ರಿಂಗ್ ರೋಡ್ ಕೊಲೆ ಪ್ರಕರಣ: ಶುಭಾ ಶಂಕರನಾರಾಯಣ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಜ್ಯ ಸಚಿವ ಸಂಪುಟ! Ring Road Shubha Case

ಶುಭಾ ಶಂಕರನಾರಾಯಣ್ ತಮಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಗೆ ಕ್ಷಮಾದಾನ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ಕುರಿತು ಸೂಕ್ತ ಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದರು.
Ring Road Shubha Case
ಶುಭಾ ಶಂಕರನಾರಾಯಣ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಜ್ಯ ಸಚಿವ ಸಂಪುಟ!
Published on: 

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಿಂಗ್ ರೋಡ್‌ನಲ್ಲಿ ನಡೆದ ಐಟಿ ಉದ್ಯೋಗಿ ಗಿರೀಶ್​ ಕೊಲೆ ಪ್ರಕರಣದಲ್ಲಿ ( Ring Road Shubha Case ) ಕ್ಷಮಾಧಾನ ಕೋರಿ ಪ್ರಮುಖ ಅಪರಾಧಿ ಶುಭಾ ಶಂಕರನಾರಾಯಣ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಇಂದು ತಿರಸ್ಕರಿಸಿದೆ.

ಶುಭಾ ಶಂಕರನಾರಾಯಣ್ ತಮಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಗೆ ಕ್ಷಮಾದಾನ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ಕುರಿತು ಸೂಕ್ತ ಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದರು. ಇದೀಗ ತಮ್ಮ ಅಭಿಪ್ರಾಯ ತಿಳಿಸಿರುವ ರಾಜ್ಯ ಸರ್ಕಾರ ಅರ್ಜಿಯನ್ನು ತಿರಸ್ಕರಿಸಿದೆ. ಕ್ಷಮಾಧಾನ ಅರ್ಜಿಯು ಇಲ್ಲಿನ ಕಾನೂನಿನ ಚೌಕಟ್ಟಿನ ಒಳಗಿಲ್ಲ ಎಂಬ ಕಾರಣ ನೀಡಿ ಸಚಿವ ಸಂಪುಟ ಸಭೆ ತಿರಸ್ಕಾರ ಮಾಡಿದೆ. ಈ ವಿಚಾರವನ್ನು ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರು ಸಂಪುಟ ಸಭೆಯ ಬಳಿಕ ವಿಧಾನಸೌಧದ ಮುಂದೆ ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸಿದ್ದಾರೆ.

Also Read
ಸ್ಟಿಂಗ್ ಆಪರೇಷನ್ ವಿವಾದ: RSSನ ಹೊಸ ಹುಡುಗ ಎಂದ ಖರ್ಗೆಗೆ ನಾಲಾಯಕ್ ಮಂತ್ರಿ ಎಂದ HDK, ತಾರಕಕ್ಕೇರಿದ ವಾಕ್ಸಮರ! HDK vs Priyank Kharge
Ring Road Shubha Case

ಸುಪ್ರೀಂಕೋರ್ಟ್ ಈ ಹಿಂದೆ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ ನಂತರ ಘಟನೆ ನಡೆದ ಸಮಯದಲ್ಲಿ ಆರೋಪಿಗಳು ಯೌವ್ವನದ ಆವೇಶದಲ್ಲಿ ದುಡುಕಿದರು. ಬಳಿಕ ಜೈಲಿನಲ್ಲಿ ಸನ್ನಡತೆ ಪ್ರದರ್ಶಿಸಿದ್ದಾರೆ ಎಂಬುದನ್ನು ಪರಿಗಣಿಸಿ, ಸಂವಿಧಾನದ ವಿಧಿ 161ರ ಅಡಿಯಲ್ಲಿ ರಾಜ್ಯಪಾಲರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತು. ಈ ಅವಕಾಶವನ್ನು ಬಳಸಿಕೊಂಡು ಶುಭಾ ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರ ಕಚೇರಿಯು ಗೃಹ ಸಚಿವಾಲಯ ಹಾಗೂ ಕಾನೂನು ಇಲಾಖೆಯ ಪರಿಶೀಲನೆಗೆ ರವಾನಿಸಿತು. ಇದೀಗ ಸರ್ಕಾರ ಕೂಡ ಅರ್ಜಿಯನ್ನು ತಿರಸ್ಕರಿಸಿದೆ.

