More

    ಮನೆಯೊಳಗೆ ಬಂತು ಸಯಾಮಿ ಹಾವು- ಒಂದೇ ದೇಹ ಎರಡು ತಲೆ!

    ವಾಷಿಂಗ್ಟನ್​: ಅಪರೂಪದ ಎರಡು ತಲೆಯ ದಕ್ಷಿಣ ಕಪ್ಪು ರೇಸರ್ ಇತ್ತೀಚೆಗೆ ಅಮೆರಿಕದ ಮನೆಯೊಳಕ್ಕೆ ಕಾಣಿಸಿಕೊಂಡಿದೆ.

    ಪಾಮ್ ಹಾರ್ಬರ್‌ನ ನಿವಾಸದಲ್ಲಿ ಕೇ ರೋಜರ್ಸ್ ಎಂಬುವವರ ಮನೆಯಲ್ಲಿ ಈ ಹಾವು ಕಾಣಿಸಿಕೊಂಡಿದೆ. ಎರಡು ತಲೆಗಳ ಹಾವಿನ ತಳಿಗಳು ಇವೆ. ಆದರೆ ಇಲ್ಲಿ ಕಂಡುಬಂದಿರುವ ಈ ಹಾವಿನ ತಳಿಗೆ ನಿಜವಾಗಿಯೂ ಎರಡು ತಲೆಗಳು ಇರುವುದಿಲ್ಲ. ಬದಲಿಗೆ ಇದು ಭ್ರೂಣದಲ್ಲಿದ್ದಾಗ ಕುಂಠಿತಗೊಂಡಿರುವ ಬೆಳವಣಿಗೆಯಿಂದ ಹೀಗೆ ಆಗಿರುವುದಾಗಿ ಸಂಶೋಧಕರು ಹೇಳಿದ್ದಾರೆ.

    ಇದನ್ನು ವೈದ್ಯಕೀಯ ಭಾಷೆಯಲ್ಲಿ ಬೈಸ್ಫಾಲಿ ಎಂದು ಕರೆಯಲಾಗುತ್ತದೆ. ಹಾವಿನಲ್ಲಿ ಈ ವಿದ್ಯಮಾನವು ಅಪರೂಪವಾದದ್ದರು. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಎರಡು ಮೊನೊಜೈಗೋಟಿಕ್ ಅವಳಿಗಳು ಬೇರ್ಪಡಿಸಲು ವಿಫಲವಾದಾಗ ಇಂಥ ಅನಾಹುತಗಳು ಸಂಭವಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

    ಮನೆಯೊಳಗೆ ಬಂತು ಸಯಾಮಿ ಹಾವು- ಒಂದೇ ದೇಹ ಎರಡು ತಲೆ!

    ಮನುಷ್ಯರಲ್ಲಿ ಸಯಾಮಿ ಅವಳಿಗಳಂತೆಯೇ ಇದೂ ಒಂದು. ಆದರೆ ಸಾಮಾನ್ಯವಾಗಿ ಸಯಾಮಿಗಳಲ್ಲಿ ದೇಹ ಪ್ರತ್ಯೇಕವಾಗಿದ್ದು, ತಲೆ ಅಥವಾ ಇನ್ನಾವುದಾದರೂ ಅಂಗಗಳು ಜೋಡಿಸಿಕೊಳ್ಳುತ್ತವೆ. ಆದರೆ ಹಾವಿನಲ್ಲಿ ಎರಡು ದೇಹಗಳು ಒಂದೇಯಾಗಿ ತಲೆಗಳು ಎರಡೆರಡಾಗಿ ಬೇರ್ಪಡುತ್ತವೆ.

    ಇಂಥ ಹಾವುಗಳು ಕಾಡಿನಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ, ಅರಣ್ಯ ಸಿಬ್ಬಂದಿ ಇದನ್ನು ತೆಗೆದುಕೊಂಡು ಹೋಗಿದ್ದು, ಅಲ್ಲಿಯೇ ಸಾಕುತ್ತಿದ್ದಾರೆ. ಇದು ಮನೆಯೊಳಕ್ಕೆ ಬಂದಾಗ ಮೊದಲು ಗಾಬರಿಯಾಯಿತು. ಆದರೆ ಅದು ತುಂಬಾ ಕ್ಯೂಟ್​ ಹಾವಾಗಿತ್ತು. ನನ್ನ ಮಗಳು ಅದನ್ನು ಸಾಕುವ ಎಂದುಕೊಂಡಿದ್ದಳು. ಆದರೆ ಅದನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ ಎಂದು ಮಹಿಳೆ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…

    ಮೋದಿಜೀ… ಸುಳ್​ ಹೇಳ್ಬೇಡಿ… ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts