ನಾಳೆ (ಮೇ.4) ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟ
- ನಾಳೆ (ಮೇ.4) ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟ
- ಮುಂಬೈ ಸಟ್ಟಾ ಬಜಾರ್ನ ಪ್ರೆಡಿಕ್ಷನ್ ರಿಲೀಸ್
- ಬಂಗಾಳದಲ್ಲಿ ಬಿಜೆಪಿ; ತಮಿಳುನಾಡಲ್ಲಿ ಡಿಎಂಕೆಗೆ ಅಧಿಕಾರ
- ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್; ಪುದುಚೇರಿಯಲ್ಲಿ ಫೈಟಿಂಗ್; ಕೇರಕ್ಕೆ ಯುಡಿಎಫ್ ಖಾಯಂ!
ಮುಂಬೈ: ನಾಳೆ (ಮೇ.4) ಭಾರತದ ಪಂಚರಾಜ್ಯಗಳ ಫಲಿತಾಂಶ ಹೊರಬೀಳಲಿದ್ದು, ದೇಶಾದ್ಯಂತ ಜುಗಾರಿಗಳು ಜಾಗೃತರಾಗಿದ್ದು ಕೋಟ್ಯಾಂತರ ರೂಪಾಯಿಗಳನ್ನು ಬೆಟ್ಟಿಂಗ್ನಲ್ಲಿ ತೊಡಗಿಸಿದ್ದಾರೆ. ತಮ್ಮ ನೆಚ್ಚಿನ ಪಕ್ಷ ಬಹುಮತ ಪಡೆದರೆ ತಾವು ತೊಡಗಿಸಿರುವ ಹಣವನ್ನು ಡಬಲ್ ಮಾಡುವ ಉದ್ದೇಶ ಇವರದ್ದು ಎಂದು ಹೇಳ ಬಹುದಾಗಿದೆ.
ಈಗ ಖ್ಯಾತ ಮುಂಬೈ ಸಟ್ಟಾ ಬಜಾರ್ ತನ್ನದೊಂದು ಪ್ರೆಡಿಕ್ಷನ್ (Satta Bazar Prediction) ನೀಡಿದ್ದು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಯಾರು ಗದ್ದುಗೆ ಏರಲಿದ್ದಾರೆ ಎಂಬ ಭವಿಷ್ಯವನ್ನು ನುಡಿದಿದೆ.
ಬಂಗಾಳದಲ್ಲಿ ಅರಳಲಿದೆ ಕಮಲ!
ನಡೆಯುತ್ತಿರುವ ಪಂಚರಾಜ್ಯ ಚುನಾವಣೆಗಳಲ್ಲಿ, ಹೈವೋಲ್ಟೆಜ್ ರಾಜ್ಯ ಎಂದರೆ ಅದು ಪಶ್ಚಿಮ ಬಂಗಾಳ. 294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯದಲ್ಲಿ 148 ಕ್ಷೇತ್ರಗಳನ್ನು ಗೆಲ್ಲುವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಸಟ್ಟಾ ಬಜಾರ್ ಪ್ರಕಾರ, ಆಡಳಿತರೂಢ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು 127-132 ಕ್ಷೇತ್ರಗಳಲ್ಲಿ ಗೆದ್ದರೆ, ಭಾರತೀಯ ಜನತಾ ಪಕ್ಷವು 175-185 ಕ್ಷೇತ್ರಗಳಲ್ಲಿ ವಿಜಯವನ್ನುಗಳಿಸಿ ಸರ್ಕಾರವನ್ನು ರೂಪಿಸಲಿದೆ. ಉಳಿದಂತೆ ಎಡಪಕ್ಷ ಹಾಗೂ ಕಾಂಗ್ರೆಸ್ ಒಂದಂಕಿಗೆ ಸೀಮಿತವಾಗಲಿದೆ ಎನ್ನುವುದು ಸಟ್ಟಾ ಬಜಾರ್ನ ಭವಿಷ್ಯವಾಣಿಯಾಗಿದೆ.
ತಮಿಳುನಾಡಿನಲ್ಲಿ ಮುಂದುವರಿಯುತ್ತೆ ಡಿಎಂಕೆ!
234 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ತಮಿಳುನಾಡಿನ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷವು 145-155 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತನ್ನ ವಿಜಯದ ಓಟವನ್ನು ಮುಂದುವರಿಸಲಿದೆ ಎನ್ನುವುದು ಸಟ್ಟಾ ಬಜಾರ್ನ ಭವಿಚ್ಯವಾಗಿದೆ.
ಇನ್ನು ಈ ಚುನಾವಣೆಯಲ್ಲಿ ಸಂಚಲನ ಮೂಡಿಸಿರುವ ನಟ ದಳಪತಿ ವಿಜಯ್ ಪಕ್ಷ ಟಿವಿಕೆ 7-9 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಕಂಡರೆ, 45-65 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆಲುವನ್ನು ಕಾಣಲಿದೆ. ಆದರೆ ಸಿಎಂ ಕುರ್ಚಿ ಸ್ಟಾಲಿನ್ ಬಳಿಯೇ ಭದ್ರವಾಗಿರಲಿದೆ ಎನ್ನುವುದು ಸಟ್ಟಾ ಬಜಾರ್ನ ಅಂಕಿ-ಅಂಶ ಹೇಳುತ್ತಿದೆ.
ಅಸ್ಸಾಂನಲ್ಲಿ ಬಿಜೆಪಿ; ಪುದುಚೇರಿಯಲ್ಲಿ ಪೈಪೋಟಿ!
126 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅಸ್ಸಾಂನಲ್ಲಿ 85-92 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಬಿಜೆಪಿ ಗ್ಯಾಟ್ರಿಕ್ ಗೆಲುವನ್ನು ಸಾಧಿಸಲಿದೆ, ಕಾಂಗ್ರೆಸ್ 34-38 ಕ್ಷೇತ್ರಗಳಿಗೆ ಸೀಮಿತವಾಗಿರಲಿದೆ ಎಂದು ಸಟ್ಟಾ ಬಜಾರ್ ಹೇಳುತ್ತಿದೆ.
30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 15-18 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದರೆ, ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ 14-17 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.
ಕೇರಳದಲ್ಲಿ ಯುಡಿಎಫ್ ಆಡಳಿತ!
ದಕ್ಷಿಣದ ಮತ್ತೊಂದು ರಾಜ್ಯ ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯುಡಿಎಫ್ ಬಣವು 78-85 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿ ಸರ್ಕಾರ ರಚಿಸಲಿದೆ. ಎಲ್ಡಿಎಫ್ 56-66 ಕ್ಷೇತ್ರಗಳಲ್ಲಿ ಗೆದ್ದರೆ ಬಿಜೆಪಿ ಕೇವಲ 2-3 ಸೀಟ್ಗಳಿಗೆ ಸೀಮಿತವಾಗಲಿದೆ ಎಂದು ಸಟ್ಟಾ ಬಜಾರ್ ಹೇಳಿದೆ, (ಏಜನ್ಸೀಸ್).