ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂದ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ಆಕ್ರೋಶ 
ದೇಶ

ಪಾಸ್​ಪೋರ್ಟ್​ ಬಿಟ್ಟು ಇನ್ನೇನು ತೋರಿಸಬೇಕು? ಇದು ಸಚಿವಾಲಯದ ಅಸಂಬದ್ಧ ಹೇಳಿಕೆ: ವಿದೇಶಾಂಗ ಇಲಾಖೆ ವಿರುದ್ಧ ಜಾವೇದ್​ ಅಖ್ತರ್​ ಆಕ್ರೋಶ! Javed Akhtar on Indian Passport

ಪ್ರಮುಖ ಮುಖ್ಯಾಂಶಗಳು

  • "ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ" ಎಂದ ವಿದೇಶಾಂಗ ಸಚಿವಾಲಯ
  • ಸಚಿವಾಲಯದ ಹೇಳಿಕೆಗೆ ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ತೀವ್ರ ಆಕ್ರೋಶ
  • ವಿದೇಶಾಂಗ ಇಲಾಖೆಯ ಹೇಳಿಕೆಯನ್ನು 'ಅಸಂಬದ್ಧ' ಎಂದ ಜಾವೇದ್ ಅಖ್ತರ್
ಬಾಲಿವುಡ್​: ಕೇವಲ ಭಾರತದ ಪಾರ್ಸ್​ಪೋರ್ಟ್​ ಇದ್ದ ಮಾತ್ರಕ್ಕೆ ಎಲ್ಲರೂ ಭಾರತದ ಪೌರತ್ವ ಹೊಂದಿದ್ದಾರೆಂದಲ್ಲ, ಪಾಸ್​ಪೋರ್ಟ್​ ಕೇವಲ ಒಂದು ಪ್ರಯಾಣದ ದಾಖಲೆಯಷ್ಟೇ ಎಂದು ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಸ್ಪಷ್ಟಪಡಿಸಿದೆ.
ಸಚಿವಾಲಯದ ಈ ಹೇಳಿಕೆಗೆ ಹಲವೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಬಾಲಿವುಡ್​ನ ಖ್ಯಾತ ಗೀತರಚನಕಾರರಾದ ಜಾವೇದ್​ ಅಖ್ತರ್​ (Javed Akhtar on Indian Passport) ಈ ಹೇಳಿಕೆಯನ್ನು ಕಠುವಾಗಿ ಟೀಕಿಸಿದ್ದಾರೆ.

ಇದು ಅಸಂಬದ್ಧ ಹೇಳಿಕೆ!

