Kolkata driving practice accident women death
- ಕೊಲ್ಕತ್ತಾದದಲ್ಲಿ ಡ್ರೈವಿಂಗ್ ಅಭ್ಯಾಸದ ವೇಳೆ ಸಂಭವಿಸಿದ ಭೀಕರ ಅಪಘಾತ.
- ಬ್ರೇಕ್ ಬದಲಿಗೆ ಆಕ್ಸಿಡೇಟರ್ ತುಳಿದ ಪರಿಣಾಮ ಕೊಳಕ್ಕೆ ನುಗ್ಗಿದ ಕಾರು, ಮಹಿಳೆ ಸಾವು.
- ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗಾಗಿ ಅಭ್ಯಾಸ ಮಾಡುತ್ತಿದ್ದ 42 ವರ್ಷದ ಸುಮಿತ್ರಾ ಸಾವು.
ಕೋಲ್ಕತ್ತಾ: ಡ್ರೈವಿಂಗ್ ಕಲಿಯುತ್ತಿದ್ದ ವೇಳೆ.. ನಿಯಂತ್ರಣ ತಪ್ಪಿ ಕಾರು ಕೊಳಕ್ಕೆ ಬಿದ್ದ ಪರಿಣಾಮ, ಮಹಿಳೆಯೊಬ್ಬರು ಮೃತಪಟ್ಟ ಘಟನೆ
ಕೊಲ್ಕತ್ತಾದ ಕೆಸ್ಟೊಪುರದ ಪ್ರಫುಲ್ಲ ಕಾನನ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಯಲ್ಲಿ ಬಿಟ್ಟು ಬಂದ ಬಳಿಕ, ಗ್ಯಾರೆಜ್ನಿಂದ ತಮ್ಮ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದು ಡ್ರೈವಿಂಗ್ ಅಭ್ಯಾಸ ಮಾಡಲು ಹೊರಟಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕೊಳದಿಂದ ಕಾರನ್ನು ಕೆರೆಯಿಂದ ತೆಗೆದಿದ್ದಾರೆ ಎನ್ನಲಾಗಿದೆ.
ಕಾರನ್ನು ನೀರಿನಿಂದ ಹೊರತೆಗೆದಾಗ, ಸುಮಿತ್ರಾ ಅವರ ಮೃತದೇಹವು ಕಾರಿನ ಹಿಂಭಾಗದ ಹ್ಯಾಚ್ ಕಡೆಗೆ ಮುಖ ಮಾಡಿ ಹಾಗೂ ಕಾಲುಗಳು ಸ್ಟೀರಿಂಗ್ ಗ್ವೀಲ್ ಬಳಿ ಇರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರು ನೀರಿನಲ್ಲಿ ಮುಳುಗುತ್ತಿದ್ದಾಗ ಅವರು ವಾಹನದಿಂದ ಹೊರಬರಲು ಅಥವಾ ತಪ್ಪಿಸಿಕೊಳ್ಳಲು ಯತ್ನಿಸಿರಬಹುದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೆ ಕಾರು ಖರೀದಿ ಮಾಡಿದ್ದರು
ಸುಮಿತ್ರಾ ಅವರ ಪತಿ ಕೃಷ್ಣೇಂದು ದಾಸ್ ಅವರು ಇತ್ತೀಚೆಷ್ಟೇ ಈ ಕಾರನ್ನು ಖರೀದಿಸಿದ್ದು, ಆಗಸ್ಟ್ 22 ರಂದು ನಿಗದಿಯಾಗಿರುವ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗಾಗಿ ಸುಮಿತ್ರಾ ಅಭ್ಯಾಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೊಸಬರಾಗಿದ್ದ ಅವರು ಬ್ರೇಕ್ ಬದಲು ಆಕಸ್ಮಿಕವಾಗಿ ಆಕ್ಸಿಡೇಟರ್ ತುಳಿದಿದ್ದರಿಂದ ಕಾರು ವೇಗವಾಗಿ ಚಲಿಸಿ, ಕೊಳಕ್ಕೆ ನುಗ್ಗಿದೆ ಎಂದು ಶಂಕಿಸಲಾಗಿದೆ.
ಸುಮಿತ್ರಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಪೊಲೀಸರು ಈ ಘಟನೆಯ ಕುರಿತು ತಕ್ಷಣದ ತನಿಖೆಯನ್ನು ಆರಂಭಿಸಿದ್ದಾರೆ, (ಏಜೆನ್ಸೀಸ್).