ಪ್ರಕರಣದ ವಿಚಾರಣೆ ವೇಳೆ ಎಐಐಎಂಎಸ್ ಪರವಾಗಿ, ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸುವ ಐಸಿಟಿಸಿ(Integrated Counseling and Testing Centre) ಇರಲಿಲ್ಲ. ಹೀಗಾಗಿ ಹೆಚ್ಐವಿ ಪರೀಕ್ಷೆ ಮಾಡಿಲ್ಲ, ವ್ಯಕ್ತಿಯನ್ನು ಅಧಿಕೃತವಾಗಿ ಹೆಚ್ಐವಿ ಪಾಸಿಟಿವ್ ಎಂದು ಹೇಳಿಲ್ಲ ಎಂದು ವಾದಿಸಲಾಗಿತ್ತು. ಎಐಐಎಂಎಸ್ನದೇ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಡಿಸ್ಚಾರ್ಜ್ ದಾಖಲೆಗಳಲ್ಲಿ ವ್ಯಕ್ತಿಯನ್ನು ಪದೇಪದೇ ಹೆಚ್ಐವಿ ಪಾಸಿಟಿವ್ ಎಂದು ನಮೂದಿಸಿರುವುದು ಕಂಡುಬಂದಿದೆ ಎಂದು ಆಯೋಗ ಹೇಳಿದೆ.