Hyderabad techie suicide 
ದೇಶ

6 ತಿಂಗಳ ಮಗುವನ್ನಪ್ಪಿ 6ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕ್ಕಿ ಆತ್ಮಹತ್ಯೆ, ಮಗು ಪಾರು..Hyderabad techie suicide

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ಮಿಯಾಪುರದಲ್ಲಿ 37 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ
  • 6 ತಿಂಗಳ ಹೆಣ್ಣು ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಟೆಕ್ಕಿ, ಮಗು ಪಾರು
  • ಮೃತ ಮಹಿಳೆ ನಿದ್ರಾಹೀನತೆ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ
ಹೈದರಾಬಾದ್: ಮಿಯಾಪುರದಲ್ಲಿ 37 ವರ್ಷದ ಟೆಕ್ಕಿಯೊಬ್ಬರು 6 ತಿಂಗಳ ಹೆಣ್ಣು ಮಗುವನ್ನು ಅಪ್ಪಿಕೊಂಡು ಅಪಾರ್ಟ್​ಮೆಂಟ್​ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (
) ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ತಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು ಮಗು ಸಣ್ಣಪುಟ್ಟ ಗಾಯದಿಂದ  ಪ್ರಾಣಾಪಾಯದಿಂದ ಪಾರಾಗಿದೆ.

ಮಿಯಾಪುರದ ಮಯೂರಿ ನಗರದಲ್ಲಿರುವ 'ಲಕ್ಷ್ಮಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ಸ್'ನಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಇಶಾ ಸಾಹು (37) ಎಂದು ಗುರುತಿಸಲಾಗಿದೆ. ಮೂಲತಃ ಮಧ್ಯಪ್ರದೇಶದವರಾದ ಅವರು ಕುಟುಂಬದೊಂದಿಗೆ ಹೈದರಾಬಾದ್​ನಲ್ಲಿದ್ದರು ಎನ್ನಲಾಗಿದೆ. 

ಮಗು ರಕ್ಷಿಸಿದ ಸ್ಥಳೀಯರು

ಇಶಾ ಸಾಹು ಅವರು ಮಗುವನ್ನು ಎದೆಯ ಮೇಲೆ ಇಟ್ಟುಕೊಂಡು ವಸತಿ ಸಮುಚ್ಚಯದ ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ಮೇಲಿಂದ ಕೆಳಗೆ ಬೀಳುವ ಸಂದರ್ಭದಲ್ಲಿ ಮಗು ಆಕೆಯ ಕೈಯಿಂದ ಜಾರಿ ಪಕ್ಕಕ್ಕೆ ಬಿದ್ದಿದೆ ಎನ್ನಲಾಗಿದೆ. ಘಟನೆಯನ್ನು ಕಂಡು ತಕ್ಷಣವೇ ಓಡಿಬಂದ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ತುರ್ತು ನಿರ್ವಹಣಾ ಸಿಬ್ಬಂದಿ, ಮಗುವನ್ನು ರಕ್ಷಿಸಿ ಕೆಪಿಎಚ್‌ಬಿಯಲ್ಲಿರುವ ಖಾಸಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಆರನೇ ಮಹಡಿಯಿಂದ ಬಿದ್ದ ಇಶಾ ಸಾಹು ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ ನಟಿ

ಪೊಲೀಸರ ವರದಿ ಪ್ರಕಾರ ಮೃತ ಇಶಾ ಸಾಹು ಅವರು  ಕಳೆದ ಕೆಲವು ತಿಂಗಳಿಂದ  ನಿದ್ರಾಹೀನತೆಯಿಂದ ಬಳಲುತ್ತಿದ್ದರು. ಮಾನಸಿಕ ಖಿನ್ನತೆ ತೊಳಲಾಟಕ್ಕೆ ಒಳಗಾಗಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ

'ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವುದರಿಂದ, ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳನ್ನು ಹರಡಬಾರದು ಮತ್ತು ಅಧಿಕೃತ ತನಿಖಾ ವರದಿ ಬರುವವರೆಗೆ ದೃಢೀಕರಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು,' ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ, (ಏಜೆನ್ಸೀಸ್).