ನಟಿ ನಯನತಾರಾ ಓಣಂ ಲುಕ್ 
ದೇಶ

ಗೋಲ್ಡ್​ ಬಾರ್ಡರ್​ನ ಬಿಳಿ ಸೀರೆ, ಮುಡಿಗೆ ಮಲ್ಲಿಗೆ... ನಯನತಾರಾ ಓಣಂ ಲುಕ್‌ಗೆ ಫ್ಯಾನ್ಸ್ ಫಿದಾ | Nayanthara's Onam look

With Toxic: ನಯನತಾರಾ ಅಂದ್ರೆ ಬರೀ ನಟನೆ ಮಾತ್ರವಲ್ಲ, ಫ್ಯಾಷನ್ ವಿಚಾರದಲ್ಲೂ ಸಖತ್ ಸುದ್ದಿಯಲ್ಲಿರುವ ನಟಿ. ಇದೀಗ ಅವರ ಸಿಂಪಲ್ ಮತ್ತು ಕ್ಲಾಸಿ ಸೀರೆ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಓಣಂ ಹಬ್ಬ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ನಯನತಾರಾ ಹೊಸ ಲುಕ್, ಫ್ಯಾಷನ್ ಪ್ರಿಯರ ಮನ ಗೆದ್ದಿದೆ.
ಈ ಬಾರಿ ನಯನತಾರಾ ಜಾಸ್ತಿ ಗ್ಲಾಮರಸ್ ಆಗುವ ಬದಲು ಸೌತ್ ಇಂಡಿಯನ್ ಟ್ರೆಡಿಷನಲ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ ಹಗುರವಾದ ಸೀರೆಗೆ ಸಣ್ಣದಾದ ಚಿನ್ನದ ಬಾರ್ಡರ್ ಬ್ಲೌಸ್​ ತೊಟ್ಟುಕೊಂಡಿದ್ದು, ತುಂಬಾ ಸಿಂಪಲ್ ಆಗಿದ್ದರೂ ನೋಡೋಕೆ ಸಖತ್ ರಿಚ್​ ಆಗಿ ಕಾಣಿಸುತ್ತಾರೆ.

ಸಿಂಪಲ್ ಬಿಳಿ ಬ್ಲೌಸ್, ಎಲಿಗಂಟ್ ಲುಕ್

ಸೀರೆಗೆ ಒಪ್ಪುವಂತೆ ಸಾದಾ ಸ್ಲೀವ್‌ಲೆಸ್ ಬಿಳಿ ಬ್ಲೌಸ್ ಧರಿಸಿದ್ದಾರೆ. ಸೀರೆ ಮತ್ತು ಬ್ಲೌಸ್ ಎರಡೂ ಒಂದೇ ಬಣ್ಣದಲ್ಲಿರುವುದರಿಂದ ಇಡೀ ಲುಕ್ ಕ್ಲೀನ್ ಆಗಿ ಕಾಣಿಸುತ್ತೆ. ಓಣಂ ಹಬ್ಬದ ಪೂಜೆ, ಫ್ಯಾಮಿಲಿ ಗೆಟ್-ಟುಗೆದರ್ ಅಥವಾ ಮನೆಯಲ್ಲಿ ನಡೆಯುವ ಸಣ್ಣ ಸೆಲೆಬ್ರೇಷನ್‌ಗೆ ಇಂಥ ಲುಕ್ ಪರ್ಫೆಕ್ಟ್ ಅನ್ನಬಹುದು.