ಇದೇಶಾಂಗ ಸಚಿವಾಲಯ ಪಾಸ್​ಪೋರ್ಟ್​ ಕೇವಲ ಪ್ರಯಾಣದ ದಾಖಲೆಯೇ ಹೊರತು ಭಾರತದ ಪೌರತ್ವ ದಾಖಲಾತಿ ಅಲ್ಲ ಎಂದಿದ್ದಕ್ಕೆ ಜಾವೇದ್​ ಅಖ್ತರ್​ ಗರಂ ಆಗಿದ್ದಾರೆ.
ಈ ಕುರಿತು ಟ್ವಿಟರ್​ (ಎಕ್ಸ್​) ಖಾತೆಯಲ್ಲಿ ಬರೆದುಕೊಂಡಿರುವ ಜಾವೇದ್​ ಅಖ್ತರ್​, ವಿದೇಶಾಂಗ ಸಚಿವಾಲಯ ಪಾಸ್​ಪೋರ್ಟ್​ ಕೇವಲ ಪ್ರಯಾಣದ ದಾಖಲೆಯೇ ಹೊರತು ಪೌರತ್ವದ ಪುರಾವೆಯಲ್ಲ ಎಂದು ಹೇಳಿದೆ. ಹಾಗಾದರೇ ಈ ವ್ಯಕ್ತಿ ಭಾರತದ ಪ್ರಜೆ ಎಂದು ಮನವರಿಕೆ ಆಗದೆ ಪಾಸ್​ಪೋರ್ಟ್​ನ್ನು ಹಂಚಲಾಗಿದೆಯೇ? ಇದು ಸಚಿವಾಲಯದ ಅಸಂಬದ್ಧ ಹೇಳಿಕೆ ಎಂದು ಅವರು ಬರೆದುಕೊಂಡಿದ್ದಾರೆ.
ಜಾವೇದ್​ ಅಖ್ತರ್​ ಅವರ ಈ ಟ್ವಿಟ್​ಗೆ ನೆಟ್ಟಿಗನೊಬ್ಬ ಪಾಸ್​ಪೋರ್ಟ್​, ಪಾನ್​ ಕಾರ್ಡ್​, ಆಧಾರ್​ ಕಾರ್ಡ್​, ಮತದಾರರ ಚೀಟಿ ಇವು ಯಾವುದು ಭಾರತದ ಪೌರತ್ವದ ಪುರಾವೆಗಳಲ್ಲ. ಏಕೆಂದರೆ ಇವೆಲ್ಲಾ ಅಕ್ರಮ ಬಾಂಗ್ಲಾ ವಲಸಿಗರ ಬಳಿ ಸಹ ಇದೆ ಎಂದು ಕೌಂಟರ್​ ಕೊಟ್ಟಿದ್ದಾನೆ.
ನೆಟ್ಟಿಗನ ಕಮೆಂಟ್​ಗೆ ಪ್ರತಿಕ್ರಿಯೆ ನೀಡಿರುವ ಅಖ್ತರ್​, ಇಷ್ಟು ವರ್ಷದಿಂದ ಅಧಿಕಾರದಲ್ಲಿದ್ದವರು ಏನು ಮಾಡುತ್ತಿದ್ದಾರೆ. ಇಷ್ಟು ಸುರಿಕ್ಷಿತವಾಗಿರುವ ದಾಖಲೆಗಳು ಅಕ್ರಮ ವಲಸಿಗರ ಕೈಗೆ ಹೇಗೆ ತಲುಪುತ್ತಿದೆ? ಯಾವುದು ಅಸಲಿ? ಯಾವುದು ನಕಲಿ ಎಂದು ಹೇಗೆ ಪತ್ತೆ ಹಚ್ಚಲಾಗುತ್ತಿದೆ? ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಪಾಸ್​ಪೋರ್ಟ್​ ಪೌರತ್ವದ ಪುರಾವೆಯಲ್ಲ!

ಭಾರತೀಯ ಪಾಸ್‌ಪೋರ್ಟ್ ಕೇವಲ ಒಂದು ಪ್ರಯಾಣದ ದಾಖಲೆಯಾಗಿದ್ದು ಇದನ್ನು ಪೌರತ್ವದ ನಿರ್ಣಾಯಕ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ದೇಶದ ಪಾಸ್​ಪೋರ್ಟ್​ಗಳು ಹಾಗೂ ಜಾಗತಿಕ ಚಲನಶೀಲತೆಯ ಸುಧಾರಣೆಗಳ ಕುರಿತು ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.
ಪಾಸ್‌ಪೋರ್ಟ್‌ಗಳನ್ನು ಭಾರತೀಯ ನಾಗರಿಕರಿಗೇ ನೀಡಲಾಗುತ್ತದೆಯಾದರೂ, ಈ ದಾಖಲೆಯ ಮುಖ್ಯ ಉದ್ದೇಶ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುವುದು ಮತ್ತು ವಿದೇಶಗಳಲ್ಲಿ ಗುರುತನ್ನು ಸ್ಥಾಪಿಸುವುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಿಂದ ದೇಶಾದ್ಯಂತ ಬಯೋಮೆಟ್ರಿಕ್ ಮಾಹಿತಿ ಒಳಗೊಂಡ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುತ್ತಿದ್ದು, ಇದು ನಕಲಿ ಪಾಸ್‌ಪೋರ್ಟ್ ತಡೆಯಲು ನೆರವಾಗುತ್ತಿದೆ.
ದೇಶಾದ್ಯಂತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆ 545ಕ್ಕೆ ಏರಿಕೆಯಾಗಿದ್ದು, 2027ರ ವೇಳೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಕೇಂದ್ರವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೆವೆ.ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 10 ರಷ್ಟು ಜನರು ಮಾತ್ರ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್​).