ಧೋನಿ ಸಿಕ್ಸರ್ ನೆನಪಿಸಿದ ಶಾಸ್ತ್ರಿಗೆ ಏನಾಯ್ತು? ವಿಶ್ವಕಪ್ ಗೆದ್ದ ಸಂಭ್ರಮದ ನಡುವೆ ಭಾರತದ ಮಾಜಿ ಹೆಡ್ಕೋಚ್ ಮಾಡಿದ ಆ ಒಂದು ಬ್ಲಂಡರ್ ಏನು!
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 86 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದು ಇತಿಹಾಸ ಬರೆದಿದೆ. ಆದರೆ, ಈ ಐತಿಹಾಸಿಕ ಕ್ಷಣವನ್ನು ತನ್ನ ಧ್ವನಿಯ ಮೂಲಕ ಅಮರವಾಗಿಸಬೇಕಿದ್ದ ಖ್ಯಾತ ಕಾಮೆಂಟೇಟರ್ ರವಿಶಾಸ್ತ್ರಿ(Ravi Shastri), ಅಂತಿಮ ಕ್ಷಣದಲ್ಲಿ ಮಾಡಿದ ಒಂದು ಎಡವಟ್ಟು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 2011ರ ವಿಶ್ವಕಪ್‌ನಲ್ಲಿ ಧೋನಿ ಫಿನಿಶಸ್ ಆಫ್ ಇನ್ ಸ್ಟೈಲ್ ಎಂದಿದ್ದ ಶಾಸ್ತ್ರಿ, 2026ರಲ್ಲಿ ಸಂಭ್ರಮದ ಮೂಡ್ ಅನ್ನೇ ಸ್ವಲ್ಪಮಟ್ಟಿಗೆ ಕೆಡಿಸಿದರು.
ಏನಿದು ರವಿಶಾಸ್ತ್ರಿ ಮಾಡಿದ ಎಡವಟ್ಟು..?
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಕೊನೆಯ ಹಂತದಲ್ಲಿ, ಅಭಿಷೇಕ್ ಶರ್ಮಾ ಎಸೆತದಲ್ಲಿ ಜೇಕಬ್ ಡಫಿ ಕ್ಯಾಚ್ ನೀಡಿ ಔಟಾದರು. ಇದು ನ್ಯೂಜಿಲೆಂಡ್ ತಂಡದ 10ನೇ ವಿಕೆಟ್ ಆಗಿತ್ತು ಮತ್ತು ಭಾರತದ ಗೆಲುವು ಖಚಿತವಾಗಿತ್ತು. ಇಡೀ ಸ್ಟೇಡಿಯಂ ಸಂಭ್ರಮದಲ್ಲಿ ಮುಳುಗಿದ್ದಾಗ ಮೈಕ್ ಹಿಡಿದಿದ್ದ ರವಿಶಾಸ್ತ್ರಿ, ಟೇಕನ್ ಇನ್ ದಿ ಡೀಪ್, ಒಂಬತ್ತನೇ ವಿಕೆಟ್ ಪತನ ಎಂದು ಕೂಗಿದರು.
ವಾಸ್ತವವಾಗಿ ಅದು ನ್ಯೂಜಿಲೆಂಡ್‌ನ ಕೊನೆಯ ವಿಕೆಟ್ ಆಗಿತ್ತು. ತಾನು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆ ತಕ್ಷಣ ತಿದ್ದಿಕೊಂಡ ಶಾಸ್ತ್ರಿ, ಎಲ್ಲವೂ ಮುಗಿದಿದೆ, ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿದೆ ಎಂದು ಮಾತು ಮುಂದುವರಿಸಿದರು. ಆದರೆ, ಅಷ್ಟರಲ್ಲೇ ಅಭಿಮಾನಿಗಳು ಶಾಸ್ತ್ರಿ ಅವರ ಈ ಎಪಿಕ್ ಫೇಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಶುರು ಮಾಡಿದ್ದರು.
ಭಾರತಕ್ಕೆ ಹ್ಯಾಟ್ರಿಕ್ ಐಸಿಸಿ ಟ್ರೋಫಿ ಸಂಭ್ರಮ
ರವಿಶಾಸ್ತ್ರಿ ಅವರ ಕಾಮೆಂಟರಿ ಏನೇ ಇರಲಿ, ಮೈದಾನದಲ್ಲಿ ಟೀಮ್ ಇಂಡಿಯಾ ತೋರಿದ ಪ್ರದರ್ಶನ ಮಾತ್ರ ಅದ್ಭುತವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಭಾರತ ಗೆಲ್ಲುತ್ತಿರುವ ಮೂರನೇ ಐಸಿಸಿ ಟ್ರೋಫಿ ಇದಾಗಿದೆ.
2024 ಟಿ20 ವಿಶ್ವಕಪ್: ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಾರ್ಬಡೋಸ್‌ನಲ್ಲಿ ಗೆಲುವು.
ಚಾಂಪಿಯನ್ಸ್ ಟ್ರೋಫಿ: ನ್ಯೂಜಿಲೆಂಡ್ ಸೋಲಿಸಿ ಎರಡನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ.
2026 ಟಿ20 ವಿಶ್ವಕಪ್: ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಯೊಂದಿಗೆ ಹ್ಯಾಟ್ರಿಕ್ ಸಾಧನೆಯಾಗಿದೆ.
ಬುಮ್ರಾ ಬೆಂಕಿಯಂತ ದಾಳಿ: ಗಂಭೀರ್ ಮಾಸ್ಟರ್ ಪ್ಲಾನ್
ಪಂದ್ಯದ ಹೀರೊ ಆಗಿ ಹೊರಹೊಮ್ಮಿದ್ದು ಜಸ್ಪ್ರೀತ್ ಬುಮ್ರಾ. ಕೇವಲ 15 ರನ್ ನೀಡಿ 4 ವಿಕೆಟ್ ಕಿತ್ತ ಬುಮ್ರಾ, ಕಿವೀಸ್ ಬ್ಯಾಟರ್‌ಗಳನ್ನು ಅಕ್ಷರಶಃ ನಡುಗಿಸಿದರು. ಪಂದ್ಯದ ನಂತರ ಮಾತನಾಡಿದ ಹೆಡ್ ಕೋಚ್ ಗೌತಮ್ ಗಂಭೀರ್, ನಾನು ಯಾರಿಂದಲೂ ಏನನ್ನೂ ಪಡೆದುಕೊಳ್ಳಲು ಬಂದಿಲ್ಲ, ಹೊಸದನ್ನು ಸೃಷ್ಟಿಸಲು ಬಂದಿದ್ದೇನೆ. ಭಯವಿಲ್ಲದ ಕ್ರಿಕೆಟ್ ಆಡುವ ಬ್ರ್ಯಾಂಡ್ ಅನ್ನು ನಾವು ಸೃಷ್ಟಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್‌ನ ಈ ಸುವರ್ಣ ಯುಗವು ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ರವಿಶಾಸ್ತ್ರಿ ಅವರ ಸಣ್ಣ ಎಡವಟ್ಟನ್ನು ಹೊರತುಪಡಿಸಿದರೆ, ಅಹಮದಾಬಾದ್‌ನ ಆ ರಾತ್ರಿ ಭಾರತೀಯ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ,(ಏಜೆನ್ಸೀಸ್).