ಯೂಟ್ಯೂಬರ್ ಸೌರಭ್ ಜೋಶಿ ಪತ್ನಿ ಅವಂತಿಕಾ ಭಟ್  
ದೇಶ

ವೀವ್ಸ್​ಗಾಗಿ ಇದೆಂಥಾ ಹುಚ್ಚಾಟ? ನಾಯಿ ಬೌಲ್​ಗೆ ನೀರು ಸುರಿದು ಪತ್ನಿಯೊಂದಿಗೆ ಅಸಭ್ಯ ವರ್ತನೆ, ನೆಟ್ಟಿಗರ ಆಕ್ರೋಶ! YouTuber

ಟ್ರೂಥ್​ ಅಂಡ್​ ಡೇರ್ (Dare) ಆಟದ ಹೆಸರಿನಲ್ಲಿ ಯೂಟ್ಯೂಬರ್ ಒಬ್ಬರು ತಮ್ಮ ಹೆಂಡತಿಯನ್ನು ಅನುಚಿತವಾಗಿ ನಡೆಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕೆಂಬ ಉದ್ದೇಶದೊಂದಿಗೆ ಇನ್‌ಫ್ಲುಯೆನ್ಸರ್‌ಗಳು ಮಾಡುತ್ತಿರುವ ಹುಚ್ಚಾಟಗಳು ಮಿತಿಮೀರುತ್ತಿದೆ. ಇದೀಗ ಪ್ರಸಿದ್ಧ ಯೂಟ್ಯೂಬರ್ ( YouTuber ) ಒಬ್ಬರು ತಮ್ಮ ಪತ್ನಿಯನ್ನು ನಡೆಸಿಕೊಂಡಿರುವ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರೂಥ್​ ಅಂಡ್​ ಡೇರ್ (Dare) ಆಟದ ಹೆಸರಿನಲ್ಲಿ ಯೂಟ್ಯೂಬರ್ ಒಬ್ಬರು ತಮ್ಮ ಹೆಂಡತಿಯನ್ನು ಅನುಚಿತವಾಗಿ ನಡೆಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದೇಶಾದ್ಯಂತ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಪ್ರಸಿದ್ಧ ಯೂಟ್ಯೂಬರ್ ಸೌರಭ್ ಜೋಶಿ, ಇತ್ತೀಚೆಗೆ ತಮ್ಮ ಪತ್ನಿ ಅವಂತಿಕಾ ಭಟ್ ಜೊತೆ 'ಟ್ರೂತ್ ಆರ್ ಡೇರ್' (Truth or Dare) ಆಟವಾಡಿದ್ದಾರೆ. ಈ ಸಂದರ್ಭದಲ್ಲಿ ಅವಂತಿಕಾ ಅವರು 'ಡೇರ್' ಆಯ್ಕೆ ಮಾಡಿಕೊಂಡಾಗ, ಸೌರಭ್ ಜೋಶಿ ವಿಚಿತ್ರವಾದ ಹಾಗೂ ಅಸಹ್ಯಕರವಾದ ಸವಾಲೊಂದನ್ನು ಮುಂದಿಟ್ಟರು.

ಆ ಸವಾಲು ಏನೆಂದರೆ, ಮನೆಯ ಸಾಕು ನಾಯಿ 'ಒರಿಯೋ' (Oreo) ಕುಡಿಯುವ ನೀರಿನ ಬೌಲ್‌ನಿಂದ, ನಾಯಿಯಂತೆ ವರ್ತಿಸಿ ನೀರು ಕುಡಿಯಬೇಕು ಎಂದು ಪತ್ನಿಗೆ ಸವಾಲು ಹಾಕಿದರು. ಪತಿಯ ಈ ಮಾತಿಗೆ ಅವಂತಿಕಾ ಮೊದಲು ಅಸಮಾಧಾನ ಹಾಗೂ ಸಿಟ್ಟು ವ್ಯಕ್ತಪಡಿಸಿದರೂ, ಸವಾಲನ್ನು ಸ್ವೀಕರಿಸಿ ನಾಯಿಯ ಬೌಲ್‌ನಿಂದ ನೀರು ಕುಡಿದಿದ್ದಾರೆ.

ಸೌರಭ್ ಜೋಶಿ ಈ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಸೌರಭ್ ಜೋಶಿ ಅವರ ಅನುಚಿತ ವರ್ತನೆಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ನಿಮಗೆ ಮಾನವೀಯತೆ ಇದೆಯಾ? ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ, (ಏಜೆನ್ಸೀಸ್​).