Yo Yo Honey Singh 
ದೇಶ

‘ಈ ಚಳಿಯಲ್ಲಿ ಕಾರಿನಲ್ಲಿ ಸೆ* ಮಾಡಿ’ ಎಂದ ಹನಿ ಸಿಂಗ್ ! ಗಾಯಕನ ವರ್ತನೆಗೆ ನೆಟ್ಟಿಗರು ಫುಲ್ ಗರಂ..Yo Yo Honey Singh

ನವದೆಹಲಿ: ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಅಸಭ್ಯ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಡೆದಿದ್ದೇನು?
ಇತ್ತೀಚೆಗೆ ದೆಹಲಿಯ ಚಳಿಯ ವಾತಾವರಣದಲ್ಲಿ ಹನಿ ಸಿಂಗ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯ ಮೇಲೆ ಹಾಡುತ್ತಾ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದ ಹನಿ ಸಿಂಗ್, ದೆಹಲಿಯ ಚಳಿಯನ್ನು ಉಲ್ಲೇಖಿಸಿ ಒಂದು ಹೇಳಿಕೆ ನೀಡದರು.
"ಗಾಡಿ ಮೇ ಸೆಕ್ಸ್ ಕರೋ ದೆಹಲಿ ಕಿ ಥಂಡ್ ಮೇ..." (ದೆಹಲಿಯ ಚಳಿಯಲ್ಲಿ ಕಾರಿನೊಳಗೆ ಸೆಕ್ಸ್ ಮಾಡಿ) ಎಂದು ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.ಹನಿ ಸಿಂಗ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಜನರ ಮೇಲೆ ಪ್ರಭಾವ ಬೀರುವ ಕಲಾವಿದರೊಬ್ಬರು ವೇದಿಕೆಯ ಮೇಲೆ ಇಷ್ಟು ಕೀಳುಮಟ್ಟದ ಭಾಷೆ ಬಳಸುವುದು ಸರಿಯಲ್ಲ.ಮಹಿಳಾ ಸುರಕ್ಷತೆ ಮತ್ತು ದೆಹಲಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸಬೇಕಾದ ಹೊತ್ತಿನಲ್ಲಿ ಇಂತಹ ಹೇಳಿಕೆಗಳು ಬೇಜವಾಬ್ದಾರಿತನದಿಂದ ಕೂಡಿವೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಹನಿ ಸಿಂಗ್ ಅವರ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಕ್ಷಮೆಯಾಚನೆ ಬಂದಿಲ್ಲ.
ಹನಿ ಸಿಂಗ್​ ಹಿಂದೆ ಇರುವ ವಿವಾದಗಳು:
ಹನಿ ಸಿಂಗ್ ಅವರಿಗೆ ವಿವಾದಗಳೇನು ಹೊಸತಲ್ಲ. ಈ ಹಿಂದೆ ಕೂಡ ಅವರ ಹಾಡುಗಳಲ್ಲಿ ಮಹಿಳೆಯರನ್ನು ಕೀಳಾಗಿ ಚಿತ್ರಿಸುವ ಮತ್ತು ಅಶ್ಲೀಲ ಪದಗಳನ್ನು ಬಳಸುವ ಬಗ್ಗೆ ಅನೇಕ ಬಾರಿ ದೂರುಗಳು ದಾಖಲಾಗಿದ್ದವು.
ಇತ್ತೀಚೆಗಷ್ಟೇ ಅವರು ತಮ್ಮ ವೈಯಕ್ತಿಕ ಬದುಕು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ಈ ಹೇಳಿಕೆಯ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.