ಸಾಂದರ್ಭಿಕ ಚಿತ್ರ  
ದೇಶ

ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದನೆಯಾಗುವ ಸ್ಥಳ ಯಾವುದು ಗೊತ್ತಾ? ಇಲ್ಲಿದೆ ಉತ್ತರ...Gold

ಪ್ರಮುಖ ಮುಖ್ಯಾಂಶಗಳು

  • ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುತ್ತಿರುವ ವೇಗವನ್ನು ನೋಡಿ ಸಾಮಾನ್ಯ ಜನರು ಕಂಗಾಲಾಗಿದ್ದಾರೆ
  • ಒಂದೆರೆಡು ವರ್ಷದ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ರೂ. ಇದ್ದ ಚಿನ್ನ, ಇಂದು 15 ಸಾವಿರ ಗಡಿ ದಾಟಿದೆ
  • ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿರುವುದರಿಂದ ಚಿನ್ನ ಇಂದು ದುಬಾರಿಯಾಗಿದೆ
Gold : ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುತ್ತಿರುವ ವೇಗವನ್ನು ನೋಡಿದರೆ ಮುಂದೊಂದು ದಿನ ಜನ ಸಾಮಾನ್ಯರು, ವಸ್ತು ಸಂಗ್ರಹಾಲಯದಲ್ಲಿ ಕಾಣಸಿಗುವ ವಸ್ತುಗಳಂತೆ ಚಿನ್ನವನ್ನು ನೋಡಿ ಕೇವಲ ಖುಷಿಪಟ್ಟುಕೊಳ್ಳಬೇಕಾಗುತ್ತದೆ. ಅದನ್ನು ಖರೀದಿ ಮಾಡುವುದು ದೂರದ ಮಾತು ಎಂಬಂತಾಗುತ್ತದೆ.
ಹೌದು, ಕೇವಲ ಒಂದೆರೆಡು ವರ್ಷದ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ರೂ. ಇದ್ದ ಚಿನ್ನ, ಇಂದು 15 ಸಾವಿರ ಗಡಿ ದಾಟಿದೆ. ಅನೇಕ ಜನರು ಬ್ಯಾಂಕುಗಳಲ್ಲಿ ತಮ್ಮ ಹೂಡಿಕೆಯಾಗಿ ಚಿನ್ನವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ಚಿನ್ನ ಇಂದು ದುಬಾರಿಯಾಗಿ, ಜನ ಸಾಮಾನ್ಯರ ಕೈನಿಂದ ದೂರ ಸರಿಯುತ್ತಿದೆ.
ಇದೇ ರೀತಿ ಬೇಡಿಕೆ ಹೆಚ್ಚಾದರೆ ಚಿನ್ನದ ಬೆಲೆಯೂ ಸಹ ಹೆಚ್ಚಾಗುತ್ತದೆ. ಹೀಗಿರುವಾಗ ಭಾರತದಲ್ಲಿ ಎಷ್ಟು ಚಿನ್ನ ಉತ್ಪಾದನೆಯಾಗುತ್ತದೆ? ಯಾವ ರಾಜ್ಯದಲ್ಲಿ ಅತ್ಯಧಿಕ ಚಿನ್ನವನ್ನು ಹೊರತೆಗೆಯುತ್ತಾರೆ? ಎಂಬ ಪ್ರಶ್ನೆ ಕಾಡುತ್ತದೆ. ಆ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳೋಣ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಪ್ರಕಾರ, ಕರ್ನಾಟಕವು ಭಾರತದಲ್ಲಿ ಪ್ರಮುಖ ಚಿನ್ನ ಉತ್ಪಾದಕ ರಾಜ್ಯವಾಗಿದೆ. ದೇಶದಲ್ಲಿ ಗಣಿಗಾರಿಕೆ ಮಾಡಲಾಗುವ ಸಂಪೂರ್ಣ ಚಿನ್ನ ಇಲ್ಲಿಂದಲೇ ಬರುತ್ತದೆ ಎಂದು ಹೇಳಲಾಗುತ್ತದೆ. ಅತ್ಯಂತ ಹಳೆಯ ಚಿನ್ನದ ಗಣಿಗಳು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿವೆ ಎಂದು ಹೇಳಲಾಗುತ್ತದೆ.
ಆದರೆ, ಕರ್ನಾಟಕದಲ್ಲಿ ಹೆಚ್ಚು ಚಿನ್ನದ ನಿಕ್ಷೇಪವಿಲ್ಲ ಎಂದು ಹೇಳಲಾಗುತ್ತದೆ. ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ಸ್ಥಳ ಬಿಹಾರ. ಜಮುಯಿ ಜಿಲ್ಲೆಯಲ್ಲಿ ಪ್ರಸ್ತುತ 222.8 ಮಿಲಿಯನ್ ಟನ್ ಚಿನ್ನದ ಅದಿರಿನ ನಿಕ್ಷೇಪವಿದೆ ಎಂದು ವರದಿಯಾಗಿದೆ. ಸದ್ಯ ಜಮುಯಿನಲ್ಲಿ ಪರಿಶೋಧನೆ ನಡೆಯುತ್ತಿದೆ.
ವಿಶ್ವಾದ್ಯಂತ ಭೂಗತ ಗಣಿಗಳಿಂದ ಚಿನ್ನವನ್ನು ಗಣಿಗಾರಿಕೆ ಮಾಡಿ ಮಾರಾಟ ಮಾಡಲಾಗುತ್ತದೆ. ಈ ವಿಚಾರದಲ್ಲಿ ಭಾರತವು ಚಿನ್ನದ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ, (ಏಜೆನ್ಸೀಸ್​).