ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನವರಾಣೆ
- ಲೋಕಸಭೆಯಲ್ಲಿ ಮಾಜಿ ಸೇನಾ ಮುಖ್ಯಸ್ಥರ ಆತ್ಮ ಚರಿತ್ರಯನ್ನು ಉಲ್ಲೇಖಿಸಲು ಮುಂದಾದ ರಾಹುಲ್ ಗಾಂಧಿ
- ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನವರಾಣೆ ಅವರ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಎಂಬ ಶೀರ್ಷಿಕೆಯ ಆತ್ಮಚರಿತ್ರೆ
- ಈ ಪುಸ್ತಕದಲ್ಲಿ ಭಾರತ ಮತ್ತು ಚೀನಾ ಗಡಿ ವಿವಾದದ ನೈಜನೆ ಅಡಗಿದೆ ಎಂದು ರಾಹುಲ್ ವಾದ
ನವದೆಹಲಿ: ಸೋಮವಾರ (ಫೆ.2) ಲೋಕಸಭೆಯಲ್ಲಿ ನಡೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಲೇಖನವೊಂದು ಉಲ್ಲೇಖಿಸಲು ಮುಂದಾಗಿದ್ದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
ಸದನದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, 2020ರ ಲಡಾಖ್ ಗಡಿ ಸಂಘರ್ಷದ ಕುರಿತಾದ ಜನರಲ್ ಎಂ.ಎಂ. ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (Four Stars Of Destiny) ಎಂಬ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯ ಲೇಖನವೊಂದನ್ನು ಎತ್ತಿ ತೋರಿಸಿದರು. ಈ ಪುಸ್ತಕದಲ್ಲಿ ಗಲ್ವಾನ್ ಸಂಘರ್ಷದ ಬಗ್ಗೆ ಸ್ಫೋಟಕ ಮಾಹಿತಿ ಇದೆ ಎಂದು ರಾಹುಲ್ ವಾದಿಸಲು ಮುಂದಾದರು. ಈ ಪುಸ್ತಕದ ಕುರಿತು ರಾಹುಲ್ ಗಾಂಧಿ ಮಾತನಾಡಲು ಪ್ರಾರಂಭಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ವಾದ ತಾರಕ್ಕಕ್ಕೇರಿದ ಹಿನ್ನಲೆ ಸಭಾಪತಿ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 3 ಗಂಟೆಯ ವರೆಗೆ ಮುಂದೂಡಿದರು.
ಯಾರು ಈ ಎಂ.ಎಂ. ನವರಾಣೆ?
ಏಪ್ರಿಲ್ 22, 1960 ರಂದು ಪುಣೆಯಲ್ಲಿ ಜನಿಸಿದ ಮನೋಜ್ ಮುಕುಂದ್ ನರವಾಣೆ ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯ ಪುತ್ರ. ಇವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯ (IMA) ಹಳೆಯ ವಿದ್ಯಾರ್ಥಿ. ಇವರು ರಕ್ಷಣಾ ಅಧ್ಯಯನದಲ್ಲಿ ಎಂ.ಫಿಲ್ ಪದವಿಯನ್ನು ಸಹ ಪಡೆದಿದ್ದಾರೆ.
ನರವಾಣೆ ಜೂನ್ 1980 ರಲ್ಲಿ ಸಿಖ್ ಲೈಟ್ ಇನ್‌ಫೆಂಟ್ರಿಯ 7 ನೇ ಬೆಟಾಲಿಯನ್‌ನ ನಿಯೋಜನೆಯೊಂದಿಗೆ ಸೇನಾ ಜೀವನ ಆರಂಭಿಸಿದರು. ನಂತರ ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನ 2 ನೇ ಬೆಟಾಲಿಯನ್ ಮತ್ತು 106 ಇನ್‌ಫೆಂಟ್ರಿ ಬ್ರಿಗೇಡ್‌ಗೆ ಕಮಾಂಡರ್ ಸಹ ಆಗಿದ್ದರು. ನರವಾಣೆ ಈಶಾನ್ಯ ರಾಜ್ಯಗಳಲ್ಲಿ ದಂಗೆ ನಿಗ್ರಹ ಕಾರ್ಯಾಚರಣೆ ಅಸ್ಸಾಂ ರೈಫಲ್ಸ್‌ನ ಕಮಾಂಡರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ಡಿಸೆಂಬರ್ 16, 2019 ರಂದು, ಜನರಲ್ ನರವಾಣೆ ಅವರನ್ನು ಜನರಲ್ ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯಾಗಿ ಘೋಷಿಸಲಾಯಿತು. ಜನರಲ್ ನರ್ವಾಣೆ ಡಿಸೆಂಬರ್ 31, 2019 ರಂದು ಜನರಲ್ ಬಿಪಿನ್ ರಾವತ್ ಅವರಿಂದ COAS ಆಗಿ ಅಧಿಕಾರ ವಹಿಸಿಕೊಂಡ ನಂತರ ಭಾರತೀಯ ಸೇನೆಯ 27 ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು ಡಿಸೆಂಬರ್ 15, 2021 ರಿಂದ ಏಪ್ರಿಲ್ 30, 2022 ರಂದು ನಿವೃತ್ತರಾಗುವವರೆಗೆ ಮುಖ್ಯಸ್ಥರ ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪುಸ್ತಕದಲ್ಲಿ ಏನಿದೆ?
ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ (Four Stars Of Destiny) ಎಂಬ ಶೀರ್ಷಿಕೆಯ ಎಂ.ಎಂ. ನವರಾಣೆ ಅವರ ಆತ್ಮಚರಿತ್ರೆಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಲು ಮತ್ತು ಅಮೆಜಾನ್ ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮುಂಗಡ-ಆರ್ಡರ್‌ಗಳನ್ನು ತೆಗೆದುಕೊಂಡಿವೆ. ಸರ್ಕಾರದ ಅಂತಿಮ ಅನುಮತಿಗಳಿಗಾಗಿ ಕಾಯುತ್ತಿರುವುದರಿಂದ ಇದರ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.
2024 ರಲ್ಲಿ ಪ್ರಕಟಣೆಗೆ ಸಿದ್ಧವಾಗಿದ್ದ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಚರಿತ್ರೆಯ ಕೆಲವು ಆಯ್ದ ಭಾಗಗಳನ್ನು ಡಿಸೆಂಬರ್ 2023 ರಲ್ಲಿ ಸುದ್ದಿ ಸಂಸ್ಥೆ ಮತ್ತು ಹಲವಾರು ಮಾಧ್ಯಮಗಳು ಪ್ರಕಟಿಸಿದ್ದವು. 2019 ರಲ್ಲಿ, ಜನರಲ್ ಮನೋಜ್ ಮುಕುಂದ್ ನರವಾಣೆ ಭಾರತೀಯ ಸೇನೆಯ ಇಪ್ಪತ್ತೆಂಟನೇ ಮುಖ್ಯಸ್ಥರಾದರು. ಜನರಲ್ ನರವಾಣೆ ತಮ್ಮ ಬಾಲ್ಯದಿಂದ ಸೇವೆಯಲ್ಲಿನ ವರ್ಷಗಳವರೆಗೆ ಮತ್ತು ಅದರಾಚೆಗಿನ ತಮ್ಮ ಪಾತ್ರವನ್ನು ರೂಪಿಸಿದ ಅಸಂಖ್ಯಾತ ಅನುಭವಗಳನ್ನು ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.
ಸಿಕ್ಕಿಂನಲ್ಲಿ ಯುವ ಅಧಿಕಾರಿಯಾಗಿ ಚೀನಿಯರೊಂದಿಗಿನ ಅವರ ಮೊದಲ ಭೇಟಿಯಿಂದ ಹಿಡಿದು ಅವರು ಮುಖ್ಯಸ್ಥರಾಗಿದ್ದಾಗ ಗಾಲ್ವಾನ್‌ನಲ್ಲಿ ಅವರೊಂದಿಗೆ ವ್ಯವಹರಿಸುವವರೆಗೆ ಎಲ್‌ಒಸಿಯಾದ್ಯಂತ ಗುಂಡಿನ ದಾಳಿಯ ದೈನಂದಿನ ಘಟನೆಗಳಿಂದ ಹಿಡಿದು ಪಾಕಿಸ್ತಾನದೊಂದಿಗೆ ಕದನ ವಿರಾಮವನ್ನು ಜಾರಿಗೆ ತರುವವರೆಗೆ ಜನರಲ್ ನರವಾಣೆ ಅವರ ನಾಲ್ಕು ದಶಕಗಳ ಕಾಲ ದೇಶದ ಎಲ್ಲಾ ಮೂಲೆಗಳಲ್ಲಿ ಸೇವೆ ಸಲ್ಲಿಸಿದ ತಮ್ಮ ವಿಶಿಷ್ಟ ವೃತ್ತಿಜೀವನದ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿಯಲ್ಲಿ, ಜನರಲ್ ನರವಾಣೆ ಸಾರ್ವತ್ರಿಕ ಅನ್ವಯಿಕತೆಯೊಂದಿಗೆ ನಾಯಕತ್ವ ಮತ್ತು ನಿರ್ವಹಣೆಯ ಕುರಿತು ಪಾಠಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಸಶಸ್ತ್ರ ಪಡೆಗಳನ್ನು ರಾಷ್ಟ್ರೀಯ ಶಕ್ತಿಯ ಹೆಚ್ಚು ಪ್ರಬಲ ಸಾಧನವನ್ನಾಗಿ ಮಾಡಲು ಇನ್ನೇನು ಮಾಡಬೇಕೆಂಬುದರ ಬಗ್ಗೆ ಆಂತರಿಕ ದೃಷ್ಟಿಕೋನವನ್ನು ನೀಡಿದ್ದಾರೆ,(ಏಜನ್ಸೀಸ್).