ದೇಶ

ಕರ್ವಾ ಚೌತ್ ಉಪವಾಸ ಆಚರಿಸಲು ನಿರಾಕರಿಸಿದ ಪತ್ನಿ; ಅವಳು ನನ್ನ ಸಾವು ಬಯಸ್ತಿದ್ದಾಳೆ ಎಂದು ಠಾಣೆಗೆ ದೂರು ನೀಡಿದ ಪತಿ | Karwa Chauth fast

ಮಧ್ಯಪ್ರದೇಶದಲ್ಲಿ ಹಿಂದೂಗಳ ಕರ್ವಾ ಚೌತ್​ ಹಬ್ಬದ ವೇಳೆ ತನ್ನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಪತ್ನಿ ಉಪವಾಸ ಆಚರಿಸುತ್ತಿಲ್ಲ, ಅವಳು ನನ್ನನ್ನು ಕೊಲ್ಲಲು ಬಯಸಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಿತ್ರ ಘಟನೆ ಗುರುವಾರ(ಅ. 29) ನಡೆದಿದೆ.

ಭೋಪಾಲ್: ಮಧ್ಯಪ್ರದೇಶದಲ್ಲಿ ಹಿಂದೂಗಳ ಕರ್ವಾ ಚೌತ್​ ಹಬ್ಬದ ವೇಳೆ ತನ್ನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಪತ್ನಿ ಉಪವಾಸ ಆಚರಿಸುತ್ತಿಲ್ಲ, ಅವಳು ನನ್ನನ್ನು ಕೊಲ್ಲಲು ಬಯಸಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಿತ್ರ ಘಟನೆ ಗುರುವಾರ(ಅ. 29) ನಡೆದಿದೆ.

ದೂರುದಾರನನ್ನು ಶಿವಪುರಿಯ ಬಿಜ್ರವಾನ್ ಗ್ರಾಮದ ನಿವಾಸಿ ಬರೇಲಾಲ್ ಆದಿವಾಸಿ ಎಂದು ಗುರುತಿಸಲಾಗಿದ್ದು, ತನ್ನ ಪತ್ನಿ ಮಿಥಿಲೇಶ್ ಆದಿವಾಸಿ ತನಗೆ ವಿಶ್ವಾಸ ದ್ರೋಹ ಮಾಡಿದ್ದಾಳೆಂದು ಹೇಳಿದ್ದಾನೆ. ನಾನು ಆಕೆಗೆ ವಿಚ್ಛೇದನ ನೀಡುತ್ತೇನೆ ಎಂದಿದ್ದಾನೆ.

ಬರೇಲಾಲ್ ಆದಿವಾಸಿ ನೀಡಿದ ದೂರಿನಲ್ಲಿ, ಮೇರೆ ಲಿಯೇ ಕರ್ವಾ ಚೌತ್ ಕಾ ವ್ರತ್ ನಹೀ ರಖ್ ರಹೀ ಹೈ ಔರ್ ಮುಜೆ ಮಾರ್ನಾ ಚಾಹತಿ ಹೈ (ಅವಳು ನನಗಾಗಿ ಕರ್ವಾ ಚೌತ್ ಉಪವಾಸವನ್ನು ಆಚರಿಸುತ್ತಿಲ್ಲ. ಮತ್ತು ಅವಳು ನನ್ನನ್ನು ಕೊಲ್ಲಲು ಬಯಸುತ್ತಾಳೆ) ಎಂದು ಆರೋಪಿಸಿದ್ದಾನೆ.

ಅವಳು ನನಗಾಗಿ ಚಂದ್ರಪೂಜೆ ಮಾಡುತ್ತಿಲ್ಲ. ಪತಿಯ ದೀರ್ಘಾಯುಷ್ಯಕ್ಕಾಗಿ ಆಚರಿಸಲಾಗುವ ಚಂದ್ರ ದರ್ಶನವನ್ನು ಮಾಡುವಂತೆ ನಾನು ಅವಳನ್ನು ಕೇಳಿದ್ದೆ, ಆದರೆ ಅವಳು ನಾನು ಸಾಯಬೇಕೆಂದು ಬಯಸುತ್ತಿರುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಅಷ್ಟೇ ಅಲ್ಲದೇ, ಪತ್ನಿಯು 'ಕರ್ವಾ ಚೌತ್' ಹಬ್ಬವನ್ನು ಆಚರಿಸದಿದ್ದರೆ, ಮತ್ತು ತನ್ನ ಒಳಿತಿಗಾಗಿ ಉಪವಾಸ ವ್ರತ ಕೈಗೊಳ್ಳದಿದ್ದರೆ, ಆಕೆಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ದೂರಿನ ಆಧಾರದ ಮೇಲೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಆತ ಪೊಲೀಸರನ್ನು ಕೋರಿದ್ದಾನೆ. ಲಿಖಿತ ದೂರಿನ ಬೆನ್ನಲ್ಲೇ ಪೊಲೀಸರು ಈ ಕುರಿತು ದಂಪತಿಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).