ಹಿಮಾಚಲದ ಬೆಟ್ಟದಲ್ಲಿ ಯುವತಿಯರ ಫೈಟಿಂಗ್
- ಹಿಮಾಚಲದ ಬೆಟ್ಟದಲ್ಲಿ ಯುವತಿಯರ ಫೈಟಿಂಗ್
- ಕೂದಲನ್ನು ಎಳೆದು ಬಡಿದಾಡಿಕೊಂಡ ಗರ್ಲ್ಸ್
- ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ಎಂದರೆ ನಮಗೆ ನೆನಪಾಗುವುದು ಮೈಮನ ತಣಿಸುವ ತಂಪಾದ ಗಾಳಿ, ಎತ್ತರದ ಪರ್ವತಗಳು ಮತ್ತು ಪ್ರಶಾಂತವಾದ ವಾತಾವರಣ. ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ.
ಆದರೆ ಇತ್ತೀಚೆಗೆ ಪ್ರವಾಸಕ್ಕೆ ಬಂದಿದ್ದ ಯುವತಿಯರ ಗುಂಪೊಂದು ಈ ಶಾಂತಿಯುತ ತಾಣವನ್ನೇ ರಣರಂಗವನ್ನಾಗಿ ಮಾರ್ಪಡಿಸಿದೆ. ಹೌದು, ಪರ್ವತಗಳ ಮಡಿಲಲ್ಲಿ ಯುವತಿಯರು ಬೀದಿಯಲ್ಲಿ ಜಗಳವಾಡುವಂತೆ ಕೂದಲು ಎಳೆದಾಡುತ್ತಾ ಹೊಡೆದಾಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ನಡೆದಿದ್ದೇನು?
ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಯುವತಿಯರ ನಡುವೆ ಯಾವುದೋ ವಿಷಯಕ್ಕೆ ಶುರುವಾದ ಸಣ್ಣ ಮಾತಿನ ಚಕಮಕಿ, ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ. ಒಬ್ಬರಿಗೊಬ್ಬರು ಕೆಟ್ಟದಾಗಿ ಬೈದಾಡಿಕೊಳ್ಳುತ್ತಾ ಸಾರ್ವಜನಿಕವಾಗಿ ರಸ್ತೆಯಲ್ಲೇ ಹೊಡೆದಾಡಲು ಶುರು ಮಾಡಿದ್ದಾರೆ. ಜಗಳ ಎಷ್ಟು ಭೀಕರವಾಗಿತ್ತೆಂದರೆ, ಪರಸ್ಪರರ ಕೂದಲು ಹಿಡಿದು ಎಳೆದಾಡುತ್ತಾ ನೆಲಕ್ಕೆ ಬೀಳುವವರೆಗೂ ಈ ಕುಸ್ತಿ ಮುಂದುವರೆದಿದೆ.
ವಿಪರ್ಯಾಸವೆಂದರೆ, ಇವರನ್ನು ತಡೆಯಲು ಹೋದ ಸ್ನೇಹಿತರಿಗೂ ಇವರನ್ನು ಸಮಾಧಾನಪಡಿಸಲು ಸಾಧ್ಯವಾಗಿಲ್ಲ. ಈ ಜಗಳ ಕೇವಲ ಇಬ್ಬರಿಗೆ ಸೀಮಿತವಾಗದೆ, ವಿಡಿಯೋದ ಇನ್ನೊಂದು ಭಾಗದಲ್ಲಿ ಮತ್ತೆ ಇಬ್ಬರು ಯುವತಿಯರು ಇದೇ ರೀತಿ ರಂಪಾಟ ಮಾಡುತ್ತಿರುವುದನ್ನು ಕಾಣಬಹುದು. ಸುತ್ತಮುತ್ತಲಿದ್ದ ಪ್ರವಾಸಿಗರು ಮಾತ್ರ ಅಚ್ಚರಿಯಿಂದ ಈ ಲೈವ್ ಸಿನಿಮಾ ನೋಡುತ್ತಾ ನಿಂತಿದ್ದರು.
ನೆಟ್ಟಿಗರಿಂದ ತರಾಟೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಕಮೆಂಟ್ ಕುಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಬ್ಬ ಬಳಕೆದಾರರು ಮಹಿಳಾ ಸಬಲೀಕರಣ ಎಂದರೆ ಇದೇ ನೋಡಿ ಗೆಳೆಯರೇ ಎಂದು ಲೇವಡಿ ಮಾಡಿದರೆ, ಮತ್ತೊಬ್ಬರು ನಾನು ಪರ್ವತಗಳನ್ನು ನೋಡಲು ಬಂದೆ, ಆದರೆ ಇಲ್ಲಿ ಇವರ ಗಲಾಟೆ ನೋಡಿ ಓಡಿ ಬಂದೆ ಎಂದು ಬರೆದಿದ್ದಾರೆ.
ಪೊಲೀಸ್ ಕ್ರಮವೇನು?
ಸದ್ಯದ ಮಟ್ಟಿಗೆ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಯಾವುದೇ ಅಧಿಕೃತ ದೂರು ದಾಖಲಿಸಿಕೊಂಡಿಲ್ಲ ಅಥವಾ ಕ್ರಮ ಕೈಗೊಂಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಯುವಜನತೆ ಪ್ರವಾಸಿ ತಾಣಗಳಿಗೆ ಹೋದಾಗ ಸಂಯಮದಿಂದ ವರ್ತಿಸಬೇಕು ಮತ್ತು ಪ್ರಕೃತಿಯ ಶಾಂತತೆಯನ್ನು ಕಾಪಾಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ,(ಏಜನ್ಸೀಸ್).