ಅಭಿಜಿತ್ ದೀಪ್ಕೆ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜುಜು ತೀವ್ರ ವಾಗ್ದಾಳಿ 
ದೇಶ

ಅವನ್ಯಾವ ವಿದ್ಯಾರ್ಥಿ ನಾಯಕ? ಅವನೊಬ್ಬ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತ: ಅಭಿಜಿತ್​ ದೀಪ್ಕೆ ವಿರುದ್ಧ ಕಿರಣ್​ ರಿಜುಜು ವಾಗ್ದಾಳಿ! Kiren Rijiju on Abhijit Dipke!

ವಿನಾಯಕ ನಾಯಕ

ಪ್ರಮುಖ ಮುಖ್ಯಾಂಶಗಳು

  • ಅವನ್ಯಾವ ವಿದ್ಯಾರ್ಥಿ ನಾಯಕ? ಅವನೊಬ್ಬ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ!
  • ಜಂತರ್​​-ಮಂತರ್​ನಲ್ಲಿ ನಡೆದಿದ್ದ ನೀಟ್​ ವಿರೋಧಿ ಪ್ರತಿಭಟನೆಗೆ ಸಂಸದರ ಪ್ರತಿಕ್ರಿಯೆ
  • ಅಭಿಜಿತ್ ದೀಪ್ಕೆ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜುಜು ತೀವ್ರ ವಾಗ್ದಾಳಿ
ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ನೀಟ್​​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್​​-ಮಂತರ್​ನಲ್ಲಿ ಪ್ರತಿಭಟನೆ ನಡೆದಿತ್ತು. 

ಸಿಜೆಪಿ ಸ್ಥಾಪಕ ಅಭಿಜಿತ್​ ದೀಪ್ಕೆ ನಾಯಕತ್ವದಲ್ಲಿ ಈ ಹೋರಾಟ ನಡೆದಿದ್ದು, ಕೇಂದ್ರ ಸರ್ಕಾರ ಈ ಪ್ರತಿಭಟೆನೆಗೆ ಬೆಲೆಕೊಟ್ಟು ಪರೀಕ್ಷೆಯಲ್ಲಿ ಅನೇಕ ಬದಲಾವಣೆಯನ್ನು ತಂದಿದೆ.

ಈಗ ಈ ಪ್ರತಿಭಟನೆ ಹಾಗೂ ಅಭಿಜಿತ್​ ದೀಪ್ಕೆ ಬಗ್ಗೆ ಕೇಂದ್ರ ಸಂಸದೀಯ ಸಚಿವ ಕಿರಣ್​ ರಿಜುಜು (Kiren Rijiju on Abhijeet Dipke) ವ್ಯಕ್ತ ಪಡಿಸಿರುವ ಅಭಿಪ್ರಾಯ ಈಗ ಎಲ್ಲಡೆ ವೈರಲ್​ ಆಗುತ್ತಿದೆ. 

ಅವನು ವಿದ್ಯಾರ್ಥಿ ನಾಯಕನೇ ಅಲ್ಲ!

ಇತ್ತೀಚೆಗೆ ಖಾಸಗಿ ಮಾಧ್ಯಮ ಸಂಸ್ಥೆಯೊಂದಿಗೆ ಜಂತರ್​-ಮಂತರ್​ನಲ್ಲಿ ನಡೆದ ಪ್ರತಿಭಟನೆ ಬಗ್ಗೆ ಮಾತನಾಡಿರುವ ಸಂಸದ ಕಿರಣ್​ ರಿಜುಜು, ಆ ಅಭಿಜಿತ್​ ದೀಪ್ಕೆ ವಿದ್ಯಾರ್ಥಿಯೇ ಅಲ್ಲ, ಅವನೊಬ್ಬ ಆಪ್​ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ವಾಗ್ದಾಳಿ ನಡೆಸಿದ್ದಾರೆ. 

ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವುದು, ಹೋರಾಟ ಮಾಡುವುದು ತಪ್ಪಲ್ಲ. ಆದರೆ ಈ ಅಭಿಜಿತ್​ ದೀಪ್ಕೆ ವಿದ್ಯಾರ್ಥಿ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಅವನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ವಿದ್ಯಭ್ಯಾಸ ಮಾಡಿದ್ದು ಅಮೆರಿಕದಲ್ಲಿ, ಈಗ ಹೋರಾಟ ಮಾಡಿದ್ದು ದೆಹಲಿಯಲ್ಲಿ. ಅವನು ಕೇವಲ ಆಮ್​ ಆದ್ಮಿ ಕಾರ್ಯಕರ್ತ, ಅದನ್ನು ಬಿಟ್ಟು ಅವನನ್ನು ವಿದ್ಯಾರ್ಥಿ ನಾಯಕ ಎಂದೆಲ್ಲಾ ಸಂಬೋಧಿಸುವುದು ಸರಿಯಲ್ಲ ಎಂದಿದ್ದಾರೆ. 


AAP ಪ್ರಾಯೋಜಿತ ಪ್ರತಿಭಟನೆ!

ಜಂತರ್​-ಮಂತರ್​ನಲ್ಲಿ ಮೊದಲು ವಿದ್ಯಾರ್ಥಿಗಳೇ ಪ್ರತಿಭಟನೆ ಮಾಡುತ್ತಿದ್ದರು. ನಂತರ ಈ ಬಳಗಕ್ಕೆ ಕೆಲ ದೇಶವಿರೋಧಿ ಶಕ್ತಿಗಳು ಸೇರಿಕೊಂಡವು. ನಂತರ ಈ ಪ್ರತಿಭಟನೆಯನ್ನು ಆಮ್​ ಆದ್ಮಿ ಪಕ್ಷ ಹೈಜಾಕ್​ ಮಾಡಿಕೊಂಡಿತು. 

ಪ್ರತಿಭಟನಾ ವೇದಿಕೆಯನ್ನೇರಿ, ಪ್ರಧಾನಿಗಳಿಗೆ, ಅವರ ಕುಟುಂಬ ವರ್ಗದವರಿಗೆ ಬೈಯುತ್ತಾ, ದೇಶ ವಿಭಜಕ ಶಕ್ತಿಗಳಿಗೆ ಜೈಕಾರ ಹಾಕಲಾಯಿತು. ಆದರೆ ಬಿಜೆಪಿ ಜೆನ್​-ಜೀಗಳ ಆವೇಗ ಮತ್ತು ಆಕ್ರೋಶವನ್ನು ಅರಿಯುವಲ್ಲಿ ಸಫಲವಾದ ಹಿನ್ನಲೆ, ಮಾತುಕತೆ ಮೂಲಕ ಪರಿಹಾರ ಕಂಡುಕೊಂಡಿದ್ದೆವೆ ಎಂದು ರಿಜುಜು ತಿಳಿಸಿದ್ದಾರೆ,

(ಏಜನ್ಸೀಸ್​).