ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ 
ದೇಶ

ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ!': ಪ್ರಧಾನಿ ಮೋದಿಗೆ ಆತ್ಮೀಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ | Giorgia Meloni

ರೋಮ್: ಪ್ರಧಾನಿ ನರೇಂದ್ರ ಮೋದಿ ಐದು ವಿದೇಶಗಳ ಪ್ರವಾಸದ ಕೊನೆಯ ಹಂತವಾಗಿ ಮಂಗಳವಾರ(ಮೇ 19) ರೋಮ್‌ಗೆ ಬಂದಿಳಿದಿದ್ದು, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ(Giorgia Meloni) ಅವರಿಂದ ಆತ್ಮೀಯ ಸ್ವಾಗತ ಪಡೆದಿದ್ದಾರೆ. ಎಕ್ಸ್​ನಲ್ಲಿ ಇಬ್ಬರ ಸೆಲ್ಫಿ ಪೋಟೋ ಜೊತೆಗೆ ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ! ಎಂದು ಪ್ರಧಾನಿ ಮೆಲೋನಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಮೆಲೋನಿಯ ಫೋಟೋ ತೆಗೆದ ಸ್ಥಳ ಮೂಲತಃ ಫ್ಲೇವಿಯನ್ ಆಂಫಿಥಿಯೇಟರ್ ಎಂದು ಕರೆಯಲ್ಪಡುವ ಕೊಲೊಸಿಯಮ್ ಅನ್ನು ತೋರಿಸುತ್ತದೆ. ಇದು ರೋಮ್‌ನ ಮಧ್ಯಭಾಗದಲ್ಲಿರುವ ಬೃಹತ್ ಕಲ್ಲಿನ ಅಂಡಾಕಾರವಾಗಿದ್ದು, ಹಿನ್ನೆಲೆಯಲ್ಲಿ ಪ್ರಕಾಶಿಸಲ್ಪಟ್ಟಿದೆ. ಇಬ್ಬರು ವಿಶ್ವದ ನಾಯಕರ ಈ ಫೋಟೋ ಸಾಮಾಜಿಕ ಜಾಲತಾಣಲ್ಲಿ ಭಾರಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಸಹ ಮೆಲೋನಿ ಅವರ ಜೊತೆಗೆ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದು, ಗಮನ ಸೆಳೆದಿವೆ. ಅವರು ರೋಮ್‌ಗೆ ಬಂದಿಳಿದ ನಂತರ, ಮೆಲೋನಿ ಜೊತೆ ಔತಣಕೂಟದಲ್ಲಿ ಭಾಗವಹಿಸಿದ್ದಾರೆ. ಬಳಿಕ ಕೊಲೋಸಿಯಮ್‌ಗೆ ಭೇಟಿ ನೀಡಿದ್ದಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮುಂದುವರೆದು ನಾವು ವಿವಿಧ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡೆವು. ಇಂದಿನ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ, ಅಲ್ಲಿ ಭಾರತ-ಇಟಲಿ ಸ್ನೇಹವನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ನಾವು ಸಂವಾದವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಇಟಲಿಯಲ್ಲಿ ಪ್ರಧಾನಿ ಇಂದು ಅಧ್ಯಕ್ಷ ಸೆರ್ಗಿಯೊ ಮ್ಯಾಟರೆಲ್ಲಾ ಅವರನ್ನು ಭೇಟಿ ಮಾಡಲಿದ್ದಾರೆ, ಬಳಿಕ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇತರ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಭಾರತಕ್ಕೆ ವಾಪಾಸ್ ಆಗಲಿದ್ದಾರೆ (ಏಜೆನ್ಸೀಸ್).