ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಹೇಳಿಕೆಯನ್ನು ಬೆಂಬಲಿಸಿದ ಸಂಸದೆ ಕಂಗನಾ ರಣಾವತ್  
ದೇಶ

ಮಹಿಳೆಯರು ಮೊದಲು 'ಯೋಗ್ಯ ತಾಯಿ' ಆಗಬೇಕು: 'ಆರೈಕೆ' ಹೆಣ್ಣಿಗೆ ದೈವದತ್ತವಾಗಿ ಬಂದಿದೆ; ಗವರ್ನರ್ ​ಆನಂದಿಬೆನ್​ ಪಟೇಲ್​ ಬೆಂಬಲಕ್ಕೆ ನಿಂತ ಕಂಗನಾ ರಣಾವತ್​! Kangana Ranaut on Anandiben Patel

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರು ಮೊದಲು ಯೋಗ್ಯ ತಾಯಿಯಾಗಬೇಕು ಎಂದಿದ್ದ ಯುಪಿ ಗವರ್ನರ್ ಆನಂದಿಬೆನ್ ಪಟೇಲ್
  • ಗವರ್ನರ್ ಹೇಳಿಕೆಯನ್ನು ಬೆಂಬಲಿಸಿದ ಸಂಸದೆ ಕಂಗನಾ ರಣಾವತ್
  • ಆರೈಕೆ ಮಾಡುವುದು ಹೆಣ್ಣಿಗೆ ದೈವದತ್ತವಾಗಿ ಬಂದ ಗುಣ ಎಂದ ಕಂಗನಾ!
ನವದೆಹಲಿ: ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ರಾಜ್ಯದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್​ ಪಟೇಲ್​, ಮಹಿಳೆಯರ ಕುರಿತಾಗಿ ನೀಡಿದ್ದ ಹೇಳಿಕೆಯೊಂದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಹೇಳಿಕೆಗೆ ಬಿಜೆಪಿಯ ಸಂಸದೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ (Kangana Ranaut on Anandiben Patel) ಬೆಂಬಲ ಸೂಚಿಸಿದ್ದಾರೆ.
ಛತ್ರಪತಿ ಶಾಹುಜಿ ಮಹಾರಾಜ ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವದಲ್ಲಿ ಮಾತನಾಡಿದ್ದ ರಾಜ್ಯಪಾಲರು, ಮಹಿಳೆಯರು ಐಎಎಸ್​ ಅಧಿಕಾರಿ ಶಿಕ್ಷಕಿ ಏನೇ ಆಗುವ ಮೊದಲು ಒಬ್ಬ ಯೋಗ್ಯ ತಾಯಿ ಆಗಬೇಕೆಂದು ಹೇಳಿದ್ದರು. ಈ ಹೇಳಿಕೆ ಉದ್ಯೋಗಸ್ತ ಮಹಿಳೆಯರ ಕೋಪಕ್ಕೆ ಕಾರಣವಾಗಿದ್ದಂತು ನಿಜ.

ರಾಜ್ಯಪಾಲರ ಹೇಳಿಕೆಯಲ್ಲಿ ತಪ್ಪಿಲ್ಲ!

ಈ ಹೇಳಿಕೆ ವೀಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಕೆಲವೊಂದಿಷ್ಟು ಜನ ರಾಜ್ಯಪಾಲರು ಸಂಕುಚಿತ ಮನಸ್ಸನ್ನು ಹೊಂದಿದ್ದಾರೆ, ಸ್ತ್ರೀ ಸಬಲೀಕರಣದ ವಿರೋಧಿ ಆಗಿದ್ದಾರೆಂಬ ಆಕ್ರೋಶ ಕೇಳಿಬಂದಿತ್ತು. ಆದರೆ ಈ ಹೇಳಿಕೆಯನ್ನು ಬಾಲಿವುಡ್​ ನಟಿ ಹಾಗೂ ಸಂಸದೆ ಕಂಗನಾ ರಣಾವತ್​ ಸಮರ್ಥಿಸಿಕೊಂಡಿದ್ದಾರೆ.
ನಾನು ಚಿಕ್ಕವಳಿದ್ದಾಗ, ನನ್ನ ಸಹೋದರ ಫಟ್​ಬಾಲ್​ ಮತ್ತು ಕ್ರಿಕೆಟ್​ ಆಡುತ್ತಿದ್ದರೆ, ನಾನು ಗೊಂಬೆ ಜೊತೆ ಆಡುತ್ತಿದೆ. ಮನೆ ಕಟ್ಟುವುದು, ಆ ಗೊಂಬೆಗೆ ಬಟ್ಟೆ ಹೊಲಿಯುವುದನ್ನು ಮಾಡುತ್ತಿದೆ. ಒಂದರ್ಥದಲ್ಲಿ ಆ ಗೊಂಬೆಗೆ ನಾನೇ ತಾಯಿ ಎಂಬಂತೆ ನಟಿಸುತ್ತಿದೆ ಎಂದು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಆರೈಕೆ ಮಾಡುವುದು ಹೆಣ್ಣಿಗೆ ದೈವದತ್ತವಾಗಿ ಬಂದಿರುವ ಗುಣವಾಗಿದೆ. ಇದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ. ರಾಜ್ಯಪಾಲರ ಹೇಳಿಕೆ ಕೂಡ ಇದೇ ಆಶಯದಿಂದ ಬಂದಿರುವ ಕಾರಣ ಅನಗ್ಯವಾದ ಚರ್ಚೆಯ ಅಗತ್ಯವಿಲ್ಲ ಎಂದಿದ್ದಾರೆ.
ಹೆಣ್ಣನ್ನು ದೇವಿ, ಶಕ್ತಿ ಎಂದು ಪೂಜಿಸುತ್ತೇವೆ!
ಆರೈಕೆ ಎನ್ನುವುದನ್ನು ನಾವು ಕಲಿಯಬೇಕಾದದಲ್ಲ, ಅದನ್ನು ದೇವರು ನಮ್ಮ ಕರ್ತವ್ಯವೆಂಬಂತೆ ನೀಡಿದ್ದಾನೆ, ಮತ್ತು ಇದು ಹೆಣ್ಣಿನ ನಿಜವಾದ ಸ್ವಭಾವ ಕೂಡಆಗಿದೆ. ಹೆಣ್ಣಲ್ಲಿ ಈ ಆರೈಕೆ, ಕಾಳಜಿ ಎಂಬ ಗುಣಗಳಿರುವ ಕಾರಣಕ್ಕಾಗಿಯೇ ಹೆಣ್ಣನ್ನು ದೇವಿ, ಶಕ್ತಿ, ಅನ್ನಪೂರ್ಣಾ, ಮಾತಾ ಎಂಬುದಾಗಿ ಸಂಬೋಧಿಸುತ್ತಾರೆ ಎಂದು ಕಂಗನಾ ರಣಾವತ್​ ಹೇಳಿದ್ದಾರೆ, (ಏಜನ್ಸೀಸ್​).