ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಇಬ್ಬರು ನಿವಾಸಿಗಳ ನಡುವೆ ನಡೆದ WWE ಸ್ಟೈಲ್ ಹೊಡೆದಾಟ
- ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಇಬ್ಬರು ನಿವಾಸಿಗಳ ನಡುವೆ ನಡೆದ WWE ಸ್ಟೈಲ್ ಹೊಡೆದಾಟ
- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ; ಸೋಷಿಯಲ್ ಮೀಡಿಯಾನಲ್ಲಿ ವೈರಲ್
- ಪೊಲೀಸ್ರಿಂದ ದೂರು ದಾಖಲು; ಮುಂದುವರಿದ ತನಿಖೆ
ಗಾಜಿಯಾಬಾದ್: ಕ್ಷುಲ್ಲಕ ಕಾರಣಕ್ಕೆ ಲಿಫ್ಟ್ವೊಂದರಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಿಬ್ಬರು ಬಡಿದಾಟ ಮಾಡಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Lift Fight Viral Video) ಆಗುತ್ತಿದೆ.
ಈ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಈ WWE ಶೈಲಿಯ ಫೈಟಿಂಗ್ ವಿಡಿಯೋ ಫುಲ್ ವೈರಲ್ ಆಗಿದೆ.
ಜಗಳಕ್ಕೆ ಕಾರಣವೇನು?
ಮಾಹಿತಿ ಪ್ರಕಾರ, ಈ ವೈರಲ್ ವಿಡಿಯೋನಲ್ಲಿರುವ ವ್ಯಕ್ತಿಗಳನ್ನು ಪ್ರದೀಪ್ ಕುಮಾರ್ ಹಾಗೂ ದೀಪಕ್ ಚೋಪ್ರಾ ಎಂದು ಗುರುತಿಸಲಾಗಿದೆ. ಇವರಿಬ್ಬರು ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಈ ಸಂಘಕ್ಕೆ ಸಂಬಂಧಿಸಿದ ಯಾವುದೋ ವಿಷಯಕ್ಕೆ ಈ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋನಲ್ಲಿ ಇಬ್ಬರು ಪುರುಷರು ಹಾಗೂ ಒರ್ವ ಮಹಿಳೆ ಲಿಫ್ಟ್ ಏರಿದ್ದಾರೆ. ಮಹಿಳೆ ತನ್ನ ಫ್ಲೋರ್ ಬಂದ ನಂತರ ಆಕೆ ಲಿಫ್ಟ್ನಿಂದ ಇಳಿದಿದ್ದಾಳೆ. ನಂತರ ಪುರುಷರಿಬ್ಬರ ನಡುವೆ ವಾಗ್ವಾದ ಆರಂಭವಾಗಿ, ನಂತರ ಇದು ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಇಳಿದಿದೆ.
ಆದರೆ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ಈ ಘಟನೆಯ ವಿಡಿಯೋ ದಿನಾಂಕ ಒಮ್ಮೆ 15-07-2026 ಎಂದು ತೋರಿಸಿದರೆ, ಇನ್ನೊಮ್ಮೆ 15-07-2004 ಎಂದು ತೋರಿಸಿದೆ. ಹೀಗಾಗಿ ಇದು ಎಂದು ನಡೆದ ಘಟನೆ ಎಂದು ನಿಖರವಾಗಿ ಹೇಳುವುದು ಅಸ್ಪಷ್ಟವಾಗಿದೆ. ಆದರೆ ಸಿಸಿಟಿವಿಯಲ್ಲಿ ಒಮ್ಮಮ್ಮೊ ಈ ರೀತಿ ಟೆಕ್ನಿಕಲ್ ಗ್ಲಿಚ್ ನಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪೊಲೀಸರಲ್ಲಿ ದೂರು ದಾಖಲು; ಮುಂದುವರಿದ ತನಿಖೆ!
ಈ ಸಿಸಿಟಿವಿಯನ್ನು ಆಧರಿಸಿ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ಇಬ್ಬರ ಮೇಲೂ ಎಫ್ಐಆರ್ ದಾಖಲಾಗಿದೆಯೇ? ಇಲ್ಲವೇ? ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರ ಗಮನವನ್ನು ಸೆಳೆದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇಷ್ಟು ಚಿಕ್ಕ ಲಿಫ್ಟ್ನಲ್ಲಿಯೇ ಇವರು ಹೀಗೆ ಹೊಡೆದಾಡಿದ್ದಾರೆ, ಇನ್ನು WWE ರಿಂಗ್ನಲ್ಲಿ ಇವರು ಇದ್ದರೆ ಮಜಾನೇ ಬೇರೆ ಇರುತ್ತಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮನೆಯಲ್ಲಿ ಮಾಡಲು ಬೇರೆನೂ ಕೆಲಸವಿಲ್ಲ ಎಂದು ಕಾಣಿಸುತ್ತದೆ, ಅದಕ್ಕೆ ಹೊಡೆದಾಟವನ್ನಾದರೂ ಮಾಡೋಣ ಅಂದುಕೊಂಡಿರಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಲಿಫ್ಟ್‌ನಲ್ಲಿ ಹೊಡೆದಾಡುವ ಬದಲು ಪಾಕಿಸ್ತಾನದ ಗಡಿಯಲ್ಲಾದರೂ ಹೋರಾಡಿ, ಸತ್ತರೆ ಹುತಾತ್ಮ ಎಂಬ ಪಟ್ಟವಾದರೂ ಸಿಗುತ್ತದೆ ಎಂದು ಮತ್ತೊಬ್ಬರು ಮಾರ್ಮಿಕವಾಗಿ ಹೇಳಿದ್ದಾರೆ, (ಏಜನ್ಸೀಸ್).