ಚಿನ್ನದ ಆಭರಣದಿಂದ ಹಬ್ಬದ ಮೆರುಗು

ನಯನತಾರಾ ಆಭರಣ ವಿಚಾರದಲ್ಲೂ ಜಾಣ್ಮೆ ತೋರಿದ್ದಾರೆ. ಕುತ್ತಿಗೆಗೆ ಸಿಂಪಲ್ ಆಗಿರುವ ಲೇಯರ್ಡ್ ಗೋಲ್ಡ್ ನೆಕ್ಲೆಸ್, ಚಿಕ್ಕ ಓಲೆ, ಚಿನ್ನದ ಬಳೆಗಳು ಮತ್ತು ಉಂಗುರ ಹಾಕಿಕೊಂಡಿದ್ದಾರೆ. ಇದರ ಜೊತೆ ಒಂದು ಸ್ಟೈಲಿಶ್ ಗೋಲ್ಡ್ ವಾಚ್ ಕೂಡ ಧರಿಸಿದ್ದು, ಸಾಂಪ್ರದಾಯಿಕ ಸೀರೆಗೆ ಸ್ವಲ್ಪ ಆಧುನಿಕ ಸ್ಪರ್ಷ ಕೊಟ್ಟಿದೆ. ಓಣಂ ಶೈಲಿಗೆ ತುಂಬಾ ಟೆಂಪಲ್ ಜ್ಯುವೆಲರಿ ಅಥವಾ ಹೆಚ್ಚು ವಿನ್ಯಾಸವಿರುವ ರವಿಕೆ ಬೇಕೇಬೇಕು ಅನ್ನೋದೇನಿಲ್ಲ ಎಂದು ನಯನತಾರಾ ಈ ಸೀರೆಯ ಮೂಲಕ ತೋರಿಸಿದ್ದಾರೆ.

ಮಲ್ಲಿಗೆ ಹೂ ಸುತ್ತಿದ ತುರುಬು

ಮಲ್ಲಿಗೆ ಹೂವಿನಿಂದ ಅಲಂಕರಿಸಿದ ತುರುಬು ನಯನತಾರಾ ಅವರ ಲುಕ್‌ಗೆ ಮತ್ತಷ್ಟು ಸಾಂಪ್ರದಾಯಿಕ ಮೆರುಗು ನೀಡಿದೆ. ಕೂದಲನ್ನು ನೀಟಾಗಿ ತುರುಬು ಕಟ್ಟಿ ಅದರ ಸುತ್ತ ತಾಜಾ ಮಲ್ಲಿಗೆ ಹೂವಿನ ಗಜ್ರಾ ಹಾಕಿಕೊಂಡಿದ್ದಾರೆ. ಮುಖದ ಬಳಿ ಕೆಲವು ಕೂದಲಿನ ಎಳೆಗಳನ್ನು ಹಾಗೇ ಬಿಟ್ಟಿರುವುದರಿಂದ ಇನ್ನಷ್ಟು ಚೆಂದವಾಗಿ ಕಾಣಿಸುತ್ತೆ. ಕೇರಳದ ಓಣಂ ಶೈಲಿಗೆ ಈ ಮಲ್ಲಿಗೆ ಹೂವಿನ ತುರುಬು ಹೇಳಿ ಮಾಡಿಸಿದಂತಿದೆ.

ಮೇಕಪ್ ಕೂಡ ಸಿಂಪಲ್

ಮೇಕಪ್ ವಿಚಾರದಲ್ಲೂ ನಯನತಾರಾ ‘ಲೆಸ್ ಇಸ್ ಮೋರ್’ ಫಾರ್ಮುಲಾ ಫಾಲೋ ಮಾಡಿದ್ದಾರೆ. ಚೆನ್ನಾಗಿ ತೀಡಿದ ಹುಬ್ಬುಗಳು, ಕಾಜಲ್ ಹಾಕಿದ ಕಣ್ಣುಗಳು, ಗ್ಲೋಯಿಂಗ್ ಸ್ಕಿನ್ ಮತ್ತು ನ್ಯೂಡ್ ಲಿಪ್‌ಸ್ಟಿಕ್‌ನಿಂದ ನೈಜ್ಯ ಲುಕ್ ಕೊಟ್ಟಿದ್ದಾರೆ. ಇದರ ನಡುವೆ ಚಿಕ್ಕ ಕೆಂಪು ಬಿಂದಿ ಬಿಳಿ ಸೀರೆಯ ಮೇಲೆ ಸಖತ್ ಹೈಲೈಟ್ ಆಗಿದೆ. ಓಣಂಗೆ
ಹೆಚ್ಚು ಆಭರಣ, ಜಾಸ್ತಿ ಮೇಕಪ್ ಏನೂ ಇಲ್ಲದೆ ಸರಳವಾಗಿಯೇ ಸಖತ್ ಕ್ಲಾಸಿ ಆಗಿ ಕಾಣಬಹುದು ಅನ್ನೋದಕ್ಕೆ ನಯನತಾರಾ ಅವರ ಈ ಓಣಂ ಮೆರುಗು ಉತ್ತಮ ಉದಾಹರಣೆ,(ಏಜೆನ್ಸೀಸ್​).