'ಈ ದೇಶಕ್ಕೆ ನಿಮ್ಮ ಅಗತ್ಯವಿದೆ, ಉಪವಾಸ ಸತ್ಯಾಗ್ರಹ ಕೈಬಿಡಿ' ಎಂದ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ 
ದೇಶ

ಈ ದೇಶಕ್ಕಾಗಿ ನೀವು ಬದುಕಬೇಕು: 25 ದಿನಗಳಿಂದ ಸೋನಮ್​ ವಾಂಗ್​ಚುಕ್​ ಉಪವಾಸ; ಸತ್ಯಾಗ್ರಹ ಕೈ ಬಿಡುವಂತೆ ಅಭಿಜಿತ್​ ದೀಪ್ಕೆ ಒತ್ತಾಯ! Abhijit Dipke on Sonam Wangchuk

ಪ್ರಮುಖ ಮುಖ್ಯಾಂಶಗಳು

  • ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ 25 ದಿನಗಳಿಂದ ಉಪವಾಸ ನಿರತರಾಗಿರುವ ಸೋನಮ್ ವಾಂಗ್‌ಚುಕ್‌
  • 'ಈ ದೇಶಕ್ಕೆ ನಿಮ್ಮ ಅಗತ್ಯವಿದೆ, ಉಪವಾಸ ಸತ್ಯಾಗ್ರಹ ಕೈಬಿಡಿ' ಎಂದ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ಹಂಚಿಕೊಂಡಿರುವ ದೀಪ್ಕೆ
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದಿ ಸೋನಮ್​ ವಾಂಗ್​ಚುಕ್​ ಕಳೆದ 25 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಆಚರಿಸುತ್ತಿದ್ದಾರೆ.
ಸೋಮವಾರ (ಜು.20) ದೆಹಲಿಯಲ್ಲಿ ನಡೆದ ಪ್ರತಿಭಟನೆ ಬಳಿಕ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾದ ಹಿನ್ನಲೆ, ಎರಡು ದಿನದಿಂದ ಉಪವಾಸವಿದ್ದ, ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ತಮ್ಮ ಉಪವಾಸವನ್ನು ಹಿಂಪಡೆದಿದ್ದರು. ಈಗ ಅಭಿಜಿತ್​ ದೀಪ್ಕೆ, ಸೋನಮ್​ ವಾಂಗ್​ಚುಕ್ (Abhijit Dipke on Sonam Wangchuk)​ ಅವರಿಗೂ ತಮ್ಮ ಉಪವಾಸವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.

ದೇಶಕ್ಕೆ ನಿಮ್ಮ ಅಗತ್ಯವಿದೆ!

ಕಳೆದ 25 ದಿನಗಳಿಂದ ಉಪವಾಸ ಮಾಡುತ್ತಿರುವ ಸೋನಮ್​ ವಾಂಗ್​ಚುಕ್​ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿರುವ ದೀಪ್ಕೆ, ಸರ್​ ಈ ದೇಶಕ್ಕೆ ನಿಮ್ಮ ಅಗತ್ಯವಿದೆ, ನಿಮ್ಮ ಜೀವದ ಮೌಲ್ಯ ಈ ಹೋರಾಟಕ್ಕಿಂತ ಹೆಚ್ಚಿದೆ. ಹೀಗಾಗಿ ನೀವು ಈ ಕೂಡಲೇ ಉಪವಾಸವನ್ನು ಕೈಬಿಡಬೇಕೆಂದು ದೀಪ್ಕೆ ವಾಂಗ್​ಚುಕ್​ ಅವರಲ್ಲಿ ಮನವಿ ಮಾಡಿದ್ದಾರೆ. ಅದರೆ, ನಮ್ಮ ಈ ಹೋರಾಟ ಮುಂದುವರಿಯುತ್ತದೆ. ನಮ್ಮ ಬೇಡಿಕೆ ಈಡೇರುವರೆಗೆ ನಮ್ಮ ಹೋರಾಟ ಜಂತರ್​-ಮಂತರ್​ನಲ್ಲಿ ಮುಂದುವರಿಯಲಿದೆ ಎಂದು ದೀಪ್ಕೆ ಹೇಳಿದ್ದಾರೆ.
ಸರ್ಕಾರ ನಮ್ಮನ್ನು ಸಂಪರ್ಕಿಸಿದೆ!
ನಮ್ಮ ಹೋರಾಟ ಸರ್ಕಾರದ ಗಮನ ಸೆಳೆದಿದ್ದು, ಸರ್ಕಾರ ನಮ್ಮನ್ನು ಈಗಾಗಲೇ ಸಂಪರ್ಕಿಸಿದೆ, ಹಾಗೂ ನಾವು ಕೂಡ ಮಾತುಕತೆಗೆ ಸಿದ್ಧವಾಗಿದ್ದೆವೆ ಎಂದು ಕಾಕ್ರೋಚ್​ ಪಾರ್ಟಿ ವಕ್ತಾರ ಆಶುತೋಶ್​ ರಾಂಕಾ ಹೇಳಿದ್ದಾರೆ. ಈ ಮಾತುಕತೆ ಜಂತರ್​-ಮಂತರ್​ನಲ್ಲಿ ಅಥವಾ ಎರಡು ಪಕ್ಷದವರು ಒಪ್ಪುವ ಶಾಂತಯುತ ಸ್ಥಳದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ನಾವು ಈಗಾಗಲೇ ಮೂರು ಬೇಡಿಕೆಗಳನ್ನು ಸಲ್ಲಿಸಿದ್ದೆವೆ. {1. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ,2. ಸೋನಮ್​ ವಾಂಗ್​ಚುಕ್​ ಜೊತೆ ಮಾತುಕತೆ, 3. ನೀಟ್​ ಪರೀಕ್ಷೆ ಅಕ್ರಮದಿಂದ ಆತ್ಮಹತ್ಯೆಗೆ ಶರಣಾದ ಮಕ್ಕಳಿಗೆ ಒಂದು ಕೋಟಿ ಪರಿಹಾರ}, ಈಗ ನಮ್ಮ ನಾಲ್ಕನೇ ಬೇಡಿಕೆ ಏನೆಂದರೆ ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯಾರ ಮೇಲೆ ಸಹ ಪ್ರಕರಣ ದಾಖಲಾಗಬಾರದು ಎನ್ನುವುದು ನಮ್ಮು ನಾಲ್ಕನೇ ಬೇಡಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).