More

    ಕುತ್ತಿಗೆಯಲ್ಲಾದ ಬದಲಾವಣೆ ನಿರ್ಲಕ್ಷಿಸಿದ ಯುವತಿ: ಕೊನೆಗೆ ವೈದ್ಯರ ಬಳಿ ಹೋದವಳಿಗೆ ಕಾದಿತ್ತು ಶಾಕ್​!

    ಲಂಡನ್​: ದೇಹದಲ್ಲಾಗುವ ಸಣ್ಣ ಬದಲಾವಣೆಯನ್ನು ನಿರ್ಲಕ್ಷಿಸಿದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಿಸಬೇಕಾತ್ತದೆ ಎಂಬುದಕ್ಕೆ ಇಂಗ್ಲೆಂಡ್​ನ ಸ್ಟಾಫೊರ್ಡ್​ಶೈರ್​ನ ಟನ್​ಸ್ಟಾಲ್​ ನಿವಾಸಿಯೊಬ್ಬರು ಜೀವಂತ ಉದಾಹರಣೆಯಾಗಿದ್ದಾರೆ.

    ನರ್ಸರಿ ಉದ್ಯೋಗಿ ಆಗಿರುವ ಪೈಗೆ ಹೀಲ್ಯಾಂಡ್​ (19) ಇದೀಗ ಹಾಡ್ಜ್​ಕಿನ್​ ಲಿಂಪೋಮಾ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಆರು ತಿಂಗಳ ನಿರಂತರ ಕಿಮೋಥೆರಪಿಯನ್ನು ಎದುರಿಸುವಂತಾಗಿದೆ. ನಾಲ್ಕನೇ ಹಂತದ ಕ್ಯಾನರ್​ ಆಗಿದ್ದು, ಹಿಲ್ಯಾಂಡ್​ಳ ಸಣ್ಣ ನಿರ್ಲಕ್ಷ್ಯದಿಂದಾಗಿ ಇದೀಗ ಭಾರಿ ಬೆಲೆ ತರುವಂತಾಗಿದೆ.

    ಜನವರಿಯಲ್ಲಿ ಹೀಲ್ಯಾಂಡ್​ನ ಕುತ್ತಿಗೆಯ ಬಲಭಾಗದಲ್ಲಿ ಒಂದು ಸಣ್ಣ ಗಡ್ಡೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಸರಿಹೋಗಬಹುದು ಎಂದು ನಿರ್ಲಕ್ಷಿಸಿದ್ದಳು. ಆದರೆ, ಮಾರ್ಚ್​ನಲ್ಲಿ ಗಡ್ಡೆ ಸ್ವಲ್ಪ ದೊಡ್ಡದಾಗಿ ಬೆಳೆದಿತ್ತು. ಈ ಹಿಂದೆ ವೈದ್ಯರು ಸಹ ಅದರ ಬಗ್ಗೆ ಗಮನವಹಿಸು ಎಂದು ಎಚ್ಚರಿಸಿದ್ದರು. ಆದರೂ, ಸುಮ್ಮನಿದ್ದ ಹೀಲ್ಯಾಂಡ್​ ಗಡ್ಡೆ ದೊಡ್ಡದಾಗುತ್ತಿದ್ದಂತೆ ಕಳೆದ ತಿಂಗಳ ವೈದ್ಯರ ಮೊರೆ ಹೋಗಿದ್ದಾರೆ. ಈ ವೇಳೆ ಪರೀಕ್ಷಿಸಿದಾಗ ಆಕೆಗೆ ಕ್ಯಾನ್ಸರ್​ ಇರುವುದು ಪತ್ತೆಯಾಗಿದೆ.

    ತನ್ನ ರೋಗದ ಬಗ್ಗೆ ತಿಳಿದುಕೊಂಡ ಹೀಲ್ಯಾಂಡ್​, ನಿಮ್ಮ ದೇಹದಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಮೊದಲ ವೈದ್ಯರನ್ನು ಸಂಪರ್ಕಿಸಿ, ನನ್ನ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.

    ಇದನ್ನೂ ಓದಿ: ಮಾಜಿ ಗಂಡನಿಗೆ ತಿಂಗಳಿಗೆ 2 ಸಾವಿರ ರೂ. ಜೀವನಾಂಶ ನೀಡಲು ಮಹಿಳೆಗೆ ಕೋರ್ಟ್​ ಆದೇಶ..!

    ಇದೇ ವೇಳೆ ತನ್ನ ಘಟನೆ ಬಗ್ಗೆ ವಿವರಿಸಿರುವ ಹೀಲ್ಯಾಂಡ್​ ತನ್ನ ಬಾಯ್​ಫ್ರೆಂಡ್​ನೊಂದಿಗೆ ಇದ್ದಾಗ ಜನವರಿಯಲ್ಲಿ ಮೊದಲ ಬಾರಿಗೆ ಸಣ್ಣ ಗಡ್ಡೆ ಕುತ್ತಿಗೆಯಲ್ಲಿ ಕಾಣಿಸಿಕೊಂಡಿತು. ಸಣ್ಣದಾಗಿದ್ದರಿಂದ ನಿರ್ಲಕ್ಷಿಸಿದೆ. ಇದರ ನಡುವೆ ಕರೊನಾ ವೈರಸ್​ ಲಾಕ್​ಡೌನ್​ ಇದ್ದರಿಂದ ವೈದ್ಯರ ಬಳಿಗೆ ಹೋಗಲಿಲ್ಲ. ಕೊನೆಗೊಮ್ಮೆ ಆನ್​ಲೈನ್​ ಮೂಲಕ ಸಮಯ ನಿಗದಿ ಪಡಿಸಿದೆ. ಆದರೆ, ಗಡ್ಡೆ ಕುರಿತು ಸ್ಪಷ್ಟವಾಗಿ ಪರೀಕ್ಷಿಸಲು ಸಾಧ್ಯವಾಗಲಿಲ್ಲ. ರೋಗ ಪರೀಕ್ಷೆ ಮಾಡಿಸಲು ಸುಮಾರು 6 ತಿಂಗಳು ತೆಗೆದುಕೊಂಡಿತು ಅಷ್ಟರಲ್ಲಿ ಗಡ್ಡೆ ದೊಡ್ಡದಾಗಿ ಬೆಳೆದಿದ್ದರಿಂದ ಕೊನೆಗೂ ಕಳೆದ ತಿಂಗಳು ವೈದ್ಯರ ಬಳಿ ತೆರಳಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಕ್ಯಾನ್ಸರ್​ ಇರುವುದಾಗಿ ಹೇಳಿದರು. ಅದರಲ್ಲೂ ನಾಲ್ಕನೇ ಹಂತದ ಕ್ಯಾನ್ಸರ್​ ಎಂಬುದನ್ನು ಕೇಳಿ ನಿಜಕ್ಕೂ ಶಾಕ್​ ಆಯಿತು ಎನ್ನುತ್ತಾರೆ ಹೀಲ್ಯಾಂಡ್​.

    ರೋಗದ ಬಗ್ಗೆ ತಿಳಿದಕೂಡಲೇ ನಾನು ಮತ್ತು ನನ್ನ ತಾಯಿ ಕುಸಿದು ಬಿದ್ದೆವು. ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ನಾನು ಪಾಸಿಟಿವ್​ ಆಗಿ ಉಳಿಯಲು ಯತ್ನಿಸಿದರೂ ಸಹ ಒಮ್ಮೊಮ್ಮೆ ತುಂಬಾ ದುಃಖವಾಗುತ್ತದೆ. ಸದ್ಯ ನಾನು ಕಿಮೋಥೆರಪಿಯಲ್ಲಿ ತೊಡಗಿಕೊಂಡಿದ್ದೇನೆ. ಇದಕ್ಕಾಗಿ ನಾನು ನನ್ನ ಕೆಲಸವನ್ನು ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಜತೆಗೆ ನನ್ನಂತೆ ಮಾಡಬೇಡಿ ಎಂದು ಜನರನ್ನು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಮನೆಯೊಳಗೆ ಬಂತು ಸಯಾಮಿ ಹಾವು- ಒಂದೇ ದೇಹ ಎರಡು ತಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts