ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ಮೌಲಾನಾ ಜರ್ಜೀಸ್ ಅನ್ಸಾರಿ 
ದೇಶ

ಯೋಗಿ ಜೀ ಕಠಿಣ ಕ್ರಮ ಕೈಗೊಳ್ಳಿ: ಶ್ರೀ ಕೃಷ್ಣನನ್ನು ಮುಸ್ಲಿಂ ಎಂದ ಮೌಲಾನಾ; ಜರ್ಜೀಸ್ ಅನ್ಸಾರಿ ವಿರುದ್ಧ 95 ದೂರು ದಾಖಲು, ಕೆಂಡ ಕಾರುತ್ತಿರುವ ಹಿಂದೂ ಮಹಾಸಭಾ! Maulana Jarjis Ansari

ವಿನಾಯಕ ನಾಯಕ

ಪ್ರಮುಖ ಮುಖ್ಯಾಂಶಗಳು

  • ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ಮೌಲಾನಾ ಜರ್ಜೀಸ್ ಅನ್ಸಾರಿ
  • ಅನ್ಸಾರಿ ನೀಡಿರುವ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈಗಾಗಲೇ 95ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ
  • ಮೌಲಾನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿಂದೂ ಮಹಾಸಭಾ ಆಗ್ರಹ
ಉತ್ತರ ಪ್ರದೇಶ: ಹಿಂದೂಗಳ ಆರಾಧ್ಯ ದೈವ ಶ್ರೀ ಕೃಷ್ಣ ಪರಮಾತ್ಮ ಒಬ್ಬ ಮುಸ್ಲಿಂ, ಅವನು ದಿನಕ್ಕೆ ಐದು ಬಾರಿ ನಮಾಜ್​ ಮಾಡುತ್ತಿದ್ದ ಎಂದು ಮೌಲಾನಾ ಜರ್ಜೀಸ್ ಅನ್ಸಾರಿ (Maulana Jarjis Ansari) ನೀಡಿದ್ದ ಹೇಳಿಕೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಲ್ಲಿವರೆಗೆ ಸುಮಾರು 95 ದೂರುಗಳು ದಾಖಲಾಗಿವೆ ಎಂದು ವರದಿಯಾಗಿದೆ. 
ಉತ್ತರ ಪ್ರದೇಶದ ಇಟಾವಾದ ನಿವಾಸಿ ಆಗಿರುವ  ಮೌಲಾನಾ ಜರ್ಜೀಸ್ ಅನ್ಸಾರಿ ಕಳೆದ ತಿಂಗಳಿ ಜಾರ್ಖಂಡ್​ನಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಆಕ್ರೋಶಕ್ಕೆ ಕಾರಣವಾಗಿದೆ. 

ಯೋಗಿ ಜೀ ಕಠಿಣ ಕ್ರಮ ಕೈಗೊಳ್ಳಿ! 

ಮೌಲಾನಾ ಜರ್ಜೀಸ್ ಅನ್ಸಾರಿ ಮೇಲೆ ಸಾಕಷ್ಟು ದೂರನ್ನು ನೀಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ, ಶಿಶಿರ್ ಚತುರ್ವೇದಿ, ಈ ಮೌಲಾನಾ ಜರ್ಜೀಸ್ ಅನ್ಸಾರಿ ಮೇಲೆ ನಮ್ಮ ಸಂಘಟನೆ ದೂರನ್ನು ನೀಡಿದೆ. ಈ ಮೌಲಾನಾ ಮೇಲೆ ಎಫ್​ಐಆರ್​ ದಾಖಲಾಗಬೇಕು, ಹಾಗೆಯೇ ಇವನ ಮೇಲೆ ಕಠಿಣ ಕ್ರಮ ಜಾರಿಯಾಗಬೇಕೆಂದು ನಾನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಲ್ಲಿ ಮನವಿ ಮಾಡುತ್ತೆನೆಂದು ಹೇಳಿದ್ದಾರೆ. 
ಇಂತಹ ವ್ಯಕ್ತಿಗಳಿಂದಲೇ ಸಮಾಜದಲ್ಲಿ ಅಶಾಂತಿ ಮೂಡುತ್ತದೆ!
ಶ್ರೀ ಕೃಷ್ಣ ಪರಮಾತ್ಮ ಒಬ್ಬ ಮುಸಲ್ಮಾನ ಎಂಬ ಹೇಳಿಕೆ ಸಮಾಜ ಘಾತುಕ ಹೇಳಿಕೆಯಾಗಿದೆ. ಈ ಮೌಲಾನಾ ಜರ್ಜೀಸ್ ಅನ್ಸಾರಿ ರೀತಿಯ ಜನರಿಂದಲೇ ಹಿಂದೂ-ಮುಸ್ಲಿಮರಲ್ಲಿ ಏಕತೆ ಮೂಡುವುದು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಾಯಕ ಮೊಹ್ಸಿನ್ ರಜಾ ಆರೋಪಿಸಿದ್ದಾರೆ.
ಈ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್​ನ ದೆಸೆಯಿಂದ ಹಿಂದೂ ಧರ್ಮದ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವ ಸಂಸ್ಕೃತಿ ಬೆಳೆದು ಬಂದಿದೆ. ಇದರಿಂದ ಮುಸ್ಲಿಮರಿಗೆ ತೊಂದರೆಯೇ ಹೊರತು ಒಳ್ಳೆಯದಂತೂ ಖಂಡಿತ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).