ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ನಗರಗಳ ಹೊಸ ಪಟ್ಟಿ ಬಿಡುಗಡೆ 
ದೇಶ

ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಪಟ್ಟಿ ಬಿಡುಗಡೆ; ಭಾರತದ ಮೂರು ನಗರಗಳಿಗೆ ಜಾಗತಿಕ ಮನ್ನಣೆ; ಪ್ರಪಂಚದ ಗಮನ ಸೆಳೆದ ವಡಾ ಪಾವ್​, ಕಚೋರಿ! Best Street Food

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ನಗರಗಳ ಹೊಸ ಪಟ್ಟಿ ಬಿಡುಗಡೆ
  • ಭಾರತದ ಮೂರು ನಗರಗಳಿಗೆ ಜಾಗತಿಕ ಮನ್ನಣೆ
  • ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮುಂಬೈ, ದೆಹಲಿ ಮತ್ತು ಜೈಪುರ್​
ನವದೆಹಲಿ: ಬೀದಿ ಬದಿ ಆಹಾರಗಳೆಂದರೆ ಬಹುತೇಕರಿಗೆ ಇಷ್ಟವಾಗುತ್ತದೆ. ಸ್ವಚ್ಛತೆ ವಿಷಯದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಬಿಟ್ಟರೆ ಕೆಲ ಸ್ಥಳಗಳಲ್ಲಿ ದೊರೆಯುವ ಆಹಾರ ಪದಾರ್ಥಗಳು ಯಾವ ಪಂಚತಾರಾ ಹೋಟೆಲ್​​ಗಳಲ್ಲಿ ಸಹ ದೊರೆಯುವುದಿಲ್ಲ ಎಂದರೆ ಉತ್ಪ್ರೆಕ್ಷೆಯಿಲ್ಲ.
ಇತ್ತೀಚೆಗೆ 2026 ನೇ ಸಾಲಿವ ವಿಶ್ವದ ಅತ್ಯುತ್ತಮ ಬೀದಿ ಬದಿ ಆಹಾರ (Best Street Food) ಗಳು ದೊರೆಯುವ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ನಮ್ಮ ದೇಶದ ಮೂರು ನಗರಗಳು ಸ್ಥಾನ ಪಡೆಯುವ ಮೂಲಕ ಹೆಮ್ಮೆಗೆ ಕಾರಣವಾಗಿದೆ.

ಹೌದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಮುಂಬೈ, ದೆಹಲಿ ಹಾಗೂ ಜೈಪುರ್​ ತಮ್ಮ ಹೆಸರನ್ನು ದಾಖಲಿಸಿದ್ದು, ಈಗ ಭಾರತದ ಬೀದಿ ಬದಿ ಆಹಾರಗಳಿಗೆ ಜಾಗತಿಕ ಮನ್ನಣೆ ದೊರೆತಿದೆ ಎಂದತೆ ಸುಳ್ಳಲ್ಲ.

ಟಾಪ್​ 20 ರಲ್ಲಿ ಮೂರು ನಗರಗಳು

ಬಿಡುಗಡೆಯಾಗಿರುವ ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ ಮಾಯಾನಗರಿ ಮುಂಬೈಯಿದ್ದು, ಇಲ್ಲಿ ದೊರೆಯುವ ವಡಾ ಪಾವ್​, ಪಾವ್​ಭಾಜಿ, ಭೇಲ್​ಪುರಿಗೆ ಪ್ರಪಂಚವೇ ಮರುಳಾಗಿದೆ ಎಂದರೆ ತಪ್ಪಾಗದು.

ಹಾಗೂ ತನ್ನ ಪಾರಂಪರಿಕ ಮಸಾಲೆ ಹಾಗೂ ಸಂಪ್ರದಾಯಬದ್ಧವಾದ ಕಚೋರಿ, ಮಿರ್ಚಿ ವಡಾ ಹಾಗೂ ಸಿಹಿ ಖದ್ಯಗಳ ಮೂಲಕ ರಾಜಸ್ಥಾನದ ಜೈಪುರ್​ 15 ನೇ ಸ್ಥಾನವನ್ನು ಅಲಂಕರಿಸಿದೆ.

ಚೋಲೆ ಭಟುರೇ, ಗೋಲ್​ಗಪ್ಪಾ, ಚಾಟ್ಸ್​​ ಮತ್ತು ವಿವಿಧ ಕಬಾಬ್​ಗಳಿಗೆ ಖ್ಯಾತವಾಗಿರುವ ರಾಷ್ಟ್ರ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ 19 ನೇ ಸ್ಥಾನವನ್ನು ಪಡೆದುಕೊಂಡಿದೆ.

ಟಾಪ್​ ದೇಶಗಳು ಯಾವುವು?


ಈ ಪಟ್ಟಿಯಲ್ಲಿ ವಿಯೆಟ್ನಾಂನ ಹೋ ಚಿ ಮಿ ಸಿಟಿ ಪ್ರಥಮ ಸ್ಥಾನದಲ್ಲಿದ್ದರೆ, ಮಲೇಷ್ಯಾದ ಕೌಲಾಲಂಪುರ್ ದ್ವಿತೀಯ ಸ್ಥಾನದಲ್ಲಿದೆ. ಹಾಗೂ ಇಂಡೋನೇಷ್ಯಾದ ಜಕಾರ್ತ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಇಲ್ಲಿನ ಆಹಾರಗಳು ಅತ್ಯಂತ ಕಡಿಮೆ ಬೆಲೆಗೆ ಹಾಗೂ ರುಚಿಕಟ್ಟಾಗಿದ್ದು, ವಿಶ್ವದ ಪ್ರವಾಸಿಗರು ಇಲ್ಲಿ ಆಹಾರವನ್ನು ಸವಿಯಲೆಂದೇ ಬರುತ್ತಾರೆ ಎಂನ ಅಭಿಪ್ರಾಯ ಹೊರಹೊಮ್ಮಿದೆ, (ಏಜನ್ಸೀಸ್​​).