ಏನಿದು ಪ್ರಕರಣ?

2003ರ ಡಿ.3ರಂದು ಕಾನೂನು ವಿದ್ಯಾರ್ಥಿನಿ ಶುಭಾಗೆ ಇಂಟೆಲ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಬಿ.ವಿ. ಗಿರೀಶ್ ಎಂಬಾತನ ಜೊತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಆದರೆ, ಶುಭಾಗೆ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ತನ್ನ ಜೂನಿಯರ್ ಅರುಣ್ ವರ್ಮಾ ಎಂಬಾತನ ಮೇಲೆ ಒಲವಿತ್ತು. ಹೀಗಾಗಿ ನಿಶ್ಚಿತಾರ್ಥವನ್ನು ಮುರಿಯಲು ಮತ್ತು ಪ್ರಿಯಕರನೊಂದಿಗೆ ಇರಲು ನಿರ್ಧರಿಸಿದ ಆಕೆ, ಗಿರೀಶ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು.

Also Read
ಒಂದು ವೇಳೆ ಮತ್ತೆ ನನ್ನ ಬಿಗ್​ಬಾಸ್​ ಮನೆಯೊಳಗೆ ಬಿಟ್ರೆ... ಅಚ್ಚರಿ ಹೇಳಿಕೆ ನೀಡಿದ ಮಾಡರ್ನ್​ ಮಹಾಕವಿ ಮಂಜ! Modern Mahakavi Manja
Ring Road Shubha Case

ಕೃತ್ಯದ ದಿನದಂದು ಗಿರೀಶ್‌ನನ್ನು ಕೋರಮಂಗಲ ಮತ್ತು ಎಚ್‌ಎಎಲ್ ಸಂಪರ್ಕಿಸುವ ರಿಂಗ್ ರೋಡ್‌ಗೆ ಭೋಜನದ ನೆಪದಲ್ಲಿ ಶುಭಾ ಕರೆದೊಯ್ದಿದ್ದಳು. ವಿಮಾನಗಳು ಲ್ಯಾಂಡಿಂಗ್ ಆಗುವುದನ್ನು ನೋಡೋಣ ಎಂದು ನಂಬಿಸಿ ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸುವಂತೆ ತಿಳಿಸಿದ್ದಳು. ಪೂರ್ವಯೋಜಿತ ಸಂಚಿನಂತೆ ಪ್ರಿಯಕರ ಅರುಣ್ ವರ್ಮಾ ಹಾಗೂ ಆತನ ಸಹಚರರಾದ ವೆಂಕಟೇಶ್ ಮತ್ತು ದಿನೇಶ್ ಸ್ಥಳಕ್ಕೆ ಆಗಮಿಸಿ, ಗಿರೀಶ್‌ನ ತಲೆಗೆ ಶಾಕ್ ಅಬ್ಸಾರ್ಬರ್‌‌ನಿಂದ ಹೊಡೆದು ಕೊಲೆ ಮಾಡಿದ್ದರು. ಆರಂಭದಲ್ಲಿ ಇದೊಂದು ಅಪರಿಚಿತ್ರ ದಾಳಿ ಅಥವಾ ದರೋಡೆ ಯತ್ನದಂತೆ ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ನಂತರದ ತನಿಖೆಯಲ್ಲಿ ಇದೊಂದು ಕೊಲೆ ಎಂದು ಸಾಬೀತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net