- ಪತ್ನಿಯ ಖಾಸಗಿ ವಿಡಿಯೋಗಳನ್ನು ವೆಬ್‌ಸೈಟ್‌ಗಳಲ್ಲಿ ಹರಿಬಿಟ್ಟ ಪತಿ
- ನಾಲ್ಕು ವರ್ಷದ ಮಗಳ ಮುಂದೆಯೇ ಲೈಂಗಿಕ ಕೃತ್ಯ ಎಸಗಿ ವಿಕೃತಿ
- ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಕೇಸ್ ದಾಖಲು
ಕೇರಳ: ಕೊಲ್ಲಂನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದಲ್ಲದೇ, ನಾಲ್ಕು ವರ್ಷದ ಸ್ವಂತ ಮಗಳ ಮುಂದೆಯೇ ಲೈಂಗಿಕ ಕೃತ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಯ್ಯನಾಡ್ ಮೂಲದ ಆರೋಪಿ ಕಳೆದ ನಾಲ್ಕು ವರ್ಷಗಳಿಂದ ಪತ್ನಿ-ಮಗಳೊಂದಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ. ಪತ್ನಿಯ ಖಾಸಗಿ ವಿಡಿಯೋಗಳು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿರುವುದು ಸ್ನೇಹಿತರ ಮೂಲಕ ಗೊತ್ತಾಗಿದೆ. ಬಳಿಕ ಪತಿಯ ಮೊಬೈಲ್ ಪರಿಶೀಲಿಸಿದಾಗ, ನಾಲ್ಕು ವರ್ಷದ ಮಗಳ ಮುಂದೆಯೇ ಲೈಂಗಿಕ ಕೃತ್ಯ ಎಸಗಿದ ವಿಡಿಯೋ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಗೆ ಹಲ್ಲೆ ಮಾಡಿ ವಿಡಿಯೋ
ಬಳಿಕ, ದಂಪತಿ ಕೇರಳಕ್ಕೆ ವಾಪಸ್ ಬಂದಿದ್ದು, ಆರೋಪಿಗೆ 3 ದಿನ ಕೌನ್ಸೆಲಿಂಗ್ ಕೂಡ ನೀಡಲಾಗಿತ್ತು. ಆದರೆ ಕೌನ್ಸೆಲಿಂಗ್ ಬಳಿಕವೂ ಆತ ಅದೇ ರೀತಿಯ ಮತ್ತೊಂದು ಖಾಸಗಿ ವಿಡಿಯೋ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ವೈಫ್-ಸ್ವಾಪಿಂಗ್’ಗೆ ಒತ್ತಾಯ
ವಿಡಿಯೋ ಪರಿಶೀಲನೆ ಬಳಿಕ, ನಾಲ್ಕು ವರ್ಷದ ಮಗುವಿನ ಎದುರೇ ನಡೆದ ಕೃತ್ಯವೆಸಗಿದ್ದು ಬಯಲಾಗಿದೆ. ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ಪತ್ನಿಯನ್ನು ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ’ (Wife-swapping) ಒತ್ತಾಯಿಸಿದ್ದ ಎಂದೂ ದೂರುದಾರರ ಪರ ವಕೀಲ ಆರೋಪಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಲೋಪ?
ಪೊಲೀಸರು ಆರಂಭದ ತನಿಖೆಯಲ್ಲಿ ಲೋಪ ಎಸಗಿದ್ದಾರೆ ಎಂಬ ಆರೋಪವನ್ನೂ ವಕೀಲರು ಮಾಡಿದ್ದಾರೆ. ಕೇರಳ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿದಿದೆ,(ಏಜೆನ್ಸೀಸ್).