗ್ಗೆ ಕ್ಷಿಪಣಿ ಪರೀಕ್ಷೆಯ 18 ಸೆಕೆಂಡ್ಗಳ ವಿಡಿಯೋವನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.
ಅರೆಬ್ಬಿ ಸಮುದ್ರದ ಯಾವುದೋ ಒಂದು ಪ್ರದೇಶದಲ್ಲಿ ಐಎನ್ಎಸ್ ಪ್ರಬಾಲ್ ಸಮರ ನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ದೂರದಲ್ಲಿ ಗುರಿಯಂತಿದ್ದ ಇನ್ನೊಂದು ನಿಷ್ಪ್ರಯೋಕ ನೌಕೆಯನ್ನು ಉಡಾಯಿಸಿದೆ. ಈ ಕವಾಯತಿನ ವಿಡಿಯೋ ಇದಾಗಿದೆ ಎಂದು ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.
ಸಮುದ್ರದಲ್ಲಿ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಕೆಲವು ಸಮರ ನೌಕೆಗಳು, ದಾಳಿ ಹೆಲಿಕಾಪ್ಟರ್ಗಳು, ಯುದ್ಧ ವಿಮಾನಗಳು ಕವಾಯತು ನಡೆಸಿದ್ದು, ಅದರ ಭಾಗವಾಗಿ ಈ ಕ್ಷಿಪಣಿ ಕವಾಯತು ಕೂಡ ನಡೆದಿತ್ತು. ಇದಕ್ಕೂ ಮುನ್ನ, ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್ ಗುರುವಾರವಷ್ಟೇ ನೌಕಾಪಡೆಯ ಸಮರ ಸಿದ್ಧತೆಯನ್ನು ಖುದ್ದುಪರಿಶೀಲಿಸಿದ್ದರು. (ಏಜೆನ್ಸೀಸ